ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಭವ ದಾಂಟಲಿಕಿದುಸಾರಾ ಪ ಅಚ್ಯುತಾನಂತ ಗೋವಿಂದ ಕೇಶವ ಎನ್ನಿ ಸಚ್ಚಿದಾನಂದ ಶ್ರೀ ಕೃಷ್ಣ ನೆನ್ನಿ ಹೆಚ್ಚಿದ ದುರುಳದಾನವರ ಸಂಹರಿಸಿದ ಮುಚುಕುಂದ ವರದಾಯಕ ನೆನ್ನಿ 1 ನೀಲ ಮೇಘ ನಿಭಾಂಗ ರೂಪನು ಎನ್ನಿ ಕಾಳಿಯ ತುಳಿದ ಗೋಪಲ ನೆನ್ನಿ ಪಾಲು ಮೊಸರು ಬೆಣ್ಣೆಗಳ್ಳನಿವನುಎನ್ನಿ ಭೂಲಲನೆಯ ಗಂಡ ನೀತ ನೆನ್ನಿ 2 ಶಂಖ ಚಕ್ರಗದೆ ಪದ್ಮಧರನು ಎನ್ನಿ ಮುರ ವೈರಿಯೆನ್ನಿ ಪಂಕಜ ವದನ ಕಸ್ತೂರಿ ತಿಲಕನೆನ್ನಿ ಡೊಂಕ ತಿದ್ದಿದ ಕುಬುಜೆಯನೀತನೆನ್ನಿ 3 ರಾಣಿಯ ನೊಯ್ದ ರಾವಣನ ಕೊಂದವನೆನ್ನಿ ಬಾಣಾಸುರನ ತೋಳ ತರಿದವನೆನ್ನಿ ವೇಣುನಾದ ಪ್ರಿಯ ಶ್ರೀರಂಗ ನೆನ್ನಿ 4 ನಾಮವೇಗತಿ ಎನ್ನಿ ನಾಮವೇ ಮತಿ ಎನ್ನಿ ನಾಮವೇ ಪರಕೆ ಸಾಧನವು ಎನ್ನಿ ಪ್ರೇಮದಿಂದಲಿ ರಸನೆಯೊಳು ಲಕ್ಷ್ಮೀಶನ ನಾಮ ಸ್ಮರಣೆಯನು ನುಡಿನುಡಿಗೆನ್ನಿ 5
--------------
ಕವಿ ಪರಮದೇವದಾಸರು