ಒಟ್ಟು 4 ಕಡೆಗಳಲ್ಲಿ , 4 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಈ ವೈಷ್ಣವ ಜನುಮ ಸಫಲವಿಂದು | ಈ ಉಡುಪಿ ಯಾತ್ರಿಗಭಿಮುಖವಾದುದು ಪ ಮನೋವಾಕ್ಕಾಯ ಕರ್ಮಗಳು ಬಲುಪರಿ ಇರಲು | ಮನುಜ ಪೋಗುವೆನೆಂದು ಒಮ್ಮೆ | ನೆನೆಸಿದ ಕ್ಷಣದಲ್ಲಿ ನಾಕವಾಗೋವು ಸು ಭವ ವನಧಿಗೆ ಇದೇ ಮೂಲ 1 ದೇಶದೊಳಗುಳ್ಳ ನಾನಾ ಯಾತ್ರೆ ತೀರಥಾ | ಏಸುಬಾರಿ ಪೋಗಿ ಬರಲಿ ಉಂಟೆ | ಈ ಸುಲಭ ಯಾತ್ರೆ ಕಂಡವರಿಗೆ ದೊರಿಯದು | ಲೇಸಾಗಿ ಕೇಳುವದು ಕುತ್ಸಿತ ಭಾವನೆ ಬಿಟ್ಟು 2 ಕೃಷ್ಣರಾಯನ ದರುಶನಕೆ ಮನಮಾಡಿದ | ಶಿಷ್ಟಾಚಾರಗೆ ಲಿಂಗಕಾಯ ಭಂಗಾ | ದಿಟ್ಟ ಮೂರುತಿ ವಿಜಯವಿಠ್ಠಲ ಕರುಣಿ ಜ್ಞಾನ | ಕೊಟ್ಟುಪಾಲಿಸುವ ಬಲು ಮೂರ್ಖರಾದರೂ ಸಿದ್ಧ3
--------------
ವಿಜಯದಾಸ
ತಾರಕವಿದು ಹರಿಕಥಾಮೃತಸಾರ ಜನಕೆ ಪ ಘೋರತರ ಅಸಾರ ಸಂಸಾರವೆಂಬ ವನಧಿಗೆ ನವ ಅ.ಪ. ಶ್ವಾನಸೂಕರಾದಿ ನೀಚಯೋನಿಗಳಲಿ ಬಂದು ನೊಂದು ವೈನತೇಯ ವಾಹನನ ಸನ್ನಿಧಾನ ಬೇಕು ಎಂಬುವರಿಗೆ 1 ಪ್ರಿಯವಸ್ತುಗಳೊಳಗೆ ಪಾಂಡುವೇಯ ಸಖನೆ ಎಮಗೆ ಬ್ರಹ್ಮ ಸುರರು ತಂದೆ ತಾಯಿ ಎಂದರಿತವರಿಗೆ 2 ಜ್ಞೇಯ ಜ್ಞಾನ ಜ್ಞಾತೃ ಬಾದರಾಯಣಾಖ್ಯ ಹರಿಯ ವಚನ ಕರ್ಮ ಶ್ರೀ ಯರಸ ನೀವನರಗೆ 3 ಶ್ರೀ ಮುಕುಂದ ಸರ್ವ ಮಮಸ್ವಾಮಿ ಅಂತರಾತ್ಮ ಪರಂ ಧಾಮ ದೀನಬಂಧು ಪುಣ್ಯ ನಾಮವೆಂದರಿತವರಿಗೆ 4 ಭೂತಭವ್ಯ ಭವತ್ಪ್ರಭು ಅನಾಥಜನರಬಂಧು ಜಗ ನ್ನಾಥ ವಿಠ್ಠಲ ಪಾಹಿಯೆಂದು ಮಾತುಮಾತಿಗೆಂಬುವರಿಗೆ 5
--------------
ಜಗನ್ನಾಥದಾಸರು
ಭವ ವನಧಿಗೆ ನವಪೋತ | ಪಾಲಿಸು ವಿಖ್ಯಾತ ಪ ವಿಯದಧಿಪನೆ ಎನ್ನ ಕೈಯ್ಯನು ಪಿಡಿಯೋ | ಜ್ಞಾನ ಭಿಕ್ಷ ಈಯೋ ಅ.ಪ. ಮಾಯಾಪತಿ ಪದ ಪದ್ಮಯುಗಳ ಭಜಿಪಾ | ಉತ್ತಮ ಪಥತೋರ್ಪಾಶ್ರೇಯಸು ಸಾಧನ ವೆನಿಸಿ ಮೆರೆಯುರ್ತಿರ್ಪಾ | ಹರಿಪರಮನು ಎನಿಪಾ ||ಮಾಯಾಮತ ತಮ ಸೂರ್ಯನೆನಿಸಿ ಮೆರೆವಾ | ಸುಜನಸುರದ್ರುಮವಾನ್ಯಾಯ ಸುಧೆಯನೇ ತಾರಚಿಸಿರುವಾ | ಮುಕುತಿ ಮಾರ್ಗ ತೋರ್ವಾ 1 ಕಾಕು ವೃತ್ರನಿಂದಾವೃತ ಜಗವಿರಲೂ | ಜ್ಞನರಹಿತ ವಿರಲೂಲೋಕ ಮಹಿತ ಮಂತ್ರವು ನಿನಗಿರಲೂ | ಜಪಿಸುತಾಸ್ತ್ರ ಬಿಡಲೂ ||ಆ ಕುಯೋನಿಗತ ಚಿತ್ರಕೇತು ಮೋಕ್ಷ | ಆಯಿತು ಸುರರಾಧ್ಯಕ್ಷಲೋಕಾಮಯವನು ಹರಿಸಿ ಜಗದಿ ಮೆರೆದೇ | ಮಹಾನ್ನು ಎನಿಸೀದೇ2 ಚಾಪ ಜೇತಾಕುಕ್ಷಿಯೊಳಗೆ ಬಲು ಬಲು ವಿಖ್ಯಾತಾ | ಕಾಗಿನಿ ತಟದಿಸ್ಥಿತ ||ಅಕ್ಷರೇಡ್ಯ ಗುರುಗೊವಿಂದ ವಿಠ್ಠಲನಾ ತನ ಹೃದ್ಗನಾಗಿರುವವನ ||ಅಕ್ಷಿಯೊಳಗೆ ಕಂಡು ಮೋಕ್ಷ ಪಧವ ಸೇರ್ದ | ಆನಂದವ ಬೀರ್ದ 3
--------------
ಗುರುಗೋವಿಂದವಿಠಲರು
ಶ್ರೀರಾಮ ನಿನ್ನ ಪದಕೆರಗಿ ನಮಿಸಿವೆನು ತೋರೆನಗೆ ನಿಜರೂಪ ಪರಿವಾರ ಸಹಿತ ಪ. ಶ್ರೀ ಗುರುಗಳಿಗೆರಗಿ ಅವರ ಕರುಣಾಬಲದಿ ಈಗ ಈ ಜನ್ಮದಲಿ ನಿನ್ನ ಭಜಿಪೆ ನಾಗಶಯನನೆ ನಿನ್ನ ಜನ್ಮಕರ್ಮದ ದಿನದಿ ಬೇಗ ಬಂದೆನ್ನೊಳಗೆ ನೆಲಸಿದೆಯೊ ದೇವ 1 ನಿನ್ನ ದರುಶನಕೆಂದು ಘನ್ನ ಯೋಗಿಗಳು ಬರೆ ಮನ್ನಿಸೆ ಇರುತಿರಲು ದ್ವಾರಪಾಲಕರು ಇನ್ನವರ ಶಾಪದಲಿ ದೈತ್ಯಕುಲದಲಿ ಜನಿಸೆ ಮುನ್ನವರ ಪೊರೆಯಲು ಭೂಮಿಯೊಳು ಬಂದೆ 2 ದಶರಥಗೆ ಸುತನಾಗಿ ತಾಟಕಿಯ ಸಂಹರಿಸಿ ಅನುಜ ಕುಶಲದಿಂದಲಿ ಶಿಲೆಯ ಹೆಣ್ಣುಗೈಯುತ ಬಂದು ಶಶಿಮುಖಿ ಸೀತೆಯನು ಕರಪಿಡಿದ ದೇವ 3 ಧನುವ ಮುರಿದುದ ಕೇಳೀ ಜಮದಗ್ನಿ ಕುವರನು ನಿನ ಸಂಗಡದಲಿ ಕಾಳಗಕೆ ಬರಲು ದನುಜರಿಗೆ ಭ್ರಮೆಗೊಳಿಸಿ ಕನಲುತಿಬ್ಬರು ಕಾದಿ ಘನಬಲ ಗೆಲಿದಂಥ ಅನುಗುಣನೆ ರಾಮ 4 ಅನುಜ ಸೀತೆ ಸಹಿತದಿ ವನಕೆ ಪ್ರೀತಿಯಿಂದಲಿ ಪೋದೆ ನೀತಿಯನು ತಿಳಿದು ಪಾತಕವ ಹರಿಸುವ ಪರಮ ಪಾವನ ಮೂರ್ತಿ ಈ ತೆರದ ಲೀಲೆಯನು ತೋರಿದೆಯೊ ಜಗಕೆ 5 ಕಂಡು ಮಾಯಾಮೃಗವ ಅಂಡಲೆದು ಅದರೊಡನೆ ಭಂಡ ರಾವಣ ಬಂದು ಭಿಕ್ಷುಕನ ತೆರದಿ ಲಂಡನತದಲಿ ಸೀತೆಯನು ಕದ್ದು ಓಡಲು ಕಂಡು ನಿರ್ಜನ ಗೃಹವ ಬೆಂಡಾದ ರಾಮ 6 ಅನುಜನೊಡನೆ ವನವ ಅಲೆದಲೆದು ಕಂಗೆಟ್ಟು ಘನ ಪಕ್ಷಿಯಿಂದಲಿ ವಾರ್ತೆ ತಿಳಿದು ಹನುಮ ಸುಗ್ರೀವರಿಗೆ ಒಲಿದು ವಾಲಿಯ ಕೊಂದು ವನಿತೆ ಸೀತೆಯನರಸೆ ವಾನರರ ಕಳುಹಿದೆ 7 ಹನುಮನಿಂದಲಿ ಸುಟ್ಟು ದನುಜಪುರ ಉಂಗುರವ ವನಿತೆ ಸೀತೆಗೆ ಕೊಟ್ಟು ವಾರ್ತೆ ತರಿಸಿ ವನಧಿಗೆ ಸೇತುವೆಯ ಕಟ್ಟಿ ವಾನರರೊಡನೆ ದನುಜ ರಾವಣ ಸಹಿತ ರಕ್ಕಸರ ಕೊಂದೆ 8 ಅಗ್ನಿಯಿಂ ಸೀತೆಯನು ಶುದ್ಧಳೆನಿಸಿ ಗ್ರಹಿಸಿ ವಿಘ್ನವಿಲ್ಲದ ಪದ ವಿಭೀಷಣಗಿತ್ತು ಮಗ್ನನಾಗಿರೆ ಭರತ ನಿನ್ನ ಪದಧ್ಯಾನದಲಿ ಅಗ್ನಿಸಖಸುತನೊಡನೆ ವಾರ್ತೆ ಕಳುಹಿಸಿದೆ 9 ಬಂದೆದುರುಗೊಳ್ಳೆ ಭರತನು ಸಕಲ ಪರಿವಾರ ಬಂದಯೋಧ್ಯೆಗೆ ಸಕಲ ಸನ್ನಾಹದಿ ಅಂದು ಸಿಂಹಾಸನದಿ ಪಟ್ಟಾಭಿಷೇಕವಗೊಂಡು ಬಂದ ಭಕ್ತರಿಗೆ ಇಷ್ಟ್ಟಾರ್ಥ ಸಲಿಸಿದೆಯೊ 10 ಕೊಟ್ಟು ಕಪಿಗೆ ಬ್ರಹ್ಮಪಟ್ಟದ ಪದವಿಯನು ಶ್ರೇಷ್ಠನೆನಿಸಿದೆಯೊ ಜಗಕೆ ಬೆಟ್ಟದೊಡೆಯ ಇಷ್ಟ ಶ್ರೀ ಗೋಪಾಲಕೃಷ್ಣವಿಠ್ಠಲ ಎನಗೆಕೆಟ್ಟ ಸಂಸೃತಿ ಬಿಡಿಸಿ ಕೊಟ್ಟಭಯ ಸಲಹೊ 11
--------------
ಅಂಬಾಬಾಯಿ