ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನೋಡಿದೆ ಗುರುಗಳ ನೋಡಿದೆ ಪ ನೋಡಿದೆನು ಗುರುರಾಘವೇಂದ್ರರ ಮಾಡಿದೆನು ಭಕುತಿಯಲಿ ವಂದನೆ ಬೇಡಿದೆನು ಕೊಂಡಾಡಿ ವರಗಳ ಈಡು ಇಲ್ಲದೆ ಕೊಡುವ ಗುರುಗಳಅ.ಪ ಗಾಂಗೇಯ ಶಯ್ಯಜನು ಈ ನದಿಯ ತೀರದಲ್ಲಿ ಯಾಗವ ಮುದದಿ ರಚಿಸಿ ಪೂರೈಸಿ ಪೋಗಿರ ಲದನು ತಮ್ಮೊಳು ತಿಳಿದು ತವಕದಿ ಹೃದಯ ನಿರ್ಮಲರಾಗಿ ರಾಗದಿ ಬುಧಜನರ ಸಮ್ಮೆಳದಲಿ ಸಿರಿ ವದನನಂಘ್ರಿಯ ತಿಳಿದು ನೆನೆವರ ಉದಿತ ಭಾಸ್ಕರನಂತೆ ಪೊಳೆವರ 1 ಆಲವಬೋಧ ಮಿಕ್ಕಾದ ಮಹಮುನಿ ಗಳು ಸಅಂಶರು ಒಂದು ರೂಪದಿ ನೆಲೆಯಾಗಿ ನಿತ್ಯದಲಿ ಇಪ್ಪರು ಒಲಿಸಿಕೊಳುತಲಿ ಹರಿಯ ಗುಣಗಳ ತಿಳಿದು ತಿಳಿಸುತ ತಮ್ಮ ತಮಗಿಂ ರಧಿಕರಿಂದುಪದೇಶ ಮಾರ್ಗದಿ ಕಲಿಯುಗದೊಳು ಕೇವಲ ಕ ತ್ತಲೆಯ ಹರಿಸುವ ಸೊಬಗ ಸಂತತ 2 ರಾಮ ನರಹರಿ ಕೃಷ್ಣ ಕೃಷ್ಣರ ನೇಮದಿಂದೀ ಮೂರ್ತಿಗಳ ಪದ- ತಾಮರಸ ಭಜನೆಯನು ಮಾಳ್ಪರು ಕೋಮಲಾಂಗರು ಕಠಿನಪರವಾದಿ ಸ್ತೋಮಗಳ ಮಹಮಸ್ತಕಾದ್ರಿಗೆ ಭೂಮಿಯೊಳು ಪವಿಯೆನಿಸಿದ ಯತಿ ಯಾಮ ಯಾಮಕೆ ಎಲ್ಲರಿಗೆ ಶುಭ ಕಮಿತಾರ್ಥವ ಕರೆವ ಗುರುಗಳ 3 ನೂರು ಪರ್ವತ ವರುಷ ಬಿಡದಲೆ ಚಾರು ವೃಂದಾವನದಲಿ ವಿ ಸ್ತಾರ ಆರಾಧನೆಯು ತೊಲಗದೆ ವಾರವಾರಕೆ ಆಗುತ್ತಿಪ್ಪುದು ಸಾರೆ ಕಾರುಣ್ಯದಲಿ ಲಕುಮೀ ನಾರಾಯಣ ತಾ ಚಕ್ರರೂಪದಿ ಸಾರಿದವರಘವ ಕಳೆದು ಇವರಿಗೆ ಕೀರುತಿಯ ತಂದಿಪ್ಪುದನುದಿನ4 ಮಿತವು ಎನದಿರಿ ಇಲ್ಲಿ ದಿನ ದಿನ- ಕತಿಶಯದೆ ಆಗುವುದು ಭೂಸುರ ತತಿಗೆ ಭೋಜನ ಕಥಾಶ್ರವಣ ಭಾ- ರತ ಪುರಾಣಗಳಿಂದಲೊಪ್ಪುತ ಕ್ಷಿತಿಯೊಳಗೆ ಮಂಚಾಲೆ ಗ್ರಾಮಕೆ ವ್ರತಿಯ ಇಲ್ಲವೆಂದೆನಿಸಿಕೊಂಬುದು ಪತಿತಪಾವನ ವಿಜಯವಿಠಲನ ತುತಿಸಿಕೊಳ್ಳುತ ಮೆರೆವ ಗುರುಗಳ 5
--------------
ವಿಜಯದಾಸ
ಮನವೆ ಮಾನ್ಯನ ಮನ್ನಿಸು ಶ್ರೀವ್ಯಾಸ ಮುನಿಗೆ ಒಲಿದಿಹ ವಾಯು ನಾ ಪ ಪ್ರತಿ ಸಂಚರ ಕಾಲದಿ ಅವಿಲೀನ ಮತಿಯುಳ್ಳ ದೇವನಿವನು ಸುತ ಜಯಾದೇವಿಗೀತ ತನ್ನ ಸರಿ ಚತುರಾಸ್ಯ ದೇಹದೊಳಿಹ 1 ಚತುರವಿಂಶತಿ ತತ್ವಕೆ ಅಭಿಮಾನಿ ಮತಿಯುಳ್ಳ ಸೂತ್ರನಾಮ ಹರಿರೂಪ ಮಿತಿ ಇಲ್ಲದಲೆ ಕಾಂಬನೊ 2 ಯತಿಯಾಗಿ ಬಂದು ಹರಿಯ ಕಾರ್ಯಗಳ ಕೃತಿಸಿ ತಾ ನಿಂದು ವ್ಯಾಸ ವ್ರತಿಯಿಂದ ಮಾಡಿಸಿದ ಈತಗೆ ಪತಿ ವಾಸುದೇವವಿಠಲ3
--------------
ವ್ಯಾಸತತ್ವಜ್ಞದಾಸರು
ಶಂಭು ಸ್ವಯಂಭುಗಳ ಹೃದಂಬರಕಿಂದು-ಬಿಂಬದಂತಿಹ ಕಂಬುಧರನ ನಂಬು ಮನುಜಡಂಬ ಮತವ ಹಂಬಲಿಸದೆ ಪ. ಕೃದ್ಧ ಖಳರ ಗೆದ್ದು ವೇದವೇದ್ಯವೆನಿಪ ಶುದ್ಧಸುಧೆಯಉದ್ಧರಿಸಿದ ಮಧ್ವಮುನಿ ಪ್ರಸಿದ್ಧವರಗೆ ಊಧ್ರ್ವಹರಿಯಹೊದ್ದಿ ಬದುಕು ಊಧ್ರ್ವಪುಂಡ್ರ ಶ್ರೀಮುದ್ರೆಯನ್ನುಸದ್ವ್ರತಿಯಾಗು ವೃದ್ಧರಂಘ್ರಿಪದ್ಮಕೆರಗು ಕದ್ಯಕರಗದಾದ್ವವ (?) ಬಿಡು 1 ವಿತ್ತ ಪುತ್ರಮಿತ್ರರರ್ಥಿಗೆ ಸುತ್ತ ತಿರುಗುತಿರದೆತೀರ್ಥಕ್ಷೇತ್ರಯಾತ್ರೆಗಳನು ಹೊತ್ತು ಹೊತ್ತಲಿ ವರ್ತಿಸುತಿರುಭಕ್ತರೆ ನಿನ್ನ ಮಿತ್ರರು ಹರಿಭಕ್ತಿಯ ನಿನಗಿತ್ತು ಮತ್ತೆಮುಕ್ತಿಪಥವ ಹತ್ತುವ ಸಂಪತ್ತ ನಿನ್ನತ್ತ ಮಾಡು 2 ಕೋಪವ ಕಳೆ ತಾಪವ ತಾಳು ಪಾಪದ ಬಲು ಲೇಪಕಂಜುಭೂಪರ ಸೇವೆ ಆಪತ್ತಿಹುದು ತಾಪಸರ ಸಮೀಪವ ಸೇರುಶ್ರೀಪತಿ ಹಯವದನನ ಪದದೀಪದ ಬೆಳಕಿನಲಿ ವಿಷಯಕೂಪವ ಕಳೆದಾಪರಮನಲಿ ಪರಸೇವೆಲಾ [ಪೂ]ರನಾಗು 3
--------------
ವಾದಿರಾಜ