ಹರಿ ಕುಣಿದ ನಮ್ಮ ಹರಿ ಕುಣಿದ
ಹರಿ ಕುಣಿದ ನಮ್ಮ ಹರಿ ಕುಣಿದ
ಹರಿ ಕುಣಿದ ನಮ್ಮ ಕೃಷ್ಣ ಕುಣಿದ ಪ.
ಹರಿದಾಸುರಗಳ ನೆರೆದಿಹ ಸಭೆಯಲಿ
ಭಜನೆಯ ಸಮಯದಿ ಹರಿ ಕುಣಿದ ಅ.ಪ.
ಅತಿಭಕ್ತಿಯಿಂದ ಪತಿತ ಪಾವನನ ಪೂಜೆ
ಅತಿ ಸಂತೋಷದಿ ಮಾಡುವ ಸಮಯದಿ 1
ವೇದಮಂತ್ರದಿಂದಾ ವೇದಘೋಷದಲ್ಲಿ
ವೇದ ವ್ಯಾಸರೆಂಬೋ ನಾಮದಿಂದಿರುವ 2
ಅಂದಿಗೆ ಕಿರುಗೆಜ್ಜೆ ಚಂದದಿ ಪೊಳೆಯುತಾ
ಗೋವಿಂದ ದಾಸರ ಮಂದಿರದೊಳಗೆ 3
ಪುರಂದರ ದಾಸರ ಆರಾಧನೆ ದಿನ ಪುರದೊಳಗೆಲ್ಲಾ
ಮೆರವಣಿಗೆ ದಿನ ಯತಿಗಳೀರ್ವರು ಪೂಜಿಸಿ 4
ವರದ ಅತಿ ಸಂಭ್ರಮದಿ ಗತಿ ಕೊಡುವವ ಬಂದ
ರಮಾವಲ್ಲಭವಿಠಲನ ಪೂಜೆಯ ಸಮಯದಿ 5