ಒಟ್ಟು 5 ಕಡೆಗಳಲ್ಲಿ , 2 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಚಿಂತೆಯಾತಕೆ ನಿನಗೆ ಎಲೆ ಪ್ರಿಯಳೆ | ಸಂತತ ತಿಳುಪುವೆನು ಭಕುತಿಯಿಂದಲಿ ಕೇಳು ಪ ಈ ಭೋಗ ನಮಗೆ ಯಾಕೆಂದು ನೀ ಕೇಳುವಿಯಾ | ಲಾಭವಲ್ಲದ ಇದು ನೋಡುವದಕೆ ಶ್ರೀ ಭೂರಮಣ ತಾನೆ ತಂದಿತ್ತ ವಿಚಿತ್ರ ವೈಭೋಗವಲ್ಲೆನೆಂದರೆ ಬಿಡದು ರಮಣೀ 1 ಹಿರಿಯರು ಈರ್ವಗೆ ಮಾಡಿದ ನಿಷ್ಠೆ ವಿ ಪರಿ ಸೌಖ್ಯವ ಹಿರಿದಾಗಿ ಕೊಟ್ಟು ನಮ್ಮನು ಪಾಲಿಸುವುದು ಬಲು ಮೊರೆಯಿಟ್ಟರೆ ಕೇಳು ಹರಿಯ ಮಹಿಮೆಗೆ ನಮೋ 2 ಕ್ಷೀರಸಾಗರದೊಳಗೆ ಓಲ್ಯಾಡುವವನ ವಿ ಚಾರಮಾಡದೆ ತಂದು ಹೃದಯಮಧ್ಯ ಸೇರಿಸುವಂದದಿ ಎನಗೆ ಇಲ್ಲಿಹ್ಯುದು ಸಂ ಸಾರದೊಳಗಿದ್ದ ಸುಖವಿನಿತುಂಟು ರಮಣೀ 3 ಸಂತಾನವಿಲ್ಲೆಂದು ಈರ್ವರೂ ಚಿಂತಿಪದ್ಯಾಕೆ ಪಿಂತೆ ಕಾಂತಾರದಲಿ ಬಾಲಮೃಗನ ಅಂತಕನ ಪುರಿಗೆ ಅಟ್ಟಿದ ದೋಷದಿಂದ ನಮ- ಗಿಂತು ತೋರಿತು ಗುಟ್ಟು ಪೇಳಬಾರದು ರಮಣೀ 4 ಈ ಜನ್ಮ ಬಂದದಕೆ ಇನ್ನಾದರೆಚ್ಚೆತ್ತು ಮಾಜಿಕೊಂಡಿದ್ದು ಜನರಂತೆ ನಡದು ಸಿರಿ ವಿಜಯವಿಠ್ಠಲನ ಸ ರೋಜ ಚರಣವನು ಪೂಜಿಸುವೆನು ರಮಣೀ 5
--------------
ವಿಜಯದಾಸ
ಜ್ಯೇಷ್ಠಾಭಿಷೇಕ ಗೀತೆ ನೋಡಿದೆ ಜ್ಯೇಷ್ಠಾಭಿಷೇಕದುತ್ಸವವ ಸೃಷ್ಟಿಯೊಳಾಶ್ಚರ್ಯವಾ ಪ. [ಒಪ್ಪುವ] ಮಿಥುನಮಾಸದ ಶುಕ್ಲಪಕ್ಷ ಚತುರ್ದಶಿಯಲ್ಲಿ ವಿಪ್ರರು ಕೂಡಿ ಸಹ್ಯೋದ್ಭವೆಯನ್ನು ತರುವೆವೆಂದೆನುತಲೆ ವಿಪ್ರರು ಪೋದ ವಿಚಿತ್ರ[ವ] ನೋಡಿದೆ 1 ಅಂದು ಗಜೇಂದ್ರನ ತಂದು ಸಿಂಗಾರ ಮಾಡಿ ಕುಂದಣದ ಛತ್ರಿ ಚಾಮರ ಬೀಸುತ್ತ ವಿಪ್ರರು ಬರುವುದ 2 ವೇದಘೋಷಗಳಿಂದ ವಿಪ್ರರು ಕೊಡಗಳ ವಿ ನೋದದಿಂದಲೆ ಪೊತ್ತು ತಾ[ಳ] ತಮ್ಮಟೆ ಭೇರಿ ನಾನಾ ವಾದ್ಯಂಗಳ ಮುಂದೆ ರಜತದಕೊಡ ಬರುವ ವೈಭೋಗವ 3 ಕರಿ ಕೊಡವನ್ನು ಇಳಿಸಲು ಅಸಮಾನ [2ನಿ2]ರಿಗಳ ಬಿಚ್ಚಿ ಹೊಸಬಟ್ಟೆಗಳ ಹಾಸಿ ಕುಶಲದಿಂದಲೆ ಹೊಲೆದು ಪೊಸದಾಗಿ ಕಟ್ಟುವತಿಶಯ[ವ] 4 ಗರ್ಭಗೃಹವು ಗಾಯಿತ್ರಿ ಮಂಟಪವನ್ನು ಶುಭ್ರವಾಗಿಯೆ ತೊಳೆದು ಘಮಘಮಿಸುವ ದಿವ್ಯ ಪರಿಮಳ ವು ಬರುವಂಥ ಗಂಧÀವ ತಳಿದರು ಅಂದು ಆಲಯಕ್ಕೆಲ್ಲ 5 ಭಕ್ತರಿಗೆ ತೊಟ್ಟಕವಚವ ಕಳೆದು ಅಭಯ ಹಸ್ತ ಪಾದವ ನಿತ್ತು ಕಸ್ತೂರಿ ಕಮ್ಮೆಣ್ಣೆ ಒತ್ತಿ ಸಂಭ್ರಮದಿಂದ ಮಿತ್ರಸಹಿತ ನಿಂದ ಭಕ್ತವತ್ಸಲ ರಂಗ 6 ಛಂದದಿ ಇಕ್ಷುರಸವು ಚೂತ ಕದಲಿ ರಸಂಗಳು ದಧಿ ತಿಂತ್ರಿಣಿ ನಿಂಬೆರಸ ಕ್ಷೀರ ಘೃತಗಳಿಂದ ಆ ನಂದದಿ ಯೆರೆದರು ಇಂದಿರೆರಮಣಗೆ 7 ಕೇಸರಿ ಪುನಗಿನ ತೈಲವನೆ ತೆಗೆದು ವಾಸುಕಿಶಯನಗೆ ಲೇಪವನು ಮಾಡಿ ಸ ಹಸ್ರಕೊಡದ ಅಭಿಷೇಕವ ಮಾಡಿದರು 8 ಪಟ್ಟುಪೀತಾಂಬರವನುಟ್ಟು ಶ್ರೀರಂಗನು ಕಳೆದ ಕವಚ ತೊಟ್ಟು ಹತ್ತುಸಾವಿರಸೇರಿನ ಅಕ್ಕಿ ಅನ್ನವ ನಿಟ್ಟು ವಿಪ್ರರು ಸುರಿದರು ವಿಸ್ತಾರವಾಗಿಯೆ9 ದಧಿ ಕದಳಿ ಫಲದಿಂದ ನೈ [ವೃಂದಕ್ಕೆ] ಕರೆಕರೆದು ಕೊಡುವ ಪರಿಯ ನಾ 10 ರಂಗನಾಯಕಿ ಪಟ್ಟದರಸಿ [ವೆರಸಿ]ನರಹರಿ ಚಕ್ರಮೂರುತಿಗೆ ಆಗ ಕಲ್ಪೋಕ್ತದಿಂದಭಿಷೇಕವ ಮಾಡೆ ಕರ್ಪೂರ ತೈಲವ [ಲೇ ಸಾಗಿ]ಹಚ್ಚಿ ಮಲಗಿದ ವೆಂಕಟರಂಗ[ನ] 11
--------------
ಯದುಗಿರಿಯಮ್ಮ
ಪಾರ್ವಟೆ ಉತ್ಸವಗೀತೆ ನೋಡಿದೆ ನೋಡಿದೆ ಪಾರ್ವಟೆ ಉತ್ಸವವ ರೂಢಿಗೊಡೆಯ ರಂಗನ ಪರಮಸಂಭ್ರಮವ ಪ. ಮುದದಿ ವಿಜಯದಶಮಿಯಲಿ ಭುಜಗಶಯನ ರಂಗ ವಿಧವಿಧವಾದ ಆಭರಣ ವಸ್ತ್ರಗ[ಳಿಂದ] ಮದನನಯ್ಯನು ತಾನು ಶೃಂಗಾರವಾಗಿ ಒದಗಿ ಪಲ್ಲಕ್ಕಿ ಏರಿ ಬರುವ ವೈಭೋಗವ 1 ಮುತ್ತಿನಕಿರೀಟ ಮುಗುಳುನಗೆಯ ನೋಟ ರತ್ನದ ಪದಕಗಳ ಹತ್ತುಅಳವಟ್ಟು ಬಟ್ಟಲಲಿ ಭಕ್ತರು ಬಿಟ್ಟ ಉಭಯವನ್ನೆಲ್ಲ ಗ್ರಹಿ ಸುತ್ತ ನರಸಿಂಹನಪುರದ ಮಂಟಪದಲ್ಲಿ 2 ಅಂಬುಮಾಲೆ ಆನೆಮೇಲೆ ನೇಮದಿಂದಲೆ ತಂದು ನೀಲವರ್ಣಗೆ ಕೊಡಲು ಪೂಜೆಯನು ಮಾಡಿ ಅಂಬು ನಾಗಶಯನ ಬಹರಿನೇರಿ ಲೀಲೆಯಿಂದ ಬರುವ ಪರಮವೈಭೋಗವ 3 ಶರಧಿಯಂತೆ ಪುರುಷೆ ಭೋರ್ಗರೆಯುತ ಬರುತಿರೆ ಮುರುಜ ಮೃದಂಗ ಭೇರಿವಾದ್ಯ ಘೋಷಗಳು ಗಜ ಸಿಂಹ ವೃಷಭ ಶಾರ್ದೂಲನಡೆಯಿಂದ ಬಂದ ವಸುದೇವಪುತ್ರನ 4 ಬಂದು ಅಶ್ವವನಿಳಿದು ಅರ್ಥಿಯಿಂದಲೆ ನಿಂದು ಗಾಯಿತ್ರಿಮಂಟಪದಲ್ಲಿ ಮಿತ್ರರು ಸಹಿತ ಇಂದಿರೆ ಸಹಿತಲೆ ನಿಂದ ವೆಂಕಟರಂಗ ಮಂದಿರದೊಳಗೆ 5
--------------
ಯದುಗಿರಿಯಮ್ಮ
ಶ್ರೀರಂಗವಾಸಿಗಳು ಏನು ಸುಕೃತಿಗಳೊ ಪ ಅರುಣ ಉದಯದೊಳೆದ್ದು ಮರುದ್ವøಧೆ ಸ್ನಾನವ ಮಾಡಿ ಪರಮಪುರುಷನ ವಿಶ್ವರೂಪ ನೋಡಿ ಪರವಾಸುದೇವರ ಪ್ರಣವವಿಮಾನದಿ ನೋಡಿ ವರಭಿಗಮನ ಮೊದಲಾದ ಐದು ಪೂಜೆ ಸೇವಿಸುವರು 1 ಶ್ರಾವಣಮಾಸದಿ [ರಂಗನಿಗೆ] ಪವಿತ್ರೋ ತ್ಸವವು ಭಾದ್ರಪದದಲಿ ಲಕ್ಷ್ಮೀಕೊಲುವು ಪಾರ್ವಟೆಯು ಆಶ್ವೀಜಮಾಸದಿ ಉಯ್ಯಾಲೆಯು ತ್ಸವವು ಕಾರ್ತೀಕಮಾಸದಿ ಕೌಶಿಕ ಕೃತ್ತಿಕದೀಪಾ 2 ಮಾರ್ಗಶಿರ ಮಾಸದಿ ಪವಿತ್ರ ಕೊ ಟ್ಟಿಗೋತ್ಸವ ಪುಷ್ಯಮಾಸದಿ ಪುನರ್ವಸುರಥವೂ ಮಾಘಮಾಸದಲಿ ತೆಪ್ಪೋತ್ಸವ ಸಂಭ್ರಮವು ಫಾಲ್ಗುಣಮಾಸದಿ ಪಂಗುನೋತ್ಸವ ನೋಳ್ಪರು 3 ಪುಷ್ಪಸೇವ[ಯು] ಚೈತ್ರಮಾಸದಿ ಚಿತ್ರರಥವು ವೈಶಾಖಮಾಸದಿ ವಸಂತೋತ್ಸವವು ಜೇಷ್ಠಮಾಸದಲಿ ಜೇಷ್ಠಾಭಿಷೇಕವು ಆಷಾಢಮಾಸದಿ ಕಾವೇರಿ ವೈಭೋಗವು 4 ದೇಶಾಂತ್ರದೊಳಗಿದ್ದು ವಾಸುದೇವನ ಸ್ಮರಿಸೆ ನಾಶವಾಗುವುದವರ ಪಾಪರಾಶಿಗಳು ಆ ದೇಶವಾಸಿಗಳನ್ನು ಇನ್ನೇನು ಪೇಳಲಿ [ಬಿಡದೆ] ವಾಸುಕಿಶಯನ ವೆಂಕಟರಂಗನ ನೋಳ್ಪರು 4
--------------
ಯದುಗಿರಿಯಮ್ಮ