ರಘುವರ್ಯ ಕರಜಾತ ಶ್ರೀ | ರಘೋತ್ತಮ ತೀರ್ಥಾ ಪ
ಅಘಹರ ಶ್ರೀ ರಾಮ ಪದ ಭಜಕ ನೇಮಾ ಅ.ಪ.
ಪ್ರವಚನಾಚಾರ್ಯರಿಂ | ದವಮಾನ ತಡೆಯದಲೆಸವನ ಮೂರರ ಮೇಲೆ | ಪವಡಿಸಿರೆ ತಾನೂ |ಪವನ ಪಿತ ತೈಜಸನು | ಗುರುವರರ ರೂಪಿನಲಿಪ್ರವಚಿಸೆನೆ ನ್ಯಾಯ ಸುಧೆ | ಪ್ರವಚಿಸಿದ ಮಹಿಮಾ 1
ಪ್ರಮೆಯ ದೀಪಿಕೆ ತತ್ವ | ಅಮಮ ಬೃಹದಾರಣ್ಯಸುಮನ ವ್ಯಾಹರಣೆಯನು | ನೀ ಮಾಡಿ ಮುದದೀ |ಕಮಲನಾಭನ ಮಹಿಮೆ | ಅಮೃತವನು ತೆಗೆಯುತಲಿಸುಮನಸರಿಗುಣಿಸಿದೆಯೋ | ರಾಮ ಪದ ಭಜಕಾ 2
ತತುವನ್ಯಾಸವ ಮಾಡೆ | ತತ್ವ ದೇವತೆಗಳನುತತುತತೂ ರೂಪದಲಿ | ಸತತ ನೋಡುವನೇ |ಕ್ಷಿತಿಪತಿ ಶ್ರೀ ಗುರೂ | ಗೋವಿಂದ ವಿಠ್ಠಲನೆಉತ್ತಮೋತ್ತಮನೆನುತ | ಬಹು ಮೆರೆಸಿದಾತ 3