ಒಟ್ಟು 5 ಕಡೆಗಳಲ್ಲಿ , 4 ದಾಸರು , 5 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನೆರೆನಂಬಿದವನೆ ಧನ್ಯಾ ಈ ಗುರುಪದ ಪ ನೆರೆನಂಬಿದವ ರಘತರಿವ ವೇದವ್ಯಾಸ ಕರ ಪಾದ ಅ.ಪ ವರಮಣಿಯೊಳು ಶಿರಿತನದಿಂದಲ್ಲಿ ಮೆರೆವ ನಾಯ ಕರ ಮಂದಿರದಿ ಜಾತರಾಗಿ ಪರಮ ಮಹಿಮರಾದ ಗುರು ರಘೋತ್ತಮರಿಂದ ಪರವಿದ್ಯೆಯನು ಪೊಂದಿ ಚರಿಸಿ ದಿಗಂತದಿ ವರವೇದ ವ್ಯಾಸರಿಂದ ತುರಿಯಾಶ್ರಮ ಪಡೆದು ಸಚ್ಚಿಷ್ಯರಿಂದÀ ಸಂತತ ಪ್ರವಚನ ಮಾಡುತಲಿ ಆನಂದ ತೀರ್ಥರ ಮತ ಶರಧಿಗೆ ಪೂರ್ಣ ಚಂದಿರನೆನಿ ಪರ ಪದ 1 ಯಾದವಾರ್ಯರಿಗೆ ಅಗಾಧ ಮಹಿಮರು ಈ ಪೂರ್ಣಬೋಧ ಗ್ರಂಥಾರ್ಥ ಗ್ರಂಥಗಳನ್ನು ಟೀಕಾ ಕೃ ಕೌವÀುುದಿಗಳನು ರಚಿಸಿದಂಥಾ ವಾದಿ ಮಾತಂಗ ಮೃಗಾಧಿಪರನ್ನು 2 ಕರೆದು ಶಿಷ್ಯರಿಗೆ ಹರಿ ಪಾದಂಗುಟದಿಂದ ಸುರನದಿಯನು ಸಾಕ್ಷಾ- ತ್ಕರಿಸಿ ತೋರಿಸಿದಂಥ ಗುರು ಕೃಷ್ಣದ್ವೈಪಾಯನ ತೀರ್ಥರಿಗೆ ಘನವಾದ ಮಹಿಮೆಯನಾ ಸುರತರು ಸಮ ಚರಣ 3 ವೃಂದಾವನದೆಡೆ ಒಂದು ಪ್ರದಕ್ಷಿಣಿ ವಂದನೆ ಮಾಡಲು ಮಂದನಾದರು ಪ್ರಾಜ್ಞನೆಂದು ಕರೆಸುವನು ವಂಧ್ಯೆಯಾದರು ಬಹುಕಂದರ ಪಡೆವಳುಸಂದೇಹವ್ಯಾಕಿಲ್ಲಿ ದೂರಮಾಡುತಲಿ ಆ ನಂದವ ಗರಿಯುವರ ಭಕ್ತರ ದುರಿತಾಂಧಕಾರಕ್ಕೆ ರವಿ ಯಂದದಲಿಪ್ಪರ 4 ವರಭೀಮಾತೀರದಿ ಪರಿಶೋಭಿಸುವ ಮಣಿ ಪುರದಿ ಪಂಡಿತ ಭೂಮಿ ಚರಣಾರಾಧಕರನು ಸುಮಂದಿರದಿ ಕುಳಿತು ನಿತ್ಯ ಮೂಲದಲಿ ಮೆರೆವ ಧೇನಿಸುತಿಪ್ಪ ಗುರುವೇದೇಶರ ಶುಭ ಚರಣ ಯುಗಲವ 5
--------------
ಕಾರ್ಪರ ನರಹರಿದಾಸರು
ಪರಿ ಏನೋ ಬಾಲ ಹನುಮ ಪ. ಬಂಧಿಸಿದರಾರಿಲ್ಲಿ ನಿನ್ನ ಹನುಮ ಅ.ಪ. ಒಂದು ಸಲ ನೋಡುವೆನೆ ಬ್ರಹ್ಮಾಸ್ತ್ರವಲ್ಲವಿದು ಒಂದು ಸಲ ನೋಡುವೆನೆ ಅಜಗರವಿದಲ್ಲ ಒಂದು ಸಲ ನೋಡುವೆನೆ ಕಳ್ಳ ಗುಂಪಲ್ಲವಿದು ಒಂದೆರಡು ಕೋಣವೆರಡರ ಮಧ್ಯೆ ಇರುವ 1 ಕ್ಷಣಕೆ ಪರಿಹರವಾಯ್ತು ಹಿಂದೆ ಆ ಬಂಧಗಳು ಕ್ಷಣಕ್ಷಣಕು ಇದ್ದಂತೆ ಇರುವುದೀ ತೊಡಕು ಗುಣದಂತೆ ಆವರಣ ವರ್ತುಳಾಕಾರದಲಿ ತೆನೆಗಳಲಿ ಕೋತಿಗಳ ಕಾವಲಿನ ಕಟ್ಟು 2 ಬೀಸಿದೀ ಬಲೆ ತೆಗೆಯೆ ಶ್ರೀ ಶನಿಗು ಅಳವಲ್ಲ ವಾಸುದೇವನೆÀ ಬಲ್ಲ ಈ ಮರ್ಮವ ದಾಸಜನ ಪ್ರಿಯ ಶ್ರೀಗೋಪಾಲಕೃಷ್ಣವಿಠ್ಠಲ ವ್ಯಾಸರಿಂದಲಿ ನಿನಗೆ ಮೋಸಗೈಸಿದನೋ 3
--------------
ಅಂಬಾಬಾಯಿ
ಪುರಂದರ ಗುರುವರ್ಯ ಪ ಗುರುವರ್ಯ ಕಾಯಬೇಕೆನ್ನ ಮಧ್ವ ಗುರುಕೃತ ಗ್ರಂಥಾರ್ಥಜ್ಞಾನ ಕೊಟ್ಟು ಕರಣತ್ರಯ ಗಳಿಂದಾಚರಿಸುವ ಕರ್ಮವ ಹರಿಮಾಡಿಸುವನೆಂಬ ಸ್ಮರಣೆಯ ಕರುಣಿಸೊ ಅ.ಪ ಸುರಮುನಿ ನಿನ್ನ ಪ್ರಾರ್ಥನದಿ ಶ್ರೀ ಮ ದ್ಗುರು ವೇದವ್ಯಾಸರು ದಯದಿ ಪಾ- ಮರ ಪಂಡಿತರಿಗೆ ಸುಲಭದಿ ಧರ್ಮ ತಿಳಿದಾ- ಚರಿ ಪರೆಂದು ಮುದದಿ ಅರಿತು ನಿರುತ ಶೇವಿಪರಿಗೆ ಪರಮ ಮಂಗಳವೀವ ಭಾಗವತ ಗ್ರಂಥ ನಿರ್ಮಿಸಿದರು ಸತ್ಯ 1 ಕಲಿಯುಗದಲಿ ಹರಿನಾಮ ಜನರ ಕಲಿ ಕಲ್ಮಷಾದ್ರಿ ಸೂತ್ರಾಮ ಎಂದು ತಿಳಿದು ಕೀರ್ತಿಪರಿಗೆ ಪರಮ ಮಂ ಗಳ ಕರನಾಮದ ಮಹಿಮ ಎನುತ ಪುರಂದರ ಗಡ ದಲಿ ಪುಟ್ಟಿ ಬಲು ವಿಧ ಹರಿನಾಮಂ- ಗಳನು ವಿರಚಿಸಿದ 2 ಕಾಶ್ಯಾದಿ ಕ್ಷೇತ್ರ ಸಂಚರಿಸಿ ಪದ ರಾಶಿ ಸುಳಾದಿಗಳ ರಚಿಸಿ ಸಂ- ತೋಷ ತೀರ್ಥರ ಮತ ಬಲಿಸಿ ಗುರು ವ್ಯಾಸರಿಂದುಪದೇಶ ಗ್ರಹಿಸಿ ಜಗದಿ ಭೂಸುರ ಪಾಲಕ ಶ್ರೀಶಕಾರ್ಪರನರ ಕೇ ಸರಿ ಗತಿ ಪ್ರಿಯ ದಾಸರೆಂದೆನಿಸಿದ 3
--------------
ಕಾರ್ಪರ ನರಹರಿದಾಸರು
ಮದಲಗಟ್ಟಿ ಪ್ರಾಣನಾಥಾ ಮುದವನಿತ್ತು ಪಾಲಿಸಯ್ಯ ಪ ಮದನಜನಕ ಮಾಧವಾನಬೋಧವಿತ್ತು ಕರುಣಿಸಯ್ಯ ಅ.ಪ. ತಾಪ ಮೂರ್ತಿ ನೀನುದೀಪದಂತೆ ಹೊಳೆದು ಭವದಕೂಪ ದಾಟಿಸಯ್ಯಾ ಭೂಪ 1 ದೇವ ದೇವೋತ್ತಮನೆ ನೀನುಜೀವದಾನ ಮಾಡಿಸಯ್ಯಪಾವಮಾನಿ ಪರಿಕೆಸೆಮ್ಮಾನೋವನದೂರ ಮಾಡಿಸಯ್ಯಾ 2 ಅಂಧ ಬಧಿರ ಮೂರ್ಖ ಜನರುಬಂದು ನಿನ್ನ ವಂದಿಸಲುಛಂದದಿಂದ ಅವರ ದುರಿತವೃಂದವನ್ನು ನಾಶಗೈವೆ 3 ಭೂಸುರೇಂದ್ರ ವ್ಯಾಸರಿಂದಆರು ತುಂಗಾ ಹೃದವ ಬಿಟ್ಟುಭಾವಿಸುವೆ ಇಲ್ಲದೇವಆ ಸಮೀರ ಜಾತ ಶೂರ 4 ಮುದದಿನಾಥ ಜ್ಞಾನ ವಾತಾಕಂದಧೀಮಂಧ ರಾಮ ದೂತಾಹೃದಯ ಸದನದಲ್ಲಿ ತೋರೋತಂದೆಶ್ರೀನರಹರಿಯ ರೂಪ 5
--------------
ತಂದೆ ಶ್ರೀನರಹರಿ
ಮಾನವ ನೀನುವಾದಿರಾಜರ ಪೂಜಿಸೋ ಪ ಶಾರ್ವರಿ ವತ್ಸರದೀ | ಜನಿಸಿ ಗೌರಿಗರ್ಭ ಸುಧಾಂಬುಧಿಲೀ ||ಪುರಬಾಹ್ಯ ಪುಟ್ಟಿದ | ಕಾರಣದಿಂದಲಿವರಯತಿ ವಾಗೀಶ | ಕರಜನೆನಿಸಿ ಮೆರೆದ 1 ವಿನುತ ಸಿರಿ ಹರಿಯ ಪೂಜಿಸಿದ 2 ವಾಲಿ ಭಂಡಾರವನೂ | ಶೋಧಿಸೆ ಅಲ್ಲಿಶೀಲ ಇನಜಾರ್ಚಿಸಿದ ||ಲೀಲ ವಿಗ್ರಹ ರಾಮ | ವಿಠಲ ಮೂರ್ತಿಗಳನ್ನಕೋಲಾಹಲದಿ ತಂದು | ಭಾಳ ಪೂಜಿಸಿದ 3 ವ್ಯಾಸರಾಜಾರ್ಚಿತನಾ | ದೇವನವೇದವ್ಯಾಸರಿಂದಲಿ ಗಳಿಸಿದಾ |ವ್ಯಾಸಮುಷ್ಠಿಕೆಯ ವಿ | ಶ್ವಾಸದಿಂದಲಿ ಪೊಂದಿಶ್ರೀಶ ಉಡುಪಿನ ಕೃಷ್ಣ | ವಾಸ ಸ್ಥಾನಕೆ ಬಂದ 4 ಕವಿಕುಲ ಸಭೆಯೊಳಗೇ | ಪೂಣೆಯ ಪುರದಿನವರಸಲಂಕಾರದೀ ||ಕವನ ರಚಿಸಿ ರುಕ್ಮಿ | ಣೀಶ ವಿಜಯ ಗ್ರಂಥಕವಿ ಕುಲೋತ್ತಂಸ | ತಾನೆನಿಸುತ್ತ ಮೆರೆದಂಥ 5 ಪಂಢರಿ ಪುರ ಮಾರ್ಗವ | ಸವೆಸುತ ಬರೆಪುಂಡು ಸೈನಿಕರ್ ಬರಲೂ ||ಪುಂಡಲೀಕಗೆ ವರದ | ಪುಂಡರೀಕಾಕ್ಷನಹಿಂಡು ಶ್ವೇತಾಶ್ವಗಳಿಂದ ವಾರಿಸಿದಾ 6 ಹರಿವಾಣ ಪೂರಣವ ||ಹಯವದನನು ಬಂದು | ಜಯ ಘೋಷದಲಿ ಮೆದ್ದುದಯ ದೃಷ್ಟಿ ತೋರಿದ | ಭಾವಿ ಮಾರುತರ 7 ಪಾದ | ಬಿಸಜವ ಕಂಡರ 8 ಬೊಮ್ಮ ರಕ್ಕಸನಾಗೀ 9 ಸಕಲ ಶಿಷ್ಯರವೆರಸಿ | ರಾಜರು ಬರೆರಕ್ಕಸ ಕರೆದ ವಾದಕ್ಕೇ ||`ಆಕಾಮವೈ` ಕೋ ನಸ್ನಾತನೆಂದೆನೆ ಅವಕಾಕು ರಂಡೆಯ ಪುತ್ರ | ತೋಕ ನೀನೆಂದ 10 ಮೇನೆ ಪಾಲಕಿ ಹೊರುವ | ನರೆಯಣ ಭೂತಯಾನ ವಾಹಕನಾದನೂ ||ಆನೆಂತು ಬಣ್ಣಿಪೆ | ಮುನಿಕುಲ ದಿನಮಣಿವೇಣುಗಾನ ಪ್ರಿಯ | ಕೃಷ್ಣ ಸೇವಕರಾ 11 ಆ ಮಹ ನೇತ್ರಾವತಿ | ಸಂಗಮವೆನ್ನಕೌಮಾರ ನದಿ ಸನಿಯದಿ ||ಈ ಮಹಾ ಮಹಿಮರು | ಸಾಸಿರ ಲಿಂಗದನೇಮದ ಪೂಜೆಗೆ | ನಿರ್ಮಿಸಿದರು ತೀರ್ಥ 12 ಪಾದ್ಯ | ಸ್ವರ್ಣ ಗರ್ಭನ ಪಿತಪೂರ್ಣಗೆ ಸುಪ್ರೀಯ | ಗಸದಳವೇನಿದು13 ಗರಳ ಮಿಶ್ರಿತ ನೈವೇದ್ಯ | ಪಾಚಕತೆರೆಹರಿಗೆ ಸಮರ್ಪಿಸಿದಾ ||ಸಿರಿಪತಿ ಕಂಠದೋಳ್ | ಕರಿಯ ವರ್ಣವ ಕಂಡುಅರಿತು ಸೇವಿಸಿದನು | ಹರಿಯ ಪ್ರಸಾದವ 14 ಸಿರಿ ಕೃಷ್ಣ | ನಂಘ್ರಿಗರ್ಪಿಸಿದ 15 ಅರಿಯು ಮುತ್ತಲು ಪುರವ | ಸೋದಾಧಿಪಮೊರೆಯ ಹೊಕ್ಕನು ರಾಜರ ||ಭರದಿ ನಾರಾಯಣ | ವರ ಭೂತನನ ಕಳುಹಿಅರಿಭಯ ವಾರಿಸಿ | ಪೊರೆದ ನಾಯಕನಾ 16 ಸೋದೆಯಲ್ಲೋರ್ವ ಶೈವ | ಬಲುಗರ್ವದಿವಾದ ಮಾಡುತಲವನೂ ||ವೇದ ಮತವ ಬಲು | ವಿಧದಿ ದೂಷಿಸಿ ಕಡುಬಾಧೆ ಪಡಿಸುತಲಿದ್ದ | ಬುಧಜನ ವೃಂದವ 17 ಭೃತ್ಯ ಭಾವದಿ | ವಿಜಯ ಪತ್ರವನಿತ್ತುನಿಜ ಬಿರುದುಗಳವರ | ಪದಕೆ ಅರ್ಪಿಸಿದ 18 ತ್ರಿವಿಕ್ರಮಾಲಯ ಸ್ಥಾಪನೆ | ರಚಿಸಿ ಮೆರೆದ ದಿವ್ಯ ಶಾಲೀವಾಹನ್ನ ||ಸಾವಿರೈನೂರ್ನಾಲ್ಕು | ಚಿತ್ರ ಭಾನುವಿನಲ್ಲಿರವಿಯು ಮೇಷಾರ್ಧದಿ | ಚರಿಸುವ ದಿನದಿ 19 ರಥದಿಮೂರ್ತಿಯ ಸೇರಿಸಿ | ಬದರಿಯಿಂದಭೂತ ನರೆಯಣ ಬರುತಿರೆ ||ಪಥದಿ ರಕ್ಕಸ ಸೆಣೆಸೆ | ಪೃಥುಕು ಆಯುಧ ಬಿಟ್ಟುರಥದ ಗಾಲಿಯಲಿಂದ | ಹತಗೈದನವನ 20 ವೇದಾರ್ಥ ಬೃಂಹಿತದ | ಬಹು ಗ್ರಂಥಗಳ್‍ಪದ ಪದ್ಯ ಸೂಳ್ಹಾದಿಯ ||ಸೋದೆ ಮಠದಿ ನಿಂದು | ವಾದಿರಾಜರು ರಚಿಸಿಬುಧರಿಗಾನಂದವ | ಮುದದಿ ಪಾಲಿಸಿದ 21 ತ್ರಿವಿಕ್ರಮ ರಥೋತ್ಸವದಿ | ಕರೆಯಲು ಬಂದದಿವಿರಾಜ ಜನರು ಕಳುಹಿ ||ಭವ್ಯ ಸು ಪಂಚ ವೃಂದಾವನಗಳ ರಚಿಸಿದಿವಿರಾಜ ಗರುಹಿದರ್ ತಮ್ಮಯ ಬರವನು 22 ಶಾರ್ವರಿ ವತ್ಸರದೀ | ಫಾಲ್ಗುಣ ವದ್ಯಮೂರನೆ ದಿವಸದಲ್ಲೀ ||ವರ ವೃಂದಾವನ ಪೊಕ್ಕು | ಗುರು ಗೋವಿಂದ ವಿಠಲನನಿರುತ ಧ್ಯಾನದೊಳಲ್ಲಿ | ವರವ ಪಾಲಿಸುತಿಹರ 23
--------------
ಗುರುಗೋವಿಂದವಿಠಲರು