ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ರಾಜೀವದಳನೇತ್ರ ರಾಮಚಂದ್ರನೆ ಶುಭ- ನಾಮಧೇಯನೆ ನಿನಗಾನಮಿಸುವೆನು ಪ ರಾಮರಾಕ್ಷಸಕುಲ ಭಯಂಕರ ರಾಮದಶರಥ ಪುತ್ರನೆ ವರ ಸಾಮಗಾನ ವಿಲೋಲ ಶ್ರೀವರ ರಾಮ ಭರತ ಶತ್ರುಘ್ನ ಪಾಲಕ ಅ.ಪ ಸುರರೆಲ್ಲ ನೆರೆದು ಋಷಿವರರೆಲ್ಲ ಒಂದಾಗಿ ವರ ಕ್ಷೀರಾಂಬುಧಿಯ ಸಾರುತ ವೇಗದಿ ಪರಮಾತ್ಮ ನಿನ ಕಂಡು ಪರಿಪರಿ ಸ್ಮರಿಸುತ ನೆರೆದರು ದೇವ ಗಂಧರ್ವ ನಾರದರೆಲ್ಲ ಗರುಡ ಗಮನನೆ ಉರಗಶಯನನೆ ಪರಮ ಪುರುಷನೆ ಪುಣ್ಯಚರಿತನೆ ತ್ವರದಿ ಎಮ್ಮಯ ಮೊರೆಯ ಕೇಳೆಂದು ಭರದಿ ಪ್ರಾರ್ಥನೆ ಮಾಡುತಿಹರು 1 ಖೂಳ ದೈತ್ಯರು ನಮ್ಮ ಬಾಳಗೊಡರೊ ದೇವ ಭಾಳ ವ್ಯಾಕುಲರಾಗಿ ದು:ಖಿಪೆವು ಕೇಳಿ ತಡಮಾಡದೆ ಪಾಲಿಸಿ ಸಲಹಯ್ಯ ಶ್ರೀಲೋಲ ಶ್ರೀವರ ಶ್ರೀವತ್ಸಲಾಂಛನ ಶ್ರೀಶ ಶ್ರೀ ಭೂದೇವಿ ರಮಣನೆ ಮಾತುಳಾಂತಕ ಮದನಜನಕನೆ ವಾಸುದೇವನೆ ಭಜಿಪ ಭಕ್ತರ ಸೋಸಿನಲಿ ರಕ್ಷಿಸುತ ಪೊರೆಯುವೆ 2 ಭಕ್ತವತ್ಸಲ ಸ್ವಾಮಿ ಭಕ್ತರ ಸುರಧೇನು ಯುಕ್ತ ಮಾತುಗಳಾಡಿ ಸಂತಯಿಸಿ ಸತ್ಯ ಸಂಕಲ್ಪನು ಮತ್ತವರನು ಕಳುಹಿ ಸತ್ಯಸಂಧನ ದಶರಥನುದರದಿ ಪುಟ್ಟಿ ಮತ್ತೆ ವಿಶ್ವಾಮಿತ್ರ ಬರಲು ಅರ್ಥಿಯಲಿ ಯಾಗವನೆ ನಡೆಸಲು ಸುತ್ತಿ ಬರುವ ಸುರರನೆ ಸದೆದು ಮತ್ತೆ ಯಾಗ ನಿರ್ವಿಘ್ನ ಮಾಡಿದ 3 ಸೀತಾಸ್ವಯಂವರಕ್ಕಾಗಿ ಬರುತಿರಲಾಗವರು ಗೌತಮ ಸತಿಯ ಶಾಪಹರಿಸಿ ಪಾತಕಿ ತಾಟಕಿಯನು ಕೊಂದು ಹರುಷದಿ ನಿ- ರ್ಭೀತನಾಗಿ ಮಿಥಿಲಾಪುರಕೆ ಸೇರಲು ಬಂದು ಆತ ಲಕ್ಷ್ಮಣನೊಡನೆ ಶಿವಧನು ನೀತಿಯಿಂದೆತ್ತುತಲಿ ಸೀತೆಯು ಪ್ರೀತಿಯಲಿ ವನಮಾಲೆ ಹಾಕಲು ಆಕೆಯ ಕೈಪಿಡಿದ ರಾಮನೆ 4 ರಾಮಲಕ್ಷ್ಮಣ ಭರತ ಶತ್ರುಘ್ನರಿಗೆ ಲಗ್ನ ನೇಮದಿಂದಲಿ ಮಾಡಿ ಕಳುಹಲಾಗ ಸಾಮಜವರ ಅಯೋಧ್ಯಾಪುರದಿ ಭಕ್ತ- ಸ್ತೋಮವನೆರಹಿ ರಾಜ್ಯಾಭಿಷೇಕವ ನಡಸೆ ಆ ಮಹಾಮುನಿ ಸ್ತೋಮ ಸುರಗಣ ರಾಮನಿಗೆ ಪಟ್ಟವೆನುತ ಹರುಷಿಸೆ ಆ ಮಹಾಕೈಕೆ ವರವ ಬೇಡುತ ರಾಮನಿಗೆ ವನವಾಸವೆನಲು 5 ವನವನ ಚರಿಸುತ ಘನರಕ್ಕಸರ ಕೊಂದು ವನಜಾಕ್ಷಿ ಮಾಯಾಮೃಗವೆ ಬೇಡಲು ವನಮೃಗ ಬೆನ್ನಟ್ಟಿ ತರುವೆನೆನುತ ಪೋಗಿ ಬಣಗು ರಾವಣ ಸೀತಾಹರಣವ ಮಾಡಲು ಕುರುಹು ಕಾಣದೆ ಸೀತೆಯ ವನವನದಿ ಚರಿಸುವ ಸಮಯದಲಿ ಕಪಿ ವರರ ಸೈನ್ಯವ ಕಳುಹಿ ಮುದ್ರಿಕೆ ಇತ್ತು ಜನಕ ಜಾತೆಯ ನೋಡಿ ಬರಲು 6 ಕಡಲ ಕಟ್ಟುತ ಸೈನ್ಯ ನಡಿಸಿ ಯುದ್ಧವ ಮಾಡೆ ಬಿಡದೆ ರಾವಣ ಸಹಿತೆಲ್ಲರನು ಕೊಂದು ಕಡು ಭಕ್ತನಿಗೆ ಲಂಕಾಪುರದಲಿ ಪಟ್ಟವ ಕಟ್ಟಿ ಮಡದಿ ಸಹಿತ ಪುಷ್ಪಕವನೇರಿ ಬರುತಿರೆ ಸಡಗರದಿ ಹನುಮಂತ ಭರತಗೆ ಒಡೆಯ ಬರುತಿಹನೆಂದು ಪೇಳಲು ಕಡುಹರುಷದಿ ಅಯೋಧ್ಯೆಯನಾಳಿದ ಕಡಲೊಡೆಯ ಕಮಲನಾಭ ವಿಠ್ಠಲನೆ 7 ಬಂದ ಶ್ರೀರಾಮಚಂದ್ರ ಭಾಗವತರ ಕೂಡಿಇಂದಿರೆ ಜಾನಕಿ ಸೌಮಿತ್ರಿ ಸಹಿತದಿ
--------------
ನಿಡಗುರುಕಿ ಜೀವೂಬಾಯಿ
ಶ್ರೀಗೋಪಾಲ ಕೃಷ್ಣಾತ್ಮಕ ಶ್ರೀರಾಮ ಭಜನೆ ರಾಮ ರಾಮ ಜಯರಾಮ ಪರಾತ್ಪರ | ನೌಮಿ ಪದಾಂಬುಜ ಶ್ರೀರಾಮಸೋಮ ಕುಲೋದ್ಭವ ಭೂಮ ಗುಣಾರ್ಣವ | ಕಾಮ ಪಿತನೆ ಶ್ರೀಕೃಷ್ಣ 1 ಖೂಳರ ಬಾಧೆಗೆ ಸುಜನರು ಮೊರೆಯಿಡೆ | ಪಾಲುಂಬುಧಿ ಶಯ ಶ್ರೀರಾಮಪಾಲಿಪೆನೆಂದ್ವರ ಪಾಲಿಸಿದನು | ಪಾಲಾಂಬುಧಿಶಯ ಶ್ರೀಕೃಷ್ಣ 2 ದಶಮುಖ ದೈತ್ಯನು ಲೋಕವ ಬಾಧಿಸೆ | ದಶರಥಗುದಿಸಿದ ಶ್ರೀರಾಮವಸುಧೆಯ ಭಾರವ ನೀಗುವೆನೆಂ | ದ್ವಸುದೇವ ಸುತನಾದ ಶ್ರೀಕೃಷ್ಣ 3 ಅನುಜರು ಲಕ್ಷ್ಮಣ ಭರತ ಶತೃಘ್ನರ | ಅನುಮೋದಿಸುತಲಿ ಶ್ರೀರಾಮಅನುಜನು ತಾ ಬಲರಾಮನಿಗಾಗುತ | ಅನುಜೆಯಳೊಂದಿಗೆ ಶ್ರೀಕೃಷ್ಣ4 ಶಿಶುತನ ಲೀಲೆಯ ದಶರಥಗೇ | ಕೌಸಲ್ಯಗೆ ತೋರಿದ ಶ್ರೀರಾಮಶಿಶುತನ ಲೀಲೆ ಯಶೋದೆಗೆ ನಂದೆಗೆ | ಸಂತೋಷವು ಶ್ರೀಕೃಷ್ಣ 5 ಯಾಗವ ರಕ್ಷಿಸೆ ಕರೆದೊಯ್ದನು | ಆ ಗಾಧಿಜ ನಿನ್ನನು ಶ್ರೀರಾಮಬಾಗುತ ಬಂದ ಕ್ರೂರನು ಧನು | ರ್ಯಾಗಕೆ ಒಯ್ದ ನಿನ್ನ ಶ್ರೀಕೃಷ್ಣ 6 ಮಾರ್ಗದಿ ಮಂತ್ರಗಳುಸುರಿದ ಮುನಿ | ನೈರರ್ಗಳದೀ ಶ್ರೀರಾಮಗರ್ಗಾಚಾರ್ಯನು ಭೋದಿಸೆ ಮಂತ್ರವ | ನಿರ್ಗಮಿಸಿದೆಯೋ ಶ್ರೀಕೃಷ್ಣ 7 ಪ್ರಥಮದಲಾಹುತಿ ಇತ್ತೆಯೊ ಕ್ರತುವಿಗೆ | ದಿತಿಜೆಯ ತಾಟಕಿ ಶ್ರೀರಾಮದಿತಿಜೆಯು ಪೂಥಣಿ ಅಸುವನು ಹೀರಿದೆ ಪ್ರಥಮದಿ | ಕವಳಕೆ ಶ್ರೀಕೃಷ್ಣ 8 ಅಸುರ ಸುಬಾಹುವನಳಿಯುತಲಬ್ದಗೆ | ಎಸೆದೆ ಮಾರೀಚನ ಶ್ರೀರಾಮ |ಉಸಿರನು ಹೀರಿದೆ ತೃಣವರ್ತನ ನೀ | ಅಸುರ ಶಕಟನ ಅಳಿದೆಯೊ ಶ್ರೀಕೃಷ್ಣ 9 ಚಾರು ಸುಂದರನೇ ಶ್ರೀರಾಮತೋರಿದೆ ವದನದಿ ವಿಶ್ವವ ಮಾತೆಗೆ | ಚಾರ್ವಾಂಗನೆ ಶ್ರೀಕೃಷ್ಣ 10 ವರಪದ ಶಿಲೆ ಸೋಕಲಹಲ್ಯಾ | ಶಾಪ ವಿಮೋಚನೆ ಶ್ರೀ ರಾಮವರಳೆಳೆಯುವಾಗ ಮಣಿಗ್ರೀವರ | ಶಾಪ ವಿಮೋಚನೆ ಶ್ರೀಕೃಷ್ಣ 11 ವ್ಯಾಕುಲರಾಗಿದ್ದಾ ಋಷಿಕುಲ ನಿ | ರಾಕುಲರಾದರು ಶ್ರೀರಾಮಗೋಕುಲವೂ ತವ ಲೀಲೆಗಳಿಂ ನಿ | ರಾಕುಲ ವಾಯಿತು ಶ್ರೀಕೃಷ್ಣ 12 ವೃಂದಾರಕ ವೃಂದವ ಸಲಹಿದನೂ | ಸುಂದರ ಮೂರುತಿ ಶ್ರೀರಾಮವೃಂದಾವನ ವೃಂದವ ಸಲಹೆ ದು | ರ್ವೃಂದವನಳಿದನು ಶ್ರೀಕೃಷ್ಣ 13 ಭಾಮಿನಿ ಸೀತೆಯ ಸ್ವಯಂವರ ನೇಮದಿ | ಪ್ರಾಣಿ ಗ್ರಹಣ ಶ್ರೀರಾಮಭೈಷ್ಮೀ ರುಕ್ಮಿಣಿ ಸ್ವಯಂವರ ನೇಮದಿ | ಪಾಣಿ ಗ್ರಹಣ ಶ್ರೀಕೃಷ್ಣ 14 ಭಾರ್ಗವನೂ ತಾ ನೊಂದೆಂಬುದ ನೈ | ರರ್ಗಳ ತೋರ್ದನು ಶ್ರೀರಾಮ |ವಾಕು ಸಲಿಸೆ ಬಹು ಪತ್ನಿಯರಾಳಿದ |ಏಕ ಮೇವ ತಾ ಶ್ರೀಕೃಷ್ಣ 15 ಏಕಮೇವ ತಾನೇಕ ಪತ್ನಿತ್ವವ | ಲೋಕಕೆ ತೋರಿದ ಶ್ರೀರಾಮ |ವಾಕು ಸಲಿಸೆ ಬಹು ಪತ್ನಿಯರಾಳಿದ | ಏಕಮೇವ ತಾ ಶ್ರೀಕೃಷ್ಣ 16 ರಾಜ್ಯವ ಬಿಟ್ಟನ ರಾಜ್ಯವ ಸಾರ್ದ ನಿ | ರ್ಲಜ್ಜರ ಸದೆಯಲು ಶ್ರೀರಾಮರಾಜ್ಯವ ಕಟ್ಟಿ ಸ್ವರಾಜ್ಯವ ಮಧುರೆಲಿ ನಿ | ರ್ಲಜ್ಜರ ಹನ ಶ್ರೀಕೃಷ್ಣ 17 ಭಂಜನ ಶ್ರೀಕೃಷ್ಣ 18 ದಂಡಕ ವನದಲಿ ಪುಂಡರ ದಂಡಿಸೆ | ದಂಡವ ಪಿಡಿದನು ಶ್ರೀರಾಮ |ಮಂಡೆಯ ಪಿಡಿದು ಕಂಸನ ಶಿರ | ಚೆಂಡಾಡಿದನು ಶ್ರೀಕೃಷ್ಣ 19 ಶಬರಿಯ ಭಕ್ತಿಗೆ ಎಂಜಲ ಮೆ | ದ್ದಬುಜಾಂಡೋದರ ಶ್ರೀರಾಮ |ಕುಬುಜೆಯ ಭಕ್ತಿಗೆ ವಕ್ರವ ತಿದ್ದಿದ | ಅಬುಜಾಂಡೋದರ ಶ್ರೀಕೃಷ್ಣ 20 ಕಾಯ ಛೇದ ಉ | ಪಾಯದ ಗೈದೆಯೊ ಶ್ರೀಕೃಷ್ಣ 21 ವಾಹನ ಗೈಯುತ | ಮೋಕ್ಷವನಿತ್ತನು ಶ್ರೀಕೃಷ್ಣ 22 ಸೀತೆಯ ಕಳಕೊಂಡ್ವೆಥೆಯನೆ ನಟಸಿದ | ಪೃಥ್ವೀಪತಿಯು ಶ್ರೀರಾಮಕೌತುಕ ತೋರಿದ ನಾರದಗೇ ಬಹು | ಪತ್ನಿಯರಲ್ಲಿ ಶ್ರೀಕೃಷ್ಣ 23 ಮಾಯಾ | ವೈಭವ ಪೊಗಳಿರಿ ಶ್ರೀಕೃಷ್ಣ 24 ಜೋಡಿಸಿ ಬಹು ಸೈನ್ಯವ ಹೂಡಿದ | ರಾವಣ ಸಂಗರ ಶ್ರೀರಾಮಜೋಡಿಸಿ ಬಹು ಸೈನ್ಯವ ಜರೆ ಜನು | ಹೂಡಿದ ಯುದ್ಧವ ಶ್ರೀಕೃಷ್ಣ 25 ಮುರ ನಬಕರು ಮಡಿದರು | ದೇವ ನೀ ಬಾಣವ ಬಿಡೆ ಶ್ರೀಕೃಷ್ಣ 26 ಸೀತೆಯನಗ್ನಿ ನಿವೇಶವ ಗೈಸುತ | ಪೂತಳು ಎನಿಸಿದ ಶ್ರೀರಾಮ |ಕೌತುಕಳು ವೇದ್ವತಿಯಳ ನೀ | ನಾಂತೆಯೊ ಶ್ರೀ ವೆಂಕಟ ಕೃಷ ್ಣ 27 ಪ್ರಥಮಾಂಗನು ಮಾರುತನಿಂ | ಪೃಥ್ವೀ ಭಾರವನಿಳುಹಿದೆ ರಾಮ |ಪ್ರಥಮಾಂಗನು ಭೀಮನಿಂ | ಪೃಥ್ವೀ ಭಾರವನಿಳುಹಿದೆ ಕೃಷ್ಣ 28 ಭರತನಿಂ ವಾರ್ತೆಯ ಕಳುಹಿ | ಭರತನ ಉಳುಹಿದೆ ಶ್ರೀರಾಮ |ಅರದಿ ರವಿ ಮರೆ ಮೌಡುತ ನೀ | ನರನನು ಉಳುಹಿದೆ ಶ್ರೀಕೃಷ್ಣ 29 ಸೀತೆಯ ಸಹ ಪುರಿ ಕೋಸಲೆಗೆ ನೀ | ಮಾತುಳಹಲು ಬಂದೆ ಶ್ರೀರಾಮ |ನೀತರು ನರಕನಿಂದಾ ತರುಣಿಯರ | ಪ್ರೀತಿಲಿ ತಂದೆಯೊ ಶ್ರೀಕೃಷ್ಣ 30 ಪಟ್ಟವಗಟ್ಟಲಯೋಧ್ಯಾಪುರಿಲಿ | ಶಿಷ್ಟರ ಸರ್ವರ ಮಾಡಿದೆ ರಾಮಪಟ್ಟ ಭದ್ರ ಪ್ರಭು ದ್ವ್ಯಷ್ಟಸಾಸಿರ ಪ | ತ್ನ್ಯಷ್ಟರನಾಳಿದೆ ಶ್ರೀಕೃಷ್ಣ 31 ಕುಶಲವರ್ಹ ಸುಳೆಗಳಾ ಮಗೆ | ಅಸಮ ಸಾಹಸಿಗಳ್ ಶ್ರೀರಾಮ |ಶಿಶುಗಳ್ಕøಷ್ಣಗೆ ಗಣನೆಗಸಾಧ್ಯವು | ಅಸಮ ಸಾಹಸಿಗಳ್ ಶ್ರೀಕೃಷ್ಣ 32 ರಾಜ್ಯ ಸುಭೀಕ್ಷವು ಪತಿವ್ರತೆರೆಲ್ಲರು | ವ್ಯಾಜ್ಯ ರಹಿತ ಸ್ವರಾಜ್ಯದಿ ಶ್ರೀರಾಮಪರ್ಜನ್ಯವರ್ಷಿಸಿ ರಾಜ್ಯ ಸುಭಿಕ್ಷವು | ಆರ್ಜವರು ಪ್ರಜೆ ರಾಜ್ಯದಿ ಕೃಷ್ಣ 33 ಪಾಲನ ಪಾಲನ ಶ್ರೀಕೃಷ್ಣ 34 ಭಕ್ತಲಿ ರಾಮನ ಚರಿತೆಯ ಕೇಳಿ | ಮುಕ್ತಿದನು ಕೃಷ್ಣಾತ್ಮಕ ರಾಮಭಕ್ತಿಯಿಂದಾಲಿಸೆ ಭಾಗವತಾ ಕಥೆ | ಮುಕ್ತಿದನು ಗುರು ಗೋವಿಂದ ವಿಠಲ 35
--------------
ಗುರುಗೋವಿಂದವಿಠಲರು