ಶಿಷ್ಟ ಜನರುಗಳಿಗೆ ಸತತ ಇಷ್ಟಾರ್ಥಗಳನೆ ಕೊಡುವ
ಬೈಷ್ಮೀಸತ್ಯಾಸಮೇತ ಕೃಷ್ಣ ನಿನಗೆ ಮಂಗಳಂಪ
ಸರ್ವಶಾಸ್ತ್ರಾರ್ಥಗಳನರಿತು ದುರ್ವಾದಿ ಮತವನಳಿದ
ಸರ್ವಜ್ಞಾಚಾರ್ಯ ಪೂಜಿತ ಕೃಷ್ಣ ನಿನಗೆ ಮಂಗಳಂ 1
ಲೇಸಾಗಿ ಮಧ್ವಶಾಸ್ತ್ರವ ಭೂಸುರರಲಿ ಅರುಹಿದ
ವ್ಯಾಸಾರ್ಯವರಕರಾರ್ಚಿತ ಕೃಷ್ಣ ನಿನಗೆ ಮಂಗಳಂ 2
ಘನ್ನ ಶ್ರೀ ವ್ಯಾಸಯತಿಗಳ ಉನ್ನತ ಪೀಠಪತಿಗಳಿಂ
ಚೆನ್ನಾಗಿ ಪೂಜಿಗೊಂಬ ಪ್ರಸನ್ನÀ ಕೃಷ್ಣಗೆ ಮಂಗಳಂ 3