ಪೊರೆದ್ಯಾಕೋ ಸೀತಾನಾಥ
ತಂದೆ ಮಂದರಧರ ಎನ್ನೊಳ್ದಯ
ಮಾಡಲೊಲ್ಲ್ಯಾಕೋ ಸೀತಾನಾಥ ಪ
ಕರಿರಾಜ ನಿಮ್ಮಯ ಚರಣ ಸರೋಜಕ್ಕೆ ಸೀತಾನಾಥ
ಹರಿ ಬರೆದೋಲೆ ನಿನ್ನನು ಕರೆಕಳುಹಿದನೇನೊ ಸೀತಾನಾಥ
ತರುಣಿ ದ್ರೌಪದಿ ತನ್ನ ಅವಮಾನಕಾಲಕ್ಕೆ ಸೀತಾನಾಥ
ಸಿರಿವರ ನಿನ್ನ್ವೊಯ್ಕುಂಠಕೆ ತಾರು ಕೊಟ್ಟಿರ್ದಳೇ ಸೀತಾನಾಥ 1
ಕಂಬದಿ ಬಾರೆಂದಂಬುಧಿಗೆ ಬಂದ್ಹೇಳ್ದನೇ ಸೀತಾನಾಥ
ಡೊಂಬೆ ಮಾಡುವ ದೂರ್ವಾಸಮುನಿಯಂದು ಸೀತಾನಾಥ
ನಿನ್ನ ಬೆಂಬಲಿಟ್ಟು ಅಂಬರೀಷ ವ್ರತಗೈದನೇ ಸೀತಾನಾಥ 2
ವರಧ್ರುವ ಧರೆಯೊಳು ಜನಿಸುವ ಕಾಲಕ್ಕೆ ಸೀತಾನಾಥ ದೇವ
ಕರವ ಪಿಡಿದು ನಿಮ್ಮ ಜೊತೆಲಿ ಕರೆತಂದನೇ ಸೀತಾನಾಥ
ಪರಮಪಾಪಿ ಅಜಮಿಳನಗೆ ಪದವಿಯು ಸೀತಾನಾಥ ದೇವ
ಕರುಣಿಸಿದವನಿನಗೆ ನೆರವಾಗಿರ್ದನೇನೊ ಸೀತಾನಾಥ 3
ಛಲದ ರಾವಣನಳಿದು ವರವಿಭೀಷಣನಿಗೆ ಸೀತಾನಾಥ
ಲಂಕ ಕರುಣಿಸಿ (ದಿವೈಕುಂ) ಠ ಬಾಗಿಲೊಳಿರ್ದನೇ ಸೀತಾನಾಥ
ಸೀತಾನಾಥ ಅವ
ಇಳೆಯೊಳು ನಿಮಗೆ ಪಕ್ಷದ ಗೆಳೆಯನೆ ಸೀತಾನಾಥ 4
ಹಿಂದಿನ ಹಿರಿಯರವರನು ದುರಿತದಿಂ ಸಲಹಿದಿ ಸೀತಾನಾಥ ಇದು
ಚೆಂದವೆ ನಿನಗೆ ಕಂದನ ಬಿಡುವುದು ಸೀತಾನಾಥ
ಕಂಟಕ ಬೇಗ ಬಯಲ್ಹರಿಸಯ್ಯ ಸೀತಾನಾಥ ರಂಗ
ಸಿಂಧುಶಯನ ಮಮ ತಂದೆಯೇ ಶ್ರೀರಾಮ ಸೀತಾನಾಥ 5