ಒಟ್ಟು 4 ಕಡೆಗಳಲ್ಲಿ , 3 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನಿತ್ಯ ಶುಭಮಂಗಳಂ ಪ ವೇದಾಂತ ವೇದ್ಯನಿಗೆ ಆದಿನಾರಾಯಣಗೆ ಸಾದು ಸಜ್ಜನರ ಸಂರಕ್ಷಣಗೆ ಯಾದವಾಧಿಪ ಕೃಷ್ಣ ದನುಜರೆದೆ ದಲ್ಲಣಗೆ ಮಾಧವ ಮುಕುಂದ ಮುರಮರ್ಧನನಿಗೆ ನಿತ್ಯ ಶುಭಮಂಗಳಂ 1 ಶ್ರೀ ವತ್ಸಲಾಂಛನಗೆ ಶ್ರೀ ಕೇಶವಾಚ್ಯುತಗೆ ಭವ ಭಂಜನನಿಗೆ ಗೋವರ್ಧನವ ನೆತ್ತಿ ಗೋವುಗಳ ಕಾಯ್ದವಗೆ ಮಾವ ಕಂಸನ ಕೊಂದ ಗೋವಿಂದಗೆ 2 ನೀಲ ಮೇಘಾಂಗನಿಗೆ ನಿಜಶರಣ ಸಂಗನಿಗೆ ಕಾಲ ಭಯ ಶಿಕ್ಷನಿಗೆ ಕಮಲಾಕ್ಷಗೆ ಬಾಲಾರ್ಕ ಚಂದ್ರ ರವಿಕೋಟಿ ತೇಜನಿಗೆ ಮೂಲೋಕ ದೊಡೆಯನಿಗೆ ಮುರವೈರಿಗೆ 3 ಕಾಮಪಿತ ಕೃಷ್ಣನಿಗೆ ಕಡುಚೆಲ್ವಮಾಧವಗೆ ಸಾಮಗಾನ ವಿಲೋಲ ಸರ್ವೇಶಗೆ ವಾಮ ದೇವನ ಮಿತ್ರ ವಸುದೇವ ಪುತ್ರನಿಗೆ ಶ್ರೀ ಮಹಾಗೋವಿಂದ ಗೋಪಾಲಗೆ 4 ದುರಿತ ಸಂಹಾರಗೆ ಪರಮ ಪಾವನನಿಗೆ ಪಾಪವಿನಾಶಗೆ ಘೋರ ದುರಿತಾರಣ್ಯ ದಹನ ದೈತ್ಯಾಂತಕಗೆ ಪಾರ ಮಹಿಮಾನಂದ ಸುರವಂದ್ಯಗೆ 5 ನಾಗೇಂದ್ರ ಶಯನನಿಗೆ ನಿಗಮಾಗಮ ಸ್ತುತಗೆ ನಾಗಭೂಷಣ ನಮಿತಗೆ ಭಾಗೀರಥೀಪಿತಗೆ ಭಾಗವತ ಹಿತಕರಗೆ ಭಾಮೆಯರರಸ ಶ್ರೀ ಗೋಪಾಲಕೃಷ್ಣಗೆ 6 ವರಮತ್ಸ್ಯರೂಪನಿಗೆ ಕೂರ್ಮಾವತಾರನಿಗೆ ವರಹದಾಕೃತಿಯವಗೆ ನರಸಿಂಹಗೆ ವರದ ವಾಮನನಿಗೆ ವರ ಪರಶುರಾಮನಿಗೆ ಬುದ್ಧ ಶ್ರೀ ಕಲ್ಕಿಗೆ 7 ಇಂದಿರಾರಮಣಗೆ ಚಂದ್ರಶೇಖರ ಪ್ರಿಯಗೆ ನಂದಗೋಕುಲದರಸ ಗೋಪಾಲ ಕೃಷ್ಣಗೆ ಮಂದಮಾರುತ ತನಯ ಕೋಣೆ ನಿಜವಾಸಗೆ ಆ ನಂದ ಮೂರುತಿ ಶ್ರೀ ಲಕ್ಷ್ಮೀನಾರಾಯಣಗೆ 8
--------------
ಕವಿ ಪರಮದೇವದಾಸರು
ಮಂಗಳಂ ನರಶಿಂಗ ಮೂರುತಿಗೆ ಲಕ್ಷ್ಮೀಸಮೇತಗೆ ವಿಹಂಗ ವಾಹನಗೆ ಅಂಗಜನಪಿತಗೆ ಅಂಗುಟದಿ ಗಂಗೆಯನು ಪಡೆದವಗೆ ಮಾ ತಂಗವರದಗೆ ಪ ವಾರಿಜಾಸನ ಮುಖ್ಯಸುರನುತಗೆ ಉ- ದಾರ ಚರಿತಗೆ ಸೇರಿದವರಘದೂರ ಮಾಡುವಗೆ ಕಾರ್ಪರ ಋಷಿಗೆ ಘೋರ ತಪಸಿಗೆ ಒಲಿದು ಬಂದವಗೆ ಅಶ್ವತ್ಥ ರೂಪಗೆ 1 ಕುಕ್ಷಿಯೊಳು ಜಗವಿಟ್ಟು ರಕ್ಷಿಪಗೆ ಕರುಣಾಕ- ಟಾಕ್ಷಗೆ ವಕ್ಷದೊಳು ಶ್ರೀ ವತ್ಸಲಾಂಛನಗೆ ದ್ರೌಪದಿ ದೇವಿಗೆ ಅಕ್ಷಯಾಂಬರವಿತ್ತು ಸಲಹಿದಗೆ ಲಕ್ಷ್ಮೀನೃಸಿಂಹಗೆ 2 ಕೃಷ್ಣವೇಣಿ ತಟವಿರಾಜಿತಗೆ ಸೃಷ್ಟ್ಯಾದಿ ಕರ್ತಗೆ ಶ್ರೇಷ್ಠತರು ಪಿಪ್ಪಲದಿ ಪ್ರಕಟಿತಗೆ ದುಷ್ಟನಿಗ್ರಹಗೆ ದ್ಯಷ್ಟ ಬಾಹುಗಳಿಂದ ಭಜಕರಿಗೆ ಇಷ್ಟಾರ್ಥಗರಿವಗೆ 3 ಹಿಂದೆ ಗೋರೂಪದಲಿ ಬಂದವಗೆ ಬಹುಸುಂದರಾಂಗಗೆ ವಂದಿಸುವೆ ಶೀ ವೇಂಕಟೇಶನಿಗೆ ಮಂದರೋದ್ಧರಗೆ ಭವ ಬಂಧ ಬಿಡಿಸುವಗೆ ಆನಂದವೀವಗೆ 4 ತರುಳ ಪ್ರಹ್ಲಾದನ್ನ ಕಾಯ್ದವಗೆ ಸುರಸಾರ್ವಭೌಮಗೆ ಶರಣು ಜನ ಮಂದಾರನೆನಿಸುವಗೆ ಭೂಸುರರ ಪೊರಿವಗೆ ಧರಣಿಯೊಳು ಕಾರ್ಪರ ಸುಮಂದಿರಗೆ ಶಿರಿನಾರಶಿಂಹಗೆ 5
--------------
ಕಾರ್ಪರ ನರಹರಿದಾಸರು
ಜಯಮಂಗಳಂನಿತ್ಯಶುಭಮಂಗಳಂ ||ಪ.ಶ್ರೀ ವತ್ಸಲಾಂಛನಗೆ ಕ್ಷೀರಾಬ್ಧಿ ವಾಸಗೆ |ಗೋವರ್ಧನೋದ್ಧಾರ ಗೋವಿಂದಗೆ ||ಮಾವ ಕಂಸನ ಕೊಂದುಮಕರಕುಂಡಲ ಧರಿಸಿ |ಜೀವಾತ್ಮನಾದ ಚಿನ್ಮಯರೂಪಗೆ 1ಅಂಬುಧಿಯ ಶಯನಗೆ ಅಖಿಲ ಭೂತೇಶಗೆ |ತುಂಬುರ - ನಾರದ ಮುನಿವಂದ್ಯಗೆ ||ಎಂಭತ್ತನಾಲ್ಕು ಲಕ್ಷ ಯೋನಿಗಳ ರಾಶಿಯನು |ಗೊಂಬೆಯನು ಮಾಡಿ ಕುಣಿಸುವ ದೇವಗೆ 2ಕಂದರ್ಪನಯ್ಯನಿಗೆ ಕೋಟಿ ಲಾವಣ್ಯನಿಗೆಸುಂದರ ಮೂರುತಿಹರಿ ಸರ್ವೋತ್ತಮನಿಗೆ ||ಕಂದ ಪ್ರಹ್ಲಾದನ ಕಾಯ್ದ ದೇವನಿಗೆಅರ |............................................. 3ಪನ್ನಂಗಶಯನಗೆಪಾವನ್ನ ಚರಿತೆಗೆ |ಸನ್ನುತರಾದ ಸಜ್ಜನ ಪಾಲಿಗೆ ||ಎನ್ನೊಡೆಯ ಸಿರಿದೇವಿಯರಸು ಮುದ್ದುರಂಗಗೆ |ತನ್ನ ನಂಬಿದವರನು ಸಲಹುವವಗೆ 4ಕರಿರಾಜವರದಗೆ ಕರುಣಾಸಮುದ್ರಗೆ |ಗರುಡ ಗಮನನಿಗೆ ವೈಭವಹಾರಗೆ ||ವರಪುರಂದರವಿಠಲ ಕಂಬುಕಂದರನಿಗೆ |ಅರವಿಂದನಾಭನಿಗೆ ಅಜನ ಪಿತಗೆ 5
--------------
ಪುರಂದರದಾಸರು
ಜಯಮಂಗಳಂನಿತ್ಯಶುಭಮಂಗಳಂಪ.ಮಂಗಳ ಮಧು ಕೈಟಭಾಸುರ ಮರ್ದನಗೆಮಂಗಳಮದನ ಕೋಟಿ ಲಾವಣ್ಯಗೆ ||ಮಂಗಳ ಜಗದಂತರಂಗ ಕೃಪಾಂಗಗೆಮಂಗಳ ಯದುಕುಲೋತ್ತಮ ಸಾರ್ವಭೌಮಗೆ 1ಶ್ರೀವತ್ಸಲಾಂಛನಗೆ ಸಿರಿದೇವಿಯರಸಗೆಗೋವರ್ಧನೋದ್ಧಾರ ಗೋವಿಂದಗೆ ||ಮಾವ ಕಂಸನ ಕೊಂದಮಕರ ಕುಂಡಲಧರಭಾವಜನಯ್ಯ ಚಿನ್ಮಯ ಮೂರ್ತಿಗೆ 2ಅಂಬುಜನಾಭಗೆ ಅಖಿಳಲೋಕೇಶಗೆಶಂಭು -ಅಜ - ಸುರ - ಮುನಿವಂದ್ಯ ಹರಿಗೆ ||ಎಂಬತ್ತುನಾಲ್ಕು ಲಕ್ಷ ಜೀವರಾಶಿಗಳಬೊಂಬೆಯ ಮಾಡಿ ಕುಣಿಸುವ ದೇವಗೆ 3ಸಕಲಗುಣ ಪೂರ್ಣಗೆ ಸರ್ವಸ್ವಾತಂತ್ರ್ಯಗೆಅಕಳಂಕ ಆದಿನಿರ್ದೋಷ ಹರಿಗೆ ||ಭಕುತ ವತ್ಸಲನಿಗೆ ಭವರೋಗ ವೈದ್ಯಗೆನಿಖಿಳಜೀವದಯಾಪರಿಪೂರ್ಣಗೆ4ಪನ್ನಗಶಯನಗೆ ಪಾವನ ಮೂರ್ತಿಗೆಸನ್ನುತಾನಂತ ಸದ್ಗುಣ ಭರಿತಗೆ ||ಎನ್ನೊಡೆಯ ಪುರಂದರವಿಠಲ ರಾಯಗೆತನ್ನ ನಂಬಿದವರ ಸಲಹುವ ಮೂರ್ತಿಗೆ 5
--------------
ಪುರಂದರದಾಸರು