ಒಟ್ಟು 4 ಕಡೆಗಳಲ್ಲಿ , 4 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಸಕಲವೆಲ್ಲವು ಶಿವನ ಲಿಂಗದೊಳಗಡಗಿದುದು ಲಿಂಗವೆ ಮಾಲಿಂಗವಾಗಿ ತೋರುವುದು ಪ ಭಕುತಿಕರು ಮಮತೆಯೊಳು ಸ್ಥಾಪಿಸಿಯೆ ಅರ್ಚಿಸಲು ಸುಕೃತಫಲವನು ಅಳೆವ ಕೊಳಗವನು ಕಾಣೆ ಅ.ಪ ಆ ಮಹಾ ಸಹಸ್ರನಾಮದೊಳಗತ್ಯದಿಕ ಸೊಮೇಶನೆಂದೆಂಬ ಸ್ವಾಮಿಯನು ಕಂಡು ಸೋಮವಾರದ ದಿವಸ ಸಾಮರುದ್ರವ ಜಪಿಸಿ ನೇಮದಿಂ ಪೂಜಿಸಲು ಕಾಮಿತದ ಫಲವು 1 ಇನ್ನೇನ ವರ್ಣಿಸುವೆ ಈಶ ನಿನ್ನಯ ಮಹಿಮೆ ಉನ್ನಂತವಾಗಿ ಜಗದೊಳು ಚರಿಸಿತು ಪನ್ನಗೇಶನ ಬಲದ ಪಶ್ಚಿಮದ ದೆಸೆಯೊಳ್ ಪ್ರ- ಸನ್ನವಾದನು ಸೋಮನಾಥನೆಂದೆನುತ2 ಪಾದ ಪ್ರತ್ಯಕ್ಷವಾಗಿಯೆ ಸೋಮೇಶನೆಂದೀಗ ತಾ ಮೆರೆದುದು ಭುಕ್ತಿ ಮುಕ್ತಿಯನಿತ್ತು ಪ್ರೇಮದಿಂ ಸಲಹುತ್ತ ಕಾಮಿತಾರ್ಥವನೀವ 3 ಲೋಕೋಪಕಾರಕ್ಕೆ ಸೋಮೇಶ ನೀ ಬಂದೆ ಗೋಕರ್ಣ ಶ್ರೀಶೈಲ ಕಾಶಿ ರಾಮೇಶ್ವರವು ಬೇಕೆಂಬುದಿಲ್ಲಿನ್ನು ಎನ್ನ ಭೀತಿಯ ಗಿರಿಯ ಕುಲಿಶ ನೀನು ಜಗದೀಶ 4 ಜೋಕೆಯೊಳು ಮನದೊಳಗೆ ಅಡಗಿಸಿಯೆ ಭಜಿಸಿದರೆ ಯಾಕೆ ಮನದೊಳು ಬಿಡುವೆ ಶಿವನಾಮವನು ನೀನು ಏಕೆ ಕಡೆಯಲಿ ಕೆಡುವೆ ಮರುಳು ಜೀವನವೆ 5 ಸಡಗರದಿ ಸರ್ವವೂ ನಿನ್ನಲ್ಲಿ ಅಡಗಿದುದು ಜಡೆಯೊಳಗೆ ಅಡಗಿದುದು ಪೊಡವಿಗುತ್ತಮ ನದಿಯು ಉಡುಪತಿಯು ಅಡಗಿದನು ಊಧ್ರ್ವ ಫಣೆಯೊಳಗೆ ಪಿಡಿಯೊಳಗೆ ಅಡಗಿದುದು ವೇದ ಮೃಗರೂಪಾಗಿ 6 ಕಿಚ್ಚು ಅಡಗಿತು ಅವನ ಅಚ್ಚ ಹಣೆಗಣ್ಣಿನೊಳು ಮುಚ್ಚಿ ತೆರೆವಕ್ಷಿಯೊಳು ಮೂಜಗದ ಬೆಳಕು ಬಿಚ್ಚಿಟ್ಟಿ ವಿಷಕಂಠದೊಳು ಲೋಕವನು ಎಚ್ಚರಿಪ ಮಂತ್ರಗಳು ಬಾಯೊಳಗಡಗಿದುದು 7 ಶುದ್ಧ ಸ್ಫಟಿಕ ಥರದ ಕಾಯಕಾಂತಿಗಳುಳ್ಳ ಬದ್ಧುಗೆಯ ದಾರದಂದದಿ ಉರಗನೊಪ್ಪುಗಳು ಉದ್ದಿಶ್ಯವಾಗಿ ಭಜಿಸಿದ ಭಕ್ತರುಂಡಗಳು ತಿದ್ದಿಟ್ಟಿ ಆಭರಣ ತಿರಿಶೂಲಧರಣ 8 ಪುಲಿಕರಿಯ ಪೊಳವುಗಳು ನಳನಳಿಪ ವಸನಗಳು ಹೊಳೆವ ಮುಖತೇಜಗಳು ನಳಿನನೇತ್ರಗಳು ನಲಿವಗಣ ಕೋಟಿಗಳ ಮಧ್ಯದೊಳು ಕೈಲಾಸ ಇಳಿದು ಬಂದನು ನಮ್ಮ ಬಳಿಗೆ ಸೋಮೇಶ 9 ನಾಸಿಕದಿ ಕೌಮಾರಿಗವಧಿಯಾಗಿಹ ಸ್ಥಳ ವಿ- ಶೇಷವಾಗಿಹ ಶುದ್ಧ ರೌಪ್ಯಪುರದೊಳಗೆ ಭೂಸುರೋತ್ತಮಗೊಲಿದು ಭೂರಿಭಾಗ್ಯವನಳೆದು ವಾಸವಾದೆಯೊ ಜಗದೀಶ ಸೋಮೇಶ 10 ಭಾಳನೇತ್ರನೆ ನೀಲಕಂಠ ಶೂಲಾಸ್ಥಿಧರ ಕಾಲರುದ್ರ ವ್ಯಾಳಭೂಷ ಸರ್ವೇಶ ಲಾಲಿಸೈ ಬಿನ್ನಪವ ಪಾಲಿಸೆನ್ನನು ಬೇಗ ಬಾಲಕನು ಅಲ್ಲವೇ ಭಕ್ತಸುರಧೇನು 11 ಸಾರಿ ನೋಡಿರೊ ಮೂರು ಲಿಂಗವನು ನೀವೀಗ ಧಾರುಣಿಯಳೊಂದು ಶಿವಲಿಂಗವನು ಬೇಗ ಮೇರುವಿಗೆ ಸಮವಾದ ಹೇಮವನು ವಿಪ್ರರಿಗೆ ಧಾರೆಪೂರ್ವಕವಾಗಿ ಇತ್ತ ಫಲ ಒದಗುವುದು 12 ಶಿವನ ಪೂಜೆಯೆ ಭಕ್ತಿ ಶಿವನ ಪೂಜೆಯೆ ಮುಕ್ತಿ ಶಿವಮಂತ್ರವೆ ಶಕ್ತಿ ಶಿವನೆ ಪರಶಕ್ತಿ ಶಿವನಾಮವನು ಭಜಿಸಿ ಸಿರಿಯ ಪಡೆದನು ಹರಿಯು ಶಿವನ ಮರೆಯದೆ ಭಜಿಸು ಇಹಪರವ ಸೃಜಿಸು13 ನಿನ್ನನೇ ನಂಬಿದೆನು ಉನ್ನತಾನಂತೇಶ ಮನ್ನಿಸಿ ದಯದೋರು ಚಂದ್ರಮೌಳೀಶ ಇನ್ನು ಭಯವಿಲ್ಲೆನೆಗೆ ಹರಸೆನ್ನ ಸೋಮೇಶ ಎನ್ನೊಡೆಯ ಶ್ರೀಕೃಷ್ಣ ವರಾಹತಿಮ್ಮಪ್ಪ 14
--------------
ವರಹತಿಮ್ಮಪ್ಪ
ಇಂದುಶೇಖರಾ ಮನ್ನಿಸೋ ದಯದಿಂದ ಶಂಕರಾ ಪಪಂಚವಕ್ತ್ರನೆ ಪಾಲಿಪುದು ತ್ರಿಪಂಚನೇತ್ರನೆಪಂಚಭೂತ ತನು'ದೆನಗೆ ಪಗೆಯಾಗಿದೆ ನೋಡಯ್ಯಾವಂಚಕನು ನೀನೆಂದೆನ್ನ ವಾರೆನೋಡಬೇಡಯ್ಯಾಸಂಚರಿಪ ಮನಕೆ ಮನುವ ತೋರಿ ನೋಡಬೇಡಯ್ಯಾಪಂಚಶಿರದ ನಾಮಾಧೀಶ ಪರಮ ಕೃಪೆಮಾಡಯ್ಯಾ 1ವ್ಯಾಳಭೂಷಣನೆ ಬಿನ್ನಪವನ್ನು ಕೇಳು ಈಶನೆಏಳು 'ಷಯ ವ್ಯಸನಾದಿಗಳಿಂದೇಳಿಗೆಯ ಘನವಾದಾಳಿವರಿದಾ ಕರಣಾತಡಿಗೆ ಧೈರ್ಯ ಕಲಿತನವಾತಾಳಲಾರೆನಯ್ಯಾ ಎನ್ನ ತನು'ನವಗುಣವಾಫಾಲನೇತ್ರ ಬಿಡಿಸೊ ನಿನ್ನ ನೆನ'ಗಿತ್ತಭಯವಾ 2ಕಾಮನಾಶನೆ ಕರುಣಿಸಯ್ಯಾ ವ್ಯೋಮಕೇಶನೆಹೇಮ ಭೂ'ು ಹೆಣ್ಣಿಗಾಗಿ ಹೇಳಲೇನ ನೊಂದೆನೈತಾಮಸಗುಣಂಗಳಿಂದ ತಾಪಹೆಚ್ಚಿ ಬೆಂದೆನೈಕಾ'ುನಿಯರೆಡೆಯೊಳೆನ್ನ ಕಾಡಬೇಡವೆಂದೆನೈನಾಮರೂಪಕ್ರಿಯಾರ'ತ ನೀನೆ ಗತಿಯೆಂದೆನೈ 3
--------------
ತಿಮ್ಮಪ್ಪದಾಸರು
ಭವ ಭಸಿ- ತಾಂಗನ ನೋಡಿದೆ ಪ. ರಂಗನ ತನ್ನಂಗದೊಳಗೆ ಇಟ್ಟು ಹಿಂಗದೆ ನೆನೆಯುವ ಮಂಗಳ ಮೂರುತಿ ಅ.ಪ. ತ್ಯಕ್ಷನ ನೋಡಿದೆ | ಕರುಣಕ- ಟಾಕ್ಷನ ನೋಡಿದೆ ವೀಕ್ಷಣದಿಂದ ಶ್ರೀ ವಕ್ಷನ ಸುತನನು ಶಿಕ್ಷಿಸಿದ ಫಾಲಾಕ್ಷನ ಶಿವನ 1 ಹರನನು ನೋಡಿದೆ | ಗಂಗಾ- ಧರನನು ನೋಡಿದೆ ಗಿರಿಜೆವಲ್ಲಭ ಭಾಸುರ ವಂದಿತನಾ ಸರಿತು ತುಂಗ ಪಂಪಾಪುರವಾಸನ 2 ಶೂಲಿಯ ನೋಡಿದೆ | ರುಂಡ ಮಾಲಿಯ ನೋಡಿದೆ ಕೈಲಾಸದಿ ಉಮೆ ಲೋಲನೆನಿಸಿ ಇಲ್ಲಿ ವ್ಯಾಳಭೂಷಣನಾಗಿ ಲೀಲೆಯೊಳ್ ಮೆರೆವನ 3 ಈಶನ ನೋಡಿದೆ | ನರಹರಿ ದಾಸನ ನೋಡಿದೆ ಪಾಶುಪತಾಸ್ತ್ರವ ವಾಸವಜನಿಗಿತ್ತ ಪೋಷಿಕಿರಾತನ ವೇಷನ ಹರುಷದಿ 4 ದಿಟ್ಟನ ನೋಡಿದೆ | ವೈಷ್ಣವ ಶ್ರೇಷ್ಠನ ನೋಡಿದೆ ವೃಷ್ಣೀಶ ಗೋಪಾಲಕೃಷ್ಣವಿಠ್ಠಲನಿಗೆ ಪುಟ್ಟ ಮೊಮ್ಮಗನಾಗಿ ತುಷ್ಟಿಪಡಿಸುವನ5
--------------
ಅಂಬಾಬಾಯಿ
ಮಂಗಲಂ ಜಯಮಂಗಲಂತ್ರಿಜಗಂಗಳ ಪೊರೆವ ಶ್ರೀಮೂಕಾಂಬೆಗೆ ಪ ಗೌರಿಗೆ ಗುಹಜನನಿಗೆ ಗಿರಿಜಾತೆಗೆಧೀರಮಹಿಷ ದೈತ್ಯಮರ್ದಿನಿಗೆಕಾರುಣ್ಯನಿಧಿಗೆ ಕಾಮಿತಫಲದಾತೆಗೆನಾರದನುತೆಗೆ ನಾರಾಯಣಿಗೆ 1 ಶರದಿಂದುಮುಖಿಗೆ ಶಂಕರಿಗೆ ಶರ್ವಾಣಿಗೆದುರಿತ ದಾರಿದ್ರ್ಯಹರ್ತೆಗೆ ದುರ್ಗಿಗೆಪರಮೇಶ್ವರಿಗೆ ಪಾವನಚರಿತೆಗೆ ಶುಭಕರಿಗೆ ಸಮಸ್ತಮಂತ್ರೇಶ್ವರಿಗೆ 2 ರಾಜಶೇಖರಿಗೆ ರಾಜೀವನೇತ್ರಗೆ ರಕ್ತಬೀಜ ಶಾಸಿನಿಗೆ ಭುವನಮಾತೆಗೆತೇಜೋಮಯಿಗೆ ತರಣಿಕೋಟಿ ಭಾಷೆಗೆಶ್ರೀ ಜನಾರ್ದನನ ಸಹೋದರಿಗೆ 3 ಕಾಳಿಗೆ ಕಾಮರೂಪಿಣಿಗೆ ಕೌಮಾರಿಗೆಕಾಳರಾತ್ರಿಗೆ ಕಾತ್ಯಾಯನಿಗೆವ್ಯಾಳಭೂಷಿಣಿಗೆ ಯೋಗಿನಿಗೆ ರುದ್ರಾಣಿಗೆಭಾಳನೇತ್ರೆಗೆ ಭಯಹಾರಿಣಿಗೆ4 ಚಂಡಿಗೆ ಚಕ್ರಪಾಣಿಗೆ ಚಾತುರ್ಭುಜೆಗೆಮುಂಡಿಗೆ ಧೂಮ್ರಲೋಚನಹತ್ರ್ರೆಗೆಚಂಡಮುಂಡಾಸುರರಸುರಣರಂಗದಿದಿಂಡುದರಿಂದ ಸರ್ವಮಂಗಲೆಗೆ5
--------------
ಕೆಳದಿ ವೆಂಕಣ್ಣ ಕವಿ