ವೃಂದಾವನದಲಿ ನಿಂದಿಹನ್ಯಾರೆ ಪೇಳಮ್ಮಯ್ಯ ಪ
ಕುಂದು ರಹಿತ ಬಹು ಸುಂದರ ಹರಿಪದದ್ವಂದ್ವ ಭಜಕ ಯತಿ ಪುಂಗ ಕಾಣಮ್ಮ ಅ.ಪ.
ಮಂಗಳ ಪಂಪಾ ಕ್ಷೇತ್ರ ಸನಿಯ ಮುನಿಪುಂಗರು ಯಾರೇ ಪೇಳಮ್ಮಯ್ಯ |ಅಂಗಜನನು ಬಲು ಹಿಂಗಳೆಧರಿ ಪದಭೃಂಗರೇನಿಪರ್ಯಾರೇ ಪೇಳಮ್ಮಯ್ಯ |ತುಂಗಭದ್ರ ಸುತರಂಗಿಣಿ ಮಧ್ಯಗಮಂಗಳಾಂಗ ವ್ಯಾಸೇಂದ್ರ ಕಾಣಮ್ಮ 1
ಮಾಯಾಮತ ವಿಧ್ವಂಸಕರೆನಿಸುವನ್ಯಾಯಾಮೃತ ರಚಕರ ನೋಡಮ್ಮಮ್ಮ |ಸಾಯಣಾದಿ ಕುಭಾಷ್ಯದಲಿಹ ಅನ್ಯಾಯವ ಜರಿದ ನೋಡಮ್ಮಮ್ಮ |ಕಾಯಜ ಪಿತನನ ಹೇಯನೆಂದು ಬಹುಗಾಯನ ಮಾಡ್ದ ಮಹಾತ್ಮ ಕಾಣಮ್ಮ 2
ಪದುಮನಾಭ ಕವೀಂದ್ರ ವಾಗೀಶರಮಧ್ಯದಲಿಹರ ನೀ ನೋಡಮ್ಮಯ್ಯ |ಸುಧೀಂದ್ರ ಶ್ರೀನಿವಾಸರು ರಾಮತೀರ್ಥರಮಧ್ಯದಲಿಹರ ನೀ ನೋಡಮ್ಮಯ್ಯ |ಯದುರಿಲಿ ಪ್ರಾಣ ಸುಪಾಶ್ರ್ವದಿ ರಘುವರ್ಯಗೋವಿಂದ ತೀರ್ಥರ ನೋಡಮ್ಮಮ್ಮ 3
ಆರು ಕೋಣೆಗಳ ಮೇಲಾಕಾರ್ವೊಲಯದಿ ಧೀರ ವಾನರರಾ ನೋಡಮ್ಮಯ್ಯಮೂರು ಕೋಟಿ ಜಪದಾಧಾರದಿ ಸಮೀರ ನಿಂದಿಹ ನೋಡಮ್ಮಯ್ಯ |ಧೀರ ನಿಲಿಸಿದಾಧಾರ ಭಕ್ತಿ ಯಂತ್ರೋದ್ಧಾರರ ನೀ ನೋಡಮ್ಮಮ್ಮ 4
ಬೋಧ ಗುರು ಗೋವಿಂದ ವಿಠಲನಪಾದ ಸೇವಕ ವ್ಯಾಸಾರ್ಯ ಕಾಣಮ್ಮ 5