ನಂಬಿದೆ ನಾನಿನ್ನ ನಾರಾಯಣ ವಿಶ್ವಂಭರ ಮೂರುತಿಯೇ
ಕಂಬುಧರ ಕಮಲಾಂಬಕ ಶ್ರೀಹರಿ ಪಾರ್ಥನ ಸಾರಥಿಯೇ ಪ
ವಾರಿಜನಾಭನೆ ಪಾರುಗಾಣಿಸೊ ಸಂ-
ಮಾರಮಣನೆ ಮೊರೆಹೊಕ್ಕೆ ಲಾಲಿಸೊ
ಮುರಹರ ಗೋವಿಂದ 1
ಪುಣ್ಯುಪುರುಷ ಲಾವಣ್ಯ ನಿಧಿಯೆ ಕಾ-
ವನಜಾಪ್ತವಂಶ ಚಂದ್ರ 2
ಕಾಮ ಜನಕ ಸುತ್ರಾಮವಿನುತ ಶುಭ-
ನಾಮಸುಜನಪ್ರೇಮಿ
ತಾಮಸದೂರ ಸುಧಾಮವರದ ಗುರು-
ರಾಮವಿಠಲಸ್ವಾಮಿ 3