ಭಾವೀ ಸಮೀರ ಶ್ರೀವಾದಿರಾಜರು
ಕಾಯ ಕಾಯ ಬೇಕಯ್ಯ ಪ
ಕಾಯ ಬೇಕೈ | ವಿಪ ಅಹಿಪ ಸುರಪಾದಿ ವಂದ್ಯವೆ |ವಿಪುಲ ಪಾಪಾಳಿಗಳ ಹರಿಸೀ | ಸುಪಥ ಸದ್ಗತಿಗೆನ್ನ ಒಯ್ದು ಅ.ಪ.
ಗೌರಿದೇವಿಯ ಉದರಸಂಭವನೆ | ಹಯಾಸ್ಯನಂಘ್ರಿಸರಸಿರುಹದಲಿ ಮಧುಪ ನೆನಿಸಿದನೆ ||ದ್ವಾರಕಾದಿ ಕ್ಷೇತ್ರ ಚರಿಸುತ | ಥೋರ ಹಿಮಗಿರಿ ಸೇತುಯಾತ್ರೆಯಸಾರಿ ಸತ್ತೀರ್ಥ ಪ್ರಬಂಧವ | ಧೀರ ನೀ ರಚಿಸುತ್ತ ಮೆರೆದೆಯೊ 1
ಲಕ್ಷಿಸುತ್ತಲಿ ಮಾತೆ ಬಿನ್ನಪವ | ಮಹ ಭಾರತಸ್ಥಲಕ್ಷಪದ ಬಹು ಕ್ಲಿಷ್ಟವೆನಿಸೂವ ||ಲಕ್ಷಣದಿ ಸದ್ಯುಕ್ತ ಪದಗಳ | ಈಕ್ಷಿಸುತ ಅವಕರ್ಥ ಪೇಳುತಲಕ್ಷಸದ್ದಾಭರಣ ಮಾಲಿಕೆ | ಲಕ್ಷ್ಮಿಪತಿ ಹಯಾಸ್ಯಗರ್ಪಿತ 2
ಸೇವಿಸುತ್ತಿಹ ವಿಪ್ರನಾದವನ | ಕೌಟಿಲ್ಯ ಕಂಡುತೀವ್ರದಿಂದಲಿ ಶಾಪವಿತ್ತವನ ||ಭಾವ ತಿಳಿದು ಬೊಮ್ಮರಾಕ್ಷಸ | ಭಾವತಾಳೆಂದೆನುತ ಪೇಳಲುತೀವ್ರ ಯಾಚಿಸೆ ಕ್ಷಮೆಯ ಮಂತ್ರವ | ಆವ ಆಕಾಮ್ಮೈವ ನೊರೆದೆ 3
ಮರಳಿ ಉತ್ತರ ಯಾತ್ರೆಯಲ್ಲಿರಲು | ಗುರು ವಾದಿರಾಜರಅರಿಯದಲೆ ತನ್ಮಂತ್ರ ಪೇಳಲು ||ಒರೆದರೂ ರಂಡೇಯ ಮಗ ನೀ | ನಿರುತಿರುವೆನ ಸ್ನಾತ ಕಾರ್ತಿಕಮರಳಿ ಮಾಘಾಷಾಢ ವಿಶಿಖದಿ | ಹರಿಯಿತೂ ನಿನ ಶಾಪವೆಂದರು 4
ಆತುಗುರುಪದ ಕ್ಷಮೆಯ ಪ್ರಾರ್ಥಿಸಲು | ಗುರುರಾಜರಾಗಭೂತ ರಾಜನು ನೀನೆ ಎನ್ನುತಲು ||ಖ್ಯಾತಿ ಪೊಂದುತ ಭಾವಿರುದ್ರನೆ | ಪೊತ್ತು ಎನ್ನಯ ಮೇನೆ ಮುಂಗಡೆಕೌತುಕವ ತೋರುತ್ತ ಮೆರೆವುದು | ಪೋತ ಭಾವದಿ ತಮಗೆ ಎಂದರು 5
ಕಾಕು ಶೈವನ ಖಂಡಿಸುತ್ತಲಿಆಕೆವಾಳರ ಪೊರೆದು ದಶಮತಿ | ತೋಕನೆಂದೆನಿಸುತ್ತ ಮೆರೆದೇ 6
ಭೂವಲಯದೊಳು ಕಾರ್ಯ ಪೂರೈಸಿ | ಬದರಿಯಿಂದಲಿಭಾವಿ ಶಿವನಿಂ ಪ್ರತಿಮೆ ರಥತರಿಸೀ ||ದೇವ ಗೃಹ ಸಹ ವಿರುವ ವಿಗ್ರಹ | ತ್ರೈವಿಕ್ರಮನ ಸಂಸ್ಥಾಪಿಸುತ್ತಭಾವ ಭಕ್ತಿಯಲಿಂದ ಉತ್ಸವ | ತೀವರದಿ ರಚಿಸುತ್ತ ಮೆರೆದೆ 7
ಹಂಚಿಕಿಂದಲಿ ಪೂರ್ವರಚಿತೆನ್ನ | ವೃಂದಾವನಂಗಳುಪಂಚ ಸಂಖ್ಯೆಯಲಿಂದ ಮೆರೆವನ್ನೆ ||ಮುಂಚೆಯೇ ಸ್ಥಾಪಿತವು ಎನ್ನುವ | ಪಂಚರೂಪೀ ವ್ಯಾಸ ಸಮ್ಮುಖಸಂಚುಗೊಳಿಸೀ ಸ್ಥಾಪಿಸುತ್ತ | ಕೊಂಚವಲ್ಲದ ಕಾರ್ಯ ರಚಿಸಿದೆ 8
ಯುಕ್ತಿಮಲ್ಲಿಕೆ ರುಕ್ಮೀಣೀಶ ಜಯ | ಗುರ್ವರ್ಥ ದೀಪಿಕೆಮತ್ತೆ ಪರಿಪರಿ ಶಾಸ್ತ್ರ ಗ್ರಂಥಗಳ ||ವಿಸ್ತರಿಸಿ ಭುವನದಲಿ ಮೆರೆದೆ | ಉತ್ತಮೋತ್ತಮ ದೇವ ದೇವನುಕರ್ತೃ ಶ್ರೀಹಯ ಮುಖನು ಎನ್ನುತ | ವತ್ತಿ ಪೇಳುತ ವ್ಯಾಪ್ತಿಸಾರಿದೆ 9
ಶಿಷ್ಟ ಜನ ಸಂಸೇವ್ಯ ಧೀವರನೆ | ಶಮದಮಾನ್ವಿತಕಷ್ಟಹರ ಕಾರುಣ್ಯ ಸಾಗರನೇ ||ಕುಷ್ಟ ಅಪಸ್ಮಾರ ರೋಗದ | ಅಟ್ಟುಳಿಯ ಕಳೆಯುತ್ತ ಮೃತ್ತಿಕೆಸುಷ್ಠುಸೇವನೆಯಿಂದ ಭಕ್ತರ | ಇಷ್ಟವನೆ ಸಲಿಸುತ್ತ ಮೆರೆವೆ 10
ಹಯಾಸ್ಯ ವಾಹನ | ಬಿಡದೆ ಏರುತ ಸಾರ್ದೆ ಹರಿಯನು 11