ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನರಹರಿ ತೀರ್ಥಯತಿವರ್ಯ ಇಷ್ಟೆಂದೊ ಚರಿಯ ಪ ಸುರವಿನುತ ಪದಹರುಷತೀರ್ಥರ ಕರಕಮಲ ಸಂಜಾತರೆನಿಸುತ ಧರೆಯೊಳಗೆ ಸಿರಿಸಹಿತರಾ ಮನ ಕರೆದು ಧರೆಸುರ ಜನಕೆ ತೋರಿದ ಅ.ಪ ಚರಿಸುತ ಬರಲು ಗಜಪುರದಿ ಪುರ- ದರಸನಿಲ್ಲದಿರೆ ಯೋಚಿಸುತ ಕರಿಕರದಿ ವರಮಾಲಿಕೆಯ ಕೊಡಲಾಕ್ಷಣದೀ ಯತಿ ವರರ ಕಂಠದಲಿ ಹಾಕಲು ಜನ ಸಭದಿ ಪುರಜನದ ಪ್ರಾರ್ಥನದಿ ದ್ವಾದಶ ವರುಷ ಪ್ರಜರನು ಪೊರೆದು ಕೋಶದೊಳಿ- ರುವ ಧರಿಜಾಸಹಿತ ರಾಮನ ತರಿಸಿ ಪೊರಟರು ಕುದುರೆಯೇರುತ1 ಆ ಮಹಾಮುನಿಪರು ತ್ವರದಿ ಬಂದು ಶ್ರೀ ಮದಾನಂದ ತೀರ್ಥರ ಪದಯುಗದಿ ಪ್ರೇಮವಂದನ ಪೂರ್ವಕದಿ ಸೀತಾ ರಾಮಮೂರ್ತಿಯ ನೊಪ್ಪಿಸಿದರು ಕರದೀ ಶ್ರೀ ಮನೋಹರ ನಂಘ್ರಿಯುಗಲವ ಪ್ರೇಮದಿಂದಲಿ ಪೂಜಿಸುತಲಿರೆ ಈ ಮಹಾತ್ಮರ ಕರೆದು ಕೊಟ್ಟರು ನೇಮದಿಂದರ್ಚಿಸಿರಿ ಎನುತಲಿ 2 ಭಾಸುರ ಹೇಮಮಂಟಪದಿ ನಿತ್ಯಾ ಶ್ರೀಸೀತಾರಾಮನರ್ಚಿಪರು ವೈಭವದೀ ಭೂಸುರ ಕೃತ ವೇದಘೋಷದಿ ಮತ್ತೆ ವ್ಯಾಸಸೂತ್ರಗಳ ನಾಮಾವಳಿ ಪಠಣ ದಿ ದೇಶ ದೇಶಗಳಲ್ಲಿ ಚರಿಸುತ ತೋಷತೀರ್ಥರ ಮತವ ಬೋಧಿಸಿ ಸಿರಿ ನರ ಕೇಸರಿಗೆ ಪ್ರಿಯದಾಸರೆನಿಸಿದ 3
--------------
ಕಾರ್ಪರ ನರಹರಿದಾಸರು
ಲಕ್ಷ್ಮೀಪ್ರಿಯರ ಚರಣ ಭಜನೆ ನಿರುತದಿಂದ ಮಾಡುವ ಪ ಲಕ್ಷ್ಮೀಪತಿಯ ಕರುಣ ಪಡೆದು ಹರುಷದಿ ನಾವ್ ಬದುಕುವ ಅ.ಪ ಸದ್ಪೈಷ್ಣವ ಕುಮುದಕಾಭಿ ವೃದ್ಧಿ ತರುವ ಗೋಸುಗ ಮಧ್ವ ಮತಾಬ್ಧಿಯಲ್ಲಿ ಉದ್ಭವಿಸಿದ ಚಂದ್ರರ 1 ವ್ಯಾಸಮುನಿಗೆ ಒಲಿದ ಕೃಷ್ಣನ ಸೋಸಿನಿಂದ ಪೂಜಿಸಿ ವ್ಯಾಸಸೂತ್ರ ಭಾಷ್ಯ ಉಪ ನ್ಯಾಸ ಮಾಡಿ ಮರೆವರ 2 ದೀನ ಜನರ ವೃಂದಕೆ ಸುರ ಧೇನು ಎನಿಪ ಮುನಿವರ ಶ್ರೀ ನರಹರಿಗೆ ತಾವು ಅನುಗರಾಗಿ ಇರುವರ 3
--------------
ಪ್ರದ್ಯುಮ್ನತೀರ್ಥರು