ವಾಯುವಂದಿತ ವಿಠಲ | ಪೊರೆಯ ಬೇಕಿವನಾ ಪ
ಪಾದ | ಭಜಕನಾದವನಾಅ.ಪ.
ಗುರುಹಿರಿಯರಾ ಸೇವೆ | ನಿರುತ ಗೈಯುವ ಮನವಕರುಣಿಸುವುದಿವ ನೀಗೆ | ಮರುತಾಂತರಾತ್ಮಗರುಡ ಗಮನನೆ ದೇವ | ಗರ್ವಗಳ ಪರಿಹರಿಸಿಸರ್ವಾಂತರಾತ್ಮಕನೆ | ಕಾಪಾಡೊ ಇವನಾ 1
ಹರಿಯೆ ಪರನೆಂಬಂಥ | ವರಸುಜ್ಞಾನವ ಕೊಟ್ಟುತರತಮಂಗಳು ಅಂತೆ | ಎರಡು ಮೂರುರ್ಭೇದಾಪರಮ ಸತ್ಯವು ಎಂಬ | ವರಜ್ಞಾನ ಪಾಲಿಸುತಪರಿಪರಿಯ ಭವಭಂದ | ಪರಿಹರಿಸೊ ಹರಿಯೇ 2
ಕಾಕು ಸಂಗಮಕೆಡಿಸೊಪ್ರಾಕ್ಕುಕರ್ಮವ ಕಳೆಯೊ | ಶ್ರೀ ಕರಾರ್ಚಿತನೆ 3
ದುರಿತವನ ಕುಠಾರ | ಶರಣಜನ ವತ್ಸಲನೆದುರಿತಾಳಿ ದೂರೈಸಿ | ಪೊರೆಯೊ ಹರಿಯೇಕರುಣ ನಿಧಿ ನೀನೆಂದು | ಮರೆಹೊಕ್ಕೆ ತವಪಾದಚರಣ ದಾಸನ ಪೊರೆಯೊ | ಹರಿಯೆ ಪರಮಾಪ್ತ 4
ಶ್ರೀವರನೆ ಸರ್ವೇಶ | ಭಾವದಲಿ ಮೈದೋರಿಭಾವುಕನ ಪೊರೆ ಎಂದು | ದೇವ ಪ್ರಾರ್ಥಿಸುವೇಈ ವಿಧದ ಬಿನ್ನಪವ | ನೀವೊಲಿದು ಸಲಿಸುವುದುದೇವ ದೇವೇಶ ಗುರು | ಗೋವಿಂದ ವಿಠಲಾ 5