ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಶ್ರೀ ಮಧ್ವಾಚಾರ್ಯರು ಸ್ಮರಿಸು ಸಂತತ ಗುರುಗಳಾ ಬಿಡದೆ ಅನುದಿನಾ ಪ ವಾತ ಭೀಮನ ಒಡೆಯ ವೇದವ್ಯಾಸಯುತ ಸಾರಂಗಧರನಆ ಪ್ರೇಮದಿಂದಲಿ ಭಜಿಪೆನಡಿಗಳ ಬಿಡದೆ ಅ.ಪ. ಮಂದ್ರಜಾಸನ ಸುತನ ವಚನ ಕೊಂಡು ಧರೆಯೊಳು ಬಂದು ಭಜಿಸುತ ಪೊಂದಿಪವರ ವೃಂದ ಹರಿಸಿ ಸುಗುಣ ಸುವೃಂದಗಳಿಗೆ ಬಂಧುಪರ ಗೋವಿಂದನೆಂಬುದ ಬೋಧಿಸಿದನ 1 ಮಂಗಳಾಂಗನ ಕೊಂಡು ತುಂಗಕುಲ ತೀರ್ಥರ ಶರದೀ ಬಂದೂ ಭೂಮಿಯೊಳು ಅನಂಗಪಿತನ ಒಲಿಸಿರಂಗರಾಜನ ದೂತನಿಂದಾ ವಿದ್ಯವಾ ಕೊಂಡು ಬಂದು ಪರಮಾದರದಿ ವ್ಯಾಸತ್ರಯಯುತ ಸುಧೆಯನಗರದನಂಘ್ರಿಯಾ 2 ರಘುಕುಲಾ ಜಲಧೀಗೆ ಜಲಜವೈರಿಯಂತೊಪ್ಪುವಾಮಾರನಯ್ಯ ಶಿರಿ ಪರಶು ಪಾಣೀ ಯಾತ ಜಡೆಧಾರ ತುರೀಯನಾಶ್ರಯಿಸೀ ಬಾಣರೂಪವಾ ಬಿಡದೆಬಾಣವಾ ಗುರಿ ಮಾಡಿಬಾಣವರದನ ಸರಿಯೆಂದೆನಿಸಿ ಬಾಣ ಭೇದವನೆ ಬೋಧಿಸಿಬೋಧತೀರ್ಥರ ಮತಾಧಿಪನ ತಂದೆವರದಗೋಪಾಲವಿಠಲನಭಜಕಾ 3
--------------
ತಂದೆವರದಗೋಪಾಲವಿಠಲರು
ಸ್ಮರಿಸುವೆನು ಗುರುರಾಯ ವರಮಂತ್ರ ಪುರಾಧಿಪ ಪೊರೆಯೊ ಎನ್ನನು ಜೀಯಾ ತವ ಮಹಿಮ ವರ್ಣಿಸ ಲರಿಯ ಮುರಹರಪ್ರೀಯಾ ಅಧ ಮಾಧಮನ ಮಮ ಪರಿಯ ನೀ ಬಲ್ಲೆಯ್ಯಾ ತೋರಯ್ಯಾ ದಯ ವರದ ಚರಿತೆಯ ಅರುಹುವದಕೆ ಪರವಾಕ್ಯರಣಿಯನು ಪಾಲಿಸಿ ನಿರುತ ಹರಿಗುರು ಚರಣದಲಿ ರತಿ ತ್ವರಿತ ಕರುಣಿಸು ರಾಘವೇಂದ್ರನೆ ಪ ಹಿಂದೆ ಕೃತಯುಗದಲಿ ಪ್ರಹ್ಲಾದ ನಾಮದಿ ತಂದೆ ಹಿರಣ್ಯಾಕ್ಷನಲಿ ಸರ್ವೋತ್ತಮನು ಹರಿ ದ್ವಂದ್ವ ಕರ್ಮವನಲಿ ಅರ್ಪಿಸಲು ಮಹದಾ ನಂದ ಪೊಂದುವರಲ್ಲಿ ಎಂದು ಪೇಳುತಿರೆ ಮಂದ ದೈತ್ಯವನಂದ ಮಾತಿಗೆ ಬಂಧನಾದಿಗ ಳಿಂದ ಶಿಕ್ಷಿಸೆ ಬಂದ ದುರಿತವನಂದು ಕಳೆದಾ ಕಂದನನು ಹರಿಪೊರೆಯೆ ದಿತಿಜನು ಒಂದೂ ತಿಳಿಯದೆ ಮಂದಿರ ಗೋವಿಂನೆಲ್ಲಿಹ ನೆಂದು ಕೇಳುತ ಮಂದರರೋದ್ಧಾರ ನಿಲ್ಲದಿಹ ಸ್ಥಳ ವಂದೂ ಇಲ್ಲವೂ ಎಂಂದು ಸಾರಿದೆ ತಂದು ತೋರಿಸು ಸ್ತಂಭದಲಿ ತವ ಇಂದಿರಾಪತಿಯೆಂದು ಗರ್ಜಿಸೆ ಕಂದನಾಡಿದ ಮಾತುಗಳನು ನಿಜ ವೆಂದು ನರಹರಿ ಪೊರೆದೆ 1 ಶ್ರೀಶನಾಜ್ಞೆಯ ವಹಿಸಿ ದ್ವಿತೀಯಾವತಾರದಿ ವ್ಯಾಸರಾಯನು ಎನಿಸಿ ಬ್ರಹ್ಮಣ್ಯರÀಲಿ ಸ ನ್ಯಾಸವನು ಸ್ವೀಕರಿಸಿ ಸರ್ವಜ್ಞ ಶಾಸ್ತ್ರಾಭ್ಯಾಸವನು ಪೂರೈಸಿ ವ್ಯಾಸತ್ರಯ ರಚಿಸಿ ದೇಶದೇಶಗಳನ್ನು ಚರಿಸುತ ಆ ಸಮಸ್ತ ಕುವಾದಿಗಳ ಮತ ನಾಶಗೊಳಿಸಿ ರ ಮೇಶ ಶ್ರೀ ವೆಂಕಟೇಶನನು ಬಹುದಿನವು ಪೋಜಿಸಿ ವಾಸಿಸುತ ಗಜರಾಮ ಪುರಧಾಧೀಶರಾಯನ ಕುಹಯೋಗವ ಪುರಂದರ ದಾಸರಿಂದೊಡಗೂಡಿ ಕೃಷ್ಣನುಪಾಸನೆಯ ಭಕ್ತಿಯಲಿ ಗೈಯುತ ವಾಸುದೇವನ ಶಿಲ್ಪ ಶಾಸ್ತ್ರದ ಶಾಸನಕೆ ಪ್ರತಿಯಾಗಿ ನಿಲ್ಲಿಸಿ ತೋಷಿಸಿದ ಸೌಭಾಗ್ಯ ವೈಭವ 2 ಪದುವ ಸಂಭವ ಜಾತ ಶ್ರೀ ರಾಘವೇಂದ್ರ ಸು ಪದವ ಪಡೆದ ಪ್ರಖ್ಯಾತ ಜಯತೀರ್ಥ ಮುನಿಕೃತ ಸುಧೆಗೆ ಪರಿಮುಳ ಗ್ರಂಧ ರಚಿಸಿ ಮೆರೆದಾತ ಬಧಿರ ಮೂಕಾಂಧ ವ್ಯಂಗ್ಯರು ವಿಧ ವಿಧಿದ ಘನರೋಗಗ್ರಸ್ತರು ಸದಯ ನೀಗತಿಯೆಂದು ಸೇವಿಸೆ ತ್ರಿದಶ ಭೂರುಹದಂತೆ ಸಲಹುವಿ ಕುಧರ ತೀರದಿ ಮೂಲ ರಘುಪತಿ ಪದವ ಪೂಜಿಸುತಲಿ ಸಜೀವದಿ ಮುದದಿ ವೃಂದಾವನ ಪ್ರವೇಶಿಸಿ ಪದುಮನಾಭ ಶ್ರೀ ಶಾಮಸುಂದರ ಮಧು ವಿರೋಧಿಯನು ಧ್ಯಾನಿಸುತ ಶಿರಿ ಸದನನು ವಲಿಸುತ್ತ ಕರುಣಾ ನಿಧಿಯು ಭಜಕರ ಪೊರೆವ ಮಹಿಮೆಯ 3
--------------
ಶಾಮಸುಂದರ ವಿಠಲ