ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕೇಳೈ ಈಗಾ ಈ ಕರ್ಮಯೋಗಾ ಕಳೆವುದು ಸಂಸಾರರೋಗಾ ಬಂಧಕ್ಕೆ ಈ ಕರ್ಮವೇ ಕಾರಣಾಗಿ ಬಂದಿತು ಜನುಮಾ ಅನಿವಾರ್ಯವಾಗಿ ಈ ಬಂಧವ ನೀಗಿ ಚಿರಶಾಂತಿಗಾಗಿ ಈ ಯೋಗ ಬೆರಸಿ ಇದೆ ಕರ್ಮವೆಸಗಿ ಅರ್ವಿನಿ ಫಲವಾ ಪರಮಾತ್ಮಭಾವಾ ತಳೆಯುವದೆ ಈ ಕರ್ಮಯೋಗಾ ಕಳೆವುದು 1 ವಿಷಯಾಭಿಲಾಷಾ ನೀಗಿಸಿ ಆಶಾ ಹರಿಸುವದಿದುವೇ ನಿಷ್ಕಾಮ ಕರ್ಮ ಮನಸಿನ ಮಲಿನಾ ಕಳೆದೆಲ್ಲ ಹಸನಾ ಮಾಳ್ಪುದು ಇಹುವೇ ಜಿಜ್ಞಾಸೆಯೆನ್ನಾ ಹುಟ್ಟಿಸಿ ಜ್ಞಾನಾ ಕೇಳ್ವ ಭಾನಾ ಉದಿಸುವುದು ವೈರಾಗ್ಯಭಾಗ್ಯ ಕಳೆವುದು 2 ವಿಷಧಾತುಗಳ ತಂದು ಪುಟಹಾಕಿಕೊಂಡು ಹೆಸರಾದ ಸಿದ್ಧೌಷಧಿ ಮಾಡಿಕೊಂಡು ಉಪಯೋಗ ಕಂಡು ಜಡದೇಹಗಳ ಬೇನೆ ನೀಗಿಪತೆರದಿ ಈ ಕರ್ಮವಿಷವಾ ಪುಟಹಾಕುತಿಹುದೀ ನಿಷ್ಕಾಮತನದೀ ಈ ಸೂಕ್ಷ್ಮದೇಹಾ ರೋಗ ಕಳೆವಾ ಘನವಾದ ಪರಮೋಪಾಯಾ ಇದೇ ಪೇಳ್ದೆ ಗುರುಶಂಕರಾರ್ಯ3
--------------
ಶಂಕರಭಟ್ಟ ಅಗ್ನಿಹೋತ್ರಿ
ಸ್ಮರಿಸಿ ಸುಖಿಸು ಮನವೆ ಗುರುರಾಜಾಚಾರ್ಯರ ಪ ಸ್ಮರಿಸು ಪರಿಮಳ ವಿರಚಿಸಿದ ಗುರು ವರರ ಕರುಣವ ಪಡೆದ ಶರಣರ ದುರಿತ ಉರಗಕೆ ಗರುಡನೆನಿಸಿದವರ ಸುಚರಿತೆಯ ಹರುಷದಿಂದಲಿ ಅ.ಪ ಇಳಿಯೋಳ್ ಶ್ರೀ ಸುರಪುರದಿ ಯಳಮೇಲಿ ಶ್ರೀ ವಿಠ್ಠಲಚಾರ್ಯ ರಿಹ ಜನ್ಮದಿ ಕುಸುಮೂರ್ತಿ ಗುರುಗಳ ಒಲಿಮೆ ಪಡೆದು ನಿತ್ಯದಿ ಗಳಿಸಿದ ಸುಪುಣ್ಯದಿ ಲಲನೆ ಜಾನಕಿ ವರ ಸುಗರ್ಭದಿ ಚಲುವ ಲಕ್ಷಣ ಗಳಲಿ ಜನಿಸಿ ಗೆಳೆಯರೊಡನಾಡುತಲೆ ಶಬ್ಧಾವಳಿ ಸುಶಾಸ್ರ್ತವ ಕಲಿತ ವರಪದ 1 ಮೆರೆವ ಘನ ವೈಭವದಿ ವೈರಾಗ್ಯಭಾಗ್ಯವೆ ಪಿರಿದೆಂಬೊ ಧೃಢಮನದಿ ವನಿತಾದಿ ವಿಷಯದಿ ತಿರುಗಿಸುತ ಮನವಿರದೆ ಸಿರಿವರ ತುರುಗವದನನ ಚರಣ ಪೂಜಿಯೊಳಿರಿಸಿ ಗುರುವರ ಮುಖದಿ ಶ್ರೀ ಮನ್ಮರುತ ಶಾಸ್ತ್ರದ ಶ್ರವಣಗೈದರ 2 ಚರಿಸಿ ಶಾಸ್ತ್ರವ ಬೋಧಿಸಿ ಪ್ರವಚನದಿ ಗುರುಗಳ ಕರುಣವ ಸಂಪಾದಿಸಿ ನೃಪಮಾನ್ಯರೆನಿಸಿ ಹರಿದಿನಾದಿ ವೃತ ಬಿಡದಾಚರಿಸಿ ಕಾರ್ಪರ ನಿಲಯ ಶಿರಿನರ ಹರಿಯ ಪುರವನು ತ್ವರದಿ ಶೇರಿದ ಪರಮ ಮಹಿಮರ ಚರಣ ಯುಗಲವ 3
--------------
ಕಾರ್ಪರ ನರಹರಿದಾಸರು
ನೋಡುನೋಡುದಯಮಾಡು ಮಾಡಿನ್ನಪ.ನೋಡುವೈರಾಗ್ಯಭಾಗ್ಯವಿಹೀನನಕಾಡುತಿದೆ ಮನ ಕರುಣಾಸಂಪನ್ನ ಅ.ಪ.ಸ್ನಾನ ಸಂಧ್ಯಾವಂದನೆ ಸಚೇಲದಿಧ್ಯಾನ ಮೌನವ ಹಿಡಿಸಿಜ್ಞಾನ ಭಕ್ತಿ ವಿರಕ್ತಿ ಮಾತಿನನಾಣ್ನುಡಿಯಂತೆ ನುಡಿಸಿದಾನ ಧರ್ಮ ಕೈವಲ್ಯದಾರ್ಯೆಂದು ನಿದಾನ ತುಷ್ಟಿಯ ಬಡಿಸಿತಾನರೆಕ್ಷಣ ಸ್ವಸ್ಥವಿರದೆಲ್ಲಹಾನಿ ಮಾಡಿತೆನ್ನ ಚಿತ್ತವ ಕೆಡಿಸಿ 1ಸಾಲಂಕೃತ ಬಾಲನೊಯ್ದಡವಿಯಲಿ ಕೊಲ್ವಆಲಯದ ಕಳ್ಳನಂತೆಬಾಲೆಯನ್ನಾಳದೆ ಷಂಡಘನಕೂಪದೊಳು ನೂಕಿಸುವಂತೆಪೇಳಲೇನು ದುರ್ಬಲರನು ಅರಸ ತಾಶೂಲಕಿಕ್ಕಿಸುವಂತೆಮೇಲೆ ಮೇಲೆ ದುರ್ವಿಷಯಾಟವಿಯೊಳುಕಾಲಕಟ್ಟ್ಯೆನ್ನ ಕೆಡಹುತಿದೆ2ಕನ್ನಿಕೆಗೆ ವರನೊಪ್ಪಿದರೆ ತೆತ್ತಿಗನ್ನ ಪ್ರತಿಕೂಲವೇನುಪುಣ್ಯಶ್ಲೋಕನ ಅಭಯವಿರಲು ಸುಖಿಗನ್ಯ ತೊಡರ್ಯಾಕಿನ್ನಮನ್ನೆಯನ ಪಾದವಿಡಿದಿಹ ಮಡದಿಗೆಅನ್ಯರಾತಂಕವೇನು ಪ್ರಸನ್ನವೆಂಕಟಸ್ವಾಮಿ ನೀ ಒಲಿದರೆಕುನ್ನಿ ಮನ ಕಾಡಿ ಮಾಡುವದೇನು 3
--------------
ಪ್ರಸನ್ನವೆಂಕಟದಾಸರು