ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

(5) ದೇವರಹೊಸಹಳ್ಳಿ ಆಂಜನೇಯ (ಕೆಂಗಲ್ಲು ಸಮೀಪ) ಪರಿಪಾಹಿ ಸಂಜೀವರಾಯ ಜೀಯ ಕರವ ಮುಗಿವೆ ವಜ್ರಕಾಯ ಪ ವರ ಜಾಜಿ ಕೇಶವ ಪ್ರೇಮ ಧಾಮ ಅ.ಪ ರಾಮಾವತಾರದಿ ಹರಿಗೇ ನೀನು ನೇಮ ಸೇವಕನಾದೆ ಭರದೇ ಆ ಮಹೀಜಾತೆಗೆ ಮುದ್ರೆ ಸ್ವಾಮಿ ಪೇಳ್ದಂತೆ ನೀನು ಯಿತ್ತೆ 1 ಅಂಜನದೇವಿಕುಮಾರ ಶ್ರೀಮ ದಾಂಜನೇಯ ಗಂಭೀರ ಸಂಜೀವನಾದ್ರಿಯ ತಂದೆ ಪ್ರ ಭಂಜನ ಸೌಮಿತ್ರಿಗಂದೇ 2 ರಾಮನಾಮ ಧ್ಯಾನನಿರತ ಸುಖ ಶ್ಯಾಮನ ಕ್ಷೇಮ ಸುವಾರ್ತ ವ್ಯೋಮದಿ ಭಕುತಗೆ ಪೇಳ್ದೆ ಸುಪಿ ತಾಮಹ ಪದವಿಯ ಪಡೆದೆ 3 ವ್ಯಾಸಯತೀಂದ್ರ ಕರಪೂಜ್ಯಾ ನಿತ್ಯ ದಾಸರಪೊರೆವ ಸಾಮ್ರಾಜ್ಯ ದೋಷ ಶೋಷಣ ಪ್ರಭಾವ ಗುಣ ಭೂಷಣ ಸಜ್ಜನ ಜೀವ 4 ಭೂತ ಪ್ರೇತ ಬ್ರಹ್ಮ ಪಿಶಾಚಂಗ ಳಾತುರದಿಂ ಬಾಧಿತರು ಖ್ಯಾತಿಯ ಮಾರುತಿ ನಾಮಾಮೃತವ ಪ್ರೀತಿಯಿಂ ಸವಿವರೋ ಭೀಮಾ 4 ಹಿಂದಣ ಜನ್ಮದ ಪಾಪದಿಂದ ನೊಂದರು ಪ್ರಾರ್ಥಿಸಿ ತಂದೆ ಭಾವದುರಿತಂಗಳನಂದು ನಿ ರ್ಬಂಧಿಸಿ ಕಳೆಯುವೆ ಬಂಧು 5
--------------
ಶಾಮಶರ್ಮರು
ಜಯ ಜಯ ವೈಷ್ಣವ ಪಯನಿಧಿ ಚಂದ್ರಗೆ ಜಯ ಜಯ ವ್ಯಾಸಯತೀಂದ್ರರಿಗೆ ಪ ಜಯ ಜಯ ವರ ಕರ್ಣಾಟಕ ಪತಿಗೆ ಜಯ ಸಿಂಹಾಸನವೇರಿದಗೆ ಅ.ಪ ನಾಕು ಶಾಸ್ತ್ರಗಳ ಪಾರಂಗತರಿಗೆ ಕಾಕುಮತಗಳನು ತುಳಿದವಗೆ ಆ ಕಮಲಾಪತಿ ಭಕುತವರೇಣ್ಯಗೆ ಶ್ರೀಕರ ಚಂದ್ರಿಕಾಚಾರ್ಯರಿಗೆ 1 ಹನುಮನ ಭಾಷ್ಯವ ಅಣಿಮಾಡಿದಗೆ ಹನುಮಗೆ ಭವನಗಳನು ಕಟ್ಟಿದಗೆ ಹನುಮನ ಯಂತ್ರದಿ ಬಿಗಿದಪ್ಪಿದಗೆ ಮುನಿತ್ರಯದಲಿ ಸೇರಿದ ದೊರೆಗೆ 2 ಮಾಯಾವಾದಗಳನು ಗೆಲಿದವಗೆ ನ್ಯಾಯಾಮೃತಧಾರೆಯ ಅಭಿಷೇಕದಿ ಆ ಯದುಪತಿಯನು ಕುಣಿಸಿದಗೆ 3 ಚಕ್ರಧರನ ಸುಳುಗಳ ತಿಳಿದವಗೆ ಮಿಕ್ಕಮತಗಳನು ಅಳಿದವಗೆ ವಕ್ರಯುಕುತಿಗಳನು ತುಕ್ಕುಡಗೈಯ್ಯವ ತರ್ಕ ತಾಂಡವದಿ ನಲಿದವಗೆ 4 ಕೃಷ್ಣದೇವರಾಯನ ಕುಲಪತಿಗೆ ಕಷ್ಟದ ಕುಹಯೋಗವ ಕೊಂದವಗೆ ಶಿಷ್ಟಜನಗಳಿಗೆ ಇಷ್ಟಾರ್ಥಗಳನು ವೃಷ್ಟಿಯಗೈವ ಪ್ರಸನ್ನರಿಗೆ 5
--------------
ವಿದ್ಯಾಪ್ರಸನ್ನತೀರ್ಥರು
ಜೋ ಜೋ ಶ್ರೀಗುರು ಪ್ರಹ್ಲಾದರಾಜ ಜೋಜೋ ಭಜಕರ ಕಲ್ಪಮ ಹೀಜ ಸ್ತಂಭ ದರ್ಶಿತ ನರಮೃಗರಾಜ ಜೋಜೋ ಭಂಗಾರಕÀಶಿಪುತನುಜ ಜೋ ಜೋ 1 ಚಂದ್ರಿಕಾದಿ ಸದ್ಗ್ರಂಥತ್ರಯದಿಂದಾ ನಂದಿತ ಭೂಮಿ ವೃಂದಾರಕ ವೃಂದಾ ವಂದಿಪರಘಕುಲ ಪನ್ನಗವೀಂದ್ರ ವಂದಿಸುವೆನು ಗುರು ವ್ಯಾಸಯತೀಂದ್ರ2 ಜೋ ಜೋ ಮಧ್ವಮತಾಂಬುಧಿ ಚಂದ್ರ ಜೋ ಜೋ ಮಾಯಿ ಮತ್ತೇಭ ಮೃಗೇಂದ್ರ ಜೋ ಜೋ ಜ್ಞಾನಾದಿ ಸದ್ಗುಣ ಸಾಂದ್ರ ರಾಜಾಧಿರಾಜ ಶ್ರೀ ಗುರು ರಾಘವೇಂದ್ರ 3 ಮಂತ್ರಮಂದಿರದಿ ನಿಂತು ಶೇವಕರ ಚಿಂತಿಪ ಫಲಗಳ ಕೊಡುವ ಉದಾರ ಎಂತು ತುತಿಸಲಿ ತನ್ಮಹಿಮೆ ಅಪಾರ ಮುಕ್ತಿ ಪಂಥವ ತೋರಿಸಿ ಮಾಡೊ ಉದ್ಧಾರ 4 ಶುಭ ಚರಿಯ ನಿರುತಸ್ಮರಿಪರಘ ತಿಮಿರಕೆ ಸೂರ್ಯ ಧರಿಸುರ ಶೇವಿತ ಪರಿಮಳಾಚಾರ್ಯ ಶಿರಿ ಕಾರ್ಪರನರಹರಿ ಗತಿ ಪ್ರಿಯ5
--------------
ಕಾರ್ಪರ ನರಹರಿದಾಸರು