ಭುವನೇಂದ್ರ ಮುನಿಪ ನಿನ್ನವನೋ ಎನ್ನ
ಅವಗುಣಗಳೆಣಿಸದಲೆ ಅನುದಿನದ ಪಾಲಿಪುದು ಪ
ಸಾಧುಜನ ಸಂಪೂಜ್ಯ ಸತತ ನೀ ಎನ್ನ ಅಪ
ರಾಧಗಳೆಣಿಸದಲೆ ಸಂತೈಪುದು
ವೇದ ಪದಯೋಗ್ಯ ಸುಮನಸರ ಗುರು ಶ್ರೀ ಪೂರ್ಣ
ಬೋಧ ಮತ ವಾರಿನಿಧಿ ಚಂದ್ರ ಸದ್ಗುಣ ಸಾಂದ್ರ 1
ಶ್ರೀ ಮೂಲದಿಗ್ವಿಜಯರಾಮ ವ್ಯಾಸಾಂಘ್ರಿ ಯುಗ
ತಾಮರಸ ಭಜಕ ಈ ಭೂಮಿಯೊಳಿಹ
ಪಾಮರನ ಉದ್ಧರಿಸು ರವಿ ಸಾರ್ವ
ಭೌಮ ನೀ ಸಂಚರಿಪೆ ಈ ಮಹೀತಳದಿ 2
ಕರ ಕಮಲ ಸಂಜಾತ
ನಿರುಪಮ ಜಗನ್ನಾಥ ವಿಠಲ ದೂತ
ನೆರೆ ನಂಬಿದೆನೋ ನಿನ್ನ ಪರಿಪಾಲಿಸುವುದೆನ್ನ
ಮರೆಯಲಾಗದು ಜಿತಸ್ಮರ ಭೂವರ ಪ್ರವರಾ 3