ಒಟ್ಟು 4 ಕಡೆಗಳಲ್ಲಿ , 2 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಎಂಥ ದಯವಂತನೋ | ಮಂತ್ರ ಮುನಿನಾಥನೊ ಸಂತಸದಿ ತನ್ನನು | ಚಿಂತಿಪರಿಗೆ ಸುರಧೇನು ಪ ವರ ಪ್ರಹ್ಲಾದನು | ಮರಳಿ ಬಾಹ್ಲೀಕನು | ಶ್ರೀ ಗುರುವ್ಯಾಸರಾಯನೊ | ಪರಿಮಳಾಚಾರ್ಯನೊ 1 ಇರುವ ತುಂಗಾತಟದಲ್ಲಿ | ಬರುವ ತಾನು ಕರೆದಲ್ಲಿ ಕರಪಿಡಿದು ಪೊರೆವಲ್ಲಿ ಸರಿಗಾಣೆ ಧರೆಯಲ್ಲಿ 2 ದುರಿತ ಕಳೆವ ಶಕ್ತನು ತರಣಿ ನಿಭಗಾತ್ರನು | ಪರಮಸುಚರಿತ್ರನು 3 ಶಿಶುವಿಗವುಗರೆದನು | ವಸುಧಿ ಸುರರ ಪೊರೆವನು ಅಸಮ ಮಹಿಮನೊ | ಸುಶೀಲೇಂದ್ರ ವರದನೊ 4 ಭೂಮಿಯೊಳು ಖ್ಯಾತನು | ಶಾಮಸುಂದರ ಪ್ರೀತನು ಕಾಮಿತಾರ್ಥದಾತನು | ಸ್ವಾಮಿ ನಮಗೆ ಈತನು 5
--------------
ಶಾಮಸುಂದರ ವಿಠಲ
ಪೋಷಿಸೆನ್ನ ದಾಸಶ್ರೇಷ್ಠನೆ ವಸುಧಿದೇವ ನಿಕರಪಾಲ ವ್ಯಾಸರಾಯನ ಪ್ರೇಮಪಾತ್ರನೆ ಪ ವೇದಸಾರವಾದ ಕವನಗೈದು ಪ್ರಾಕೃತದಿ ಜಗದಿ ಭೇದಜ್ಷಾನ ತಾರತಮ್ಯ ಬೋಧಿಸಿದ ಸಾಧುಶೀಲ 1 ಜ್ಞಾನಿ ವೀಣಾಪಾಣೆ ದೇವ ಮೌನಿ ದಾನಿ | ಸ ನ್ಮಾನಿ ಗಾನಲೋಲ ದೀನಪಾಲನ 2 ನಂದಗೋಪಕಂದ ಶಾಮಸುಂದರವಿಠಲಗೆ ಪರಮ ಯೆಂದು ಸಾರಿ ಸುಪಥ ತೋರಿ ಮಂದÀರನ್ನು ಪೊರೆದ 3
--------------
ಶಾಮಸುಂದರ ವಿಠಲ
ಸ್ಮರಿಸುವೆನು ಗುರುರಾಯ ವರಮಂತ್ರ ಪುರಾಧಿಪ ಪೊರೆಯೊ ಎನ್ನನು ಜೀಯಾ ತವ ಮಹಿಮ ವರ್ಣಿಸ ಲರಿಯ ಮುರಹರಪ್ರೀಯಾ ಅಧ ಮಾಧಮನ ಮಮ ಪರಿಯ ನೀ ಬಲ್ಲೆಯ್ಯಾ ತೋರಯ್ಯಾ ದಯ ವರದ ಚರಿತೆಯ ಅರುಹುವದಕೆ ಪರವಾಕ್ಯರಣಿಯನು ಪಾಲಿಸಿ ನಿರುತ ಹರಿಗುರು ಚರಣದಲಿ ರತಿ ತ್ವರಿತ ಕರುಣಿಸು ರಾಘವೇಂದ್ರನೆ ಪ ಹಿಂದೆ ಕೃತಯುಗದಲಿ ಪ್ರಹ್ಲಾದ ನಾಮದಿ ತಂದೆ ಹಿರಣ್ಯಾಕ್ಷನಲಿ ಸರ್ವೋತ್ತಮನು ಹರಿ ದ್ವಂದ್ವ ಕರ್ಮವನಲಿ ಅರ್ಪಿಸಲು ಮಹದಾ ನಂದ ಪೊಂದುವರಲ್ಲಿ ಎಂದು ಪೇಳುತಿರೆ ಮಂದ ದೈತ್ಯವನಂದ ಮಾತಿಗೆ ಬಂಧನಾದಿಗ ಳಿಂದ ಶಿಕ್ಷಿಸೆ ಬಂದ ದುರಿತವನಂದು ಕಳೆದಾ ಕಂದನನು ಹರಿಪೊರೆಯೆ ದಿತಿಜನು ಒಂದೂ ತಿಳಿಯದೆ ಮಂದಿರ ಗೋವಿಂನೆಲ್ಲಿಹ ನೆಂದು ಕೇಳುತ ಮಂದರರೋದ್ಧಾರ ನಿಲ್ಲದಿಹ ಸ್ಥಳ ವಂದೂ ಇಲ್ಲವೂ ಎಂಂದು ಸಾರಿದೆ ತಂದು ತೋರಿಸು ಸ್ತಂಭದಲಿ ತವ ಇಂದಿರಾಪತಿಯೆಂದು ಗರ್ಜಿಸೆ ಕಂದನಾಡಿದ ಮಾತುಗಳನು ನಿಜ ವೆಂದು ನರಹರಿ ಪೊರೆದೆ 1 ಶ್ರೀಶನಾಜ್ಞೆಯ ವಹಿಸಿ ದ್ವಿತೀಯಾವತಾರದಿ ವ್ಯಾಸರಾಯನು ಎನಿಸಿ ಬ್ರಹ್ಮಣ್ಯರÀಲಿ ಸ ನ್ಯಾಸವನು ಸ್ವೀಕರಿಸಿ ಸರ್ವಜ್ಞ ಶಾಸ್ತ್ರಾಭ್ಯಾಸವನು ಪೂರೈಸಿ ವ್ಯಾಸತ್ರಯ ರಚಿಸಿ ದೇಶದೇಶಗಳನ್ನು ಚರಿಸುತ ಆ ಸಮಸ್ತ ಕುವಾದಿಗಳ ಮತ ನಾಶಗೊಳಿಸಿ ರ ಮೇಶ ಶ್ರೀ ವೆಂಕಟೇಶನನು ಬಹುದಿನವು ಪೋಜಿಸಿ ವಾಸಿಸುತ ಗಜರಾಮ ಪುರಧಾಧೀಶರಾಯನ ಕುಹಯೋಗವ ಪುರಂದರ ದಾಸರಿಂದೊಡಗೂಡಿ ಕೃಷ್ಣನುಪಾಸನೆಯ ಭಕ್ತಿಯಲಿ ಗೈಯುತ ವಾಸುದೇವನ ಶಿಲ್ಪ ಶಾಸ್ತ್ರದ ಶಾಸನಕೆ ಪ್ರತಿಯಾಗಿ ನಿಲ್ಲಿಸಿ ತೋಷಿಸಿದ ಸೌಭಾಗ್ಯ ವೈಭವ 2 ಪದುವ ಸಂಭವ ಜಾತ ಶ್ರೀ ರಾಘವೇಂದ್ರ ಸು ಪದವ ಪಡೆದ ಪ್ರಖ್ಯಾತ ಜಯತೀರ್ಥ ಮುನಿಕೃತ ಸುಧೆಗೆ ಪರಿಮುಳ ಗ್ರಂಧ ರಚಿಸಿ ಮೆರೆದಾತ ಬಧಿರ ಮೂಕಾಂಧ ವ್ಯಂಗ್ಯರು ವಿಧ ವಿಧಿದ ಘನರೋಗಗ್ರಸ್ತರು ಸದಯ ನೀಗತಿಯೆಂದು ಸೇವಿಸೆ ತ್ರಿದಶ ಭೂರುಹದಂತೆ ಸಲಹುವಿ ಕುಧರ ತೀರದಿ ಮೂಲ ರಘುಪತಿ ಪದವ ಪೂಜಿಸುತಲಿ ಸಜೀವದಿ ಮುದದಿ ವೃಂದಾವನ ಪ್ರವೇಶಿಸಿ ಪದುಮನಾಭ ಶ್ರೀ ಶಾಮಸುಂದರ ಮಧು ವಿರೋಧಿಯನು ಧ್ಯಾನಿಸುತ ಶಿರಿ ಸದನನು ವಲಿಸುತ್ತ ಕರುಣಾ ನಿಧಿಯು ಭಜಕರ ಪೊರೆವ ಮಹಿಮೆಯ 3
--------------
ಶಾಮಸುಂದರ ವಿಠಲ
ಶ್ರೀವ್ಯಾಸರಾಜರು105ಪಾಲಿಸೋ ಯತಿರಾಜ ಪಾಲಿಸೋಪಾಲಿಸೋ ಮುನಿ ವ್ಯಾಸ ರಾಜ | ಜಗ -ತ್ತಲ್ಲಿ ನಿನ್ಮಹಿಮೆ ಸುಭ್ರಾಜ | ಅಹ |ಕಾಲಲ್ಲಿ ಶರಣಾದೆ ಶ್ರೀಲೋಲಪ್ರಿಯ ನಿನ್ನಆಳೆಂದು ಗಣಿಸಿ ಪಾಲಿಪುದೆನ್ನ ಪ್ರತಿಕ್ಷಣ | ಪಾಲಿಸೋ | ಪದಿನಪ ಸುತೇಜ ಬ್ರಹ್ಮಣ್ಯ | ತೀರ್ಥಮುನಿಸಾರ್ವಭೌಮರ ದಿವ್ಯ |ಚಾರುವನರುಹಕರದಿಂದ ಉದಯ | ಇನ್ನುಏನೆಂಬೆ ನಿನ್ನ ಪ್ರಾಬಲ್ಯ | ಅಹ |ದೀನ ವತ್ಸಲ ನಿನ್ನ ಶರಣು ಹೊಕ್ಕೆನು ನಾನುಎನ್ನ ಭಾಗ್ಯೋದಯ ತವ ಕಾರುಣ್ಯದಿ ಇನ್ನು 1ಕರುಣಿ ಸುಶಾಂತ ಸುವರ್ಣ | ವರ್ಣತೀರುಥಕರ ಕಂಜೋತ್ಪನ್ನ | ಸುಸ್ಥಿರ ವರಭಕ್ತಿವಿಜ್ಞಾನ| ಸಂ-ಪನ್ನ ಶ್ರೀ ಪಾದಾರ್ಯರನ್ನ | ಅಹ |ಸೇರಿ ಸೇವಿಸಿ ವಾದಿಕರಿಪಂಚಾನನಾದಸೂರಿಸಜ್ಜನನುತ ವ್ಯಾಸ ಮುನೀಂದ್ರ2ಮಾಲೋಲ ಕೃಷ್ಣಸುಪ್ರಿಯರು |ನಿತ್ಯಕಾಳೀಶ ನಿಮ್ಮೋಳ್ ಪ್ರಚುರರು | ಮತ್ತುವ್ಯಾಳೇಶ ಅಂಶ ಸಂಯುತರು | ಎಂದುಹೇಳೋರು ಹೀಗೆ ವಿಬುಧರು | ಅಹ |ಕೀಳುವಿಷಯದಿ ಎನ್ ಮನ ಸೋಲದೇ ಹೊರಒಳಗಿಪ್ಪ ಹರಿರೂಪ ವ್ಯಾಳೆ ವ್ಯಾಳೆಗೆ ತೋರು 3ದ್ವಾಸಪ್ತತಿ ಸºಸ್ರ | ನಾಡಿತತ್ರಸ್ಥರೂಪಸಮೀರ| ಅವನವಿಂಶತಿ ಮೇಲೇಳು ನೂರು | ಪ್ರತಿಮನೀ ಸ್ಥಾಪಿಸದಿಯೋ ಹೇ ಧೀರ | ಅಹಈ ಸಮಸ್ತ ಹನುಮರೂಪ ಒಂದೊಂದರೊಳ್ಶತರೂಪ ಸ್ಮರಣೀಯ ಶ್ರೀಶ ಸಾಸಿರ ನಾಮ 4ಸಾತ್ಯವತೀಯ ವೇದಾರ್ಥ | ಅರಿತುಮಧ್ಯಗೇಹನು ವಿವರಿಸಿದ | ಆಗಜಯರಾಯ ತತ್ ಟೀಕೆ ಬರೆದ | ಈಗವ್ಯಾಸರಾಯನು ವಿವರಿಸಿದ | ಅಹಮಿಥ್ಯಾ ತತ್ವವ ಪೇಳ್ದ ಮಾಯ್‍ಗಳ ಬಾಯ್ ಮುಚ್ಚಿನಿತ್ಯಸುಖವನೀವ ತತ್ವ ಬೋಧಿಸಿದಿ5ಮಾರ್ತಾಂಡಕತ್ತಲೆ ಕಳೆವ | ತರ್ಕತಾಂಡವ ದುಸ್ತರ್ಕ ತರಿವ |ಬಂಡುಮಿಥ್ಯಾವಾದಿಗಳ ದುರ್ಮತವ | ತುಂಡುತುಂಡುಮಾಡಿದ ನ್ಯಾಯಾಮೃತವ | ಅಹಕೊಂಡಾಡಳಲವೇ ಚಂದ್ರಿಕಾಈವಆಹ್ಲಾದವಬ್ರಹ್ಮಾಂqದೊಡೆಯನ ಅಮೃತ ಪ್ರಸಾದವ 6ಪ್ರಣವಮಂತ್ರದಿ ಲಕ್ಷ್ಮೀರಮಣ | ಎಂಟುವರ್ಣ ಮಂತ್ರದಿ ಶ್ರೀರಮಣ | ವಿಷ್ಣುಷಡ್ವರ್ಣದಲ್ಲಿ ಸತ್ಯಾರಮಣ ಹಾಗೂವರ್ಣ ಸರ್ವದಿ ರಮಾ ರಮಣ | ಅಹಧ್ವನಿ ವರ್ಣ ಪ್ರತಿಪಾದ್ಯ ಸತ್ತಾದಿದಾತಅನುತ್ತಮಹರಿರೂಪಗುಣಕ್ರಿಯಾ ಹಾಡಿದಿ7ಭೂಪನ ಹರಿಯಾಸನವ ನೀ ಏರ್ದಿ | ಏರಿನೃಪವರನಪಮೃತ್ಯು ತರಿದಿ | ಯತಿತಪಸ್ವಿಗಳಿಗೆ ಪಾಠ ಪೇಳ್ದಿ | ಸರ್ವವಿಭುದರಿಂದಲಿ ಪೂಜ್ಯನಾದಿ | ಅಹ |ಗೋಪಾಲ ಅಸುಪಾಲನ್ನೊಲುಮೆ ನಿನ್ನಲ್ಲೆಷ್ಟೋಶ್ರೀಪನ ದಾಸವೃಂದಬ್ಜ ಕೂಟಕೆ ಸೂರ್ಯ 8ನರಸಿಂಹ ಗೋಪಾಲ ಕೃಷ್ಣ | ಯಜÕವರಾಹಪಟ್ಟಾಭಿರಾಮನ್ನ | ಬಹುಪರಾಶರ್ಯಾದಿ ರೂಪನ್ನ |ನಿತ್ಯನಿರುತ ಸಂಪೂಜಿಪ ಘನ್ನ | ಅಹವರಭಕ್ತಾಗ್ರಣಿ ನೀನು ಸರಸಿಜಾಸನ ಪಿತ'ಪ್ರಸನ್ನ ಶ್ರೀನಿವಾಸ' ನ್ನೊಲಿಸೋ ಎನಗೆಜೀಯ9 ಪ|| ಸಂಪೂರ್ಣಂ ||
--------------
ಪ್ರಸನ್ನ ಶ್ರೀನಿವಾಸದಾಸರು