ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕಣ್ಣಿಗೆ ಕಾಣದೆ ಏಕಿರುವೇ ರಂಗ ಕಣ್ಣಲಿ ನೋಡದೆ ಬಣ್ಣಿಸಲಳವೇ ಪ ಬಣ್ಣವು ಬಿಳುಪೋ | ಬೆಣ್ಣೆಯ ಕದಪೋ ಚಿಣ್ಣನೊ ತರುಣನೋ | ಹಣ್ಣುಮುದುಕನೋ ಅ.ಪ ನರನಾಗಿರುವೆಯೋ | ಹರಿಯಾಗಿರುವೆಯೋ ನರಹರಿಯೆಂಬರು | ದಿಟವೋ ಸಟೆಯೋ ಗಿರಿಯಂತಿರುವೆಯೋ | ಧರೆಯಂತಿರುವೆಯೋ ಗಿರಿಧರನೆಂಬರು ದಿಟವೋ ಸಟೆಯೋ 1 ಸ್ಮರನಂತಿಹೆಯೋ | ಗುರುವಂತಿಹೆಯೋ ಸ್ಮರಗುರುವೆಂಬರು ದಿಟವೋ ಸಟೆಯೋ ಕರಣನಾಗಿರುವೆಯೋ ಕಾರಣನಹೆಯೋ ಕರಣಕಾರಣ ನೀನೆಂಬುದು ದಿಟವೋ ಸಟೆಯೋ 2 ವೇದವಾಗಿರುವೆಯೋ ನಾದವಾಗಿರುವೆಯೋ ವೇದನಾದಗಳೊಂದೇ ಎಂಬುದು ಸಟೆಯೋ ಕಾದಿಹೆನಯ್ಯ ಮೋದವನೀಯೋ ಸಾದರದಿಂದ ಬಂದೆನ್ನನು ಕಾಯೋ 3 ಸಲಿಗೆಯ ತೋರು ಮಾಂಗಿರಿರಂಗ ಸಲೆ ನಲಿವೆನೋರಂಗ ಗರುಡತುರಂಗ ಛಲವ ಬಿಡೋ ರಂಗ ನಿಲು ನಗುತಲಿ ರಂಗ ಸಲೆ ಬಣ್ಣಿಪೆನಾ ಚೆಲುವನು ರಂಗ 4
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಬಣ್ಣಿಪ ಪ್ರಾಣವಾರಿಗೆ ನಿಮ್ಮ ಉನ್ನತೋನ್ನತ ಜಾಣ ಮಹಿಮ ಪ ಸಾಧಿಸಿ ವೇದನಾದ ಬಿಡದೆ ಓದಿ ಓದಿ ದಣಿದು ತವ ಪಾದಕಾಣದೆ ಒರಲುತಿಹ್ಯವು ಭೇದರಹಿತಾಗಾಧ ಮಹಾತ್ಮ 1 ಶೇಷರಾಜ ದೃಢದಿ ತನ್ನ ಸಾಸಿರ ಜಿಹ್ವೆಗಳಿಂದ ಅನು ಮೇಷ ಪೊಗಳಿ ನಿನ್ನ ಕಾಣದೆ ಬೇಸತ್ತು ಬಾಯಬಿಡುವನಭವ 2 ಸುರಜೇಷ್ಠಸುರಾದಿಗಳು ಅರಿಯರು ನಿನ್ನ ಪುಣ್ಯಚರಣ ಅರಿವೆನೆಂತು ಮೂಢನು ನಾನು ಪೊರೆ ನೀನೆ ದಯದಿ ಶ್ರೀರಾಮ 3
--------------
ರಾಮದಾಸರು