ಚದುರಂಗನಾಡುವ ನೋಡಿರೇ |
ಮದನಮೋಹನ ಕೃಷ್ಣ ನಿಜ ಶಕ್ತಿಯೊಡನೆ ಪ
ಭೂಮಿಯ ಹಲಗಿಲಿ ಕಾಯದ ಮನೆಯೊಳು |
ವ್ಯಾಮೊಹಿ ಜೀವನು ಅರಸನಿಲ್ಲಿ |
ನೇಮದಿ ಪುಣ್ಯ ಪಾಪದ ಪಲಗಳಿಸುವ |
ಈ ಮನೆವೆಂಬ ಪ್ರಧಾನಿಯನಿಟ್ಟು 1
ಪ್ರಾಣಪಾನವೆಂಬ ಎರಡಾನೆ ನಿಲ್ಲಿಸಿ |
ನಾನು ನನ್ನದು ಎಂಬ ಒಂಟೆಗಳ |
ಜಾಣತನದ ಬುದ್ದಿ ಚಿತ್ತದ ಕುದುರೆ | ನಿ
ಧಾನ ದಶೇಂದ್ರಿಯ ಕಾಲಾಳಿನಿಂದ 2
ಕಾಲಸೂತ್ರದಿ ನಡಿಸ್ಯಾಡುತ ಕೃತಕರ್ಮ |
ಮೂಲದಿ ಹಾನಿವೃದ್ದಿಗಳಿಹವೋ |
ಮೇಲೆ ಯಶಾಪಯಶ ಪಾಲಿಗೆ ತರುವ | ನೃ
ಪಾಲಕ ಮಹಿಪತಿನಂದನ ಜೀವನ 3