ನಿನ್ನ ನಂಬಿದೆನೊ ಬ್ರಹ್ಮಣ್ಯತೀರ್ಥಾರ್ಯಾ
ಸನ್ನುತಚರಣಪಾವನ ಸುಚರ್ಯಾ ಪ
ಘನ್ನ ಭವದ ಭಯವನ್ನು ಕಳೆದು ಯತಿ
ರನ್ನ ಎನ್ನನು ಧನ್ಯನ ಮಾಡೋ ಅ.ಪ.
ಪುರುಷೋತ್ತಮ ಸುತೀರ್ಥರ ಪ್ರಿಯ ಸುಕುಮಾರ
ದುರಿತೌಘಜೀಮೂತ ಚಂಡ ಸಮೀರ
ಸುರುಚಿರ ತುಳಸಿ ಪಂಕಜಮಣಿಹಾರ
ಧರಿಸಿ ಮೆರೆವೊ ದಿನಕರನವತಾರ
ಕರುಣದಿ ತವ ಶ್ರೀಕರಚರಣಾಂಬುಜ
ದರುಶನವನು ಕೊಡು ಗುಣಗಣನಿಧಿಯೇ 1
ಸೇವಕಜನರಿಗೆ ದೇವತರುವೆನಿಪ
ಶ್ರೀವಿಠಲನಪಾದತಾವರೆ ಮಧುಪ
ಕೋವಿದ ಜನರು ಸಂಭಾವಿಸಿ ಸ್ತುತಿಪ
ಪಾವನ್ನ ಪಾದಾರ್ಚಿತ ಭಾವಜ ಮುನಿಪ
ಪಾವನ ಸುಮತರ ಜೀವರ ಚಂದ್ರನೆ
ಪಾವನ ಮತಿ ಕೊಡು ನೀ ಒಲಿದೆನಗೆ 2
ಪರ ತತ್ವಜ್ಞಾನ
ವರವ ಪಾಲಿಸು ಸರ್ವವಿದ್ಯಾಪ್ರವೀಣ
ನರಸಿಂಹವಿಠಲ ಶ್ರೀಹರಿ ಸನ್ನಿಧಾನ
ಕರುಣಾಪಾತ್ರನೆ ದಿವ್ಯವರಪೂರ್ಣಜ್ಞಾನ
ಹರಿಗುರುಭಜನ ತ್ವತ್ಪದ ವ್ಯಾಸಾರ್ಯರ
ಗುರುವೆಂದೆನಿಸಿದೆ ಧರೆಯೊಳು ಮೆರೆದೆ 3