ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನೋಡಲುಬೇಕೇ ಎನ್ನೊಡೆಯನನೂ ನೋಡಿದಿರೇ ತಾಳಪಾಕಂ ಚಿಣ್ಣೈಯಾ ಪ ದಿಕ್ಕುಗಳನು ಬೆಳಗುವ ಸುಕೀರಿಟವ ನಿಕ್ಕಿಹ ಮಾಣಿಕದೋಲೆಯನೂ ಚೊಕ್ಕಟ ಮೂಗುತಿಯಿಂದೊಪ್ಪುವನ್ನ ಜ ಗಕ್ಕೆ ಪತಿಯೆನ್ನೆರೆಯ ಚೆನ್ನಿಗನಾ 1 ಕಂಬು ಚಕ್ರಗದೆ ಪದುಮವ ಪಿಡಿದು ಪೀ ತಾಂಬರದಂಗಿಯ ಧರಿಸಿಕೊಂಡೂ ತುಂಬಿದ ವಕ್ಷದಿ ರಮೆ ಕೌಸ್ತುಭದಿಂ ಗಂಭೀರಾರ್ಣವನಾದ ಚೆನ್ನಿಗನ 2 ಸುರರೆಲ್ಲರು ಪೂಜಿಸುವ ಚರಣದೊಳು ಕಿರುಗೆಜ್ಜೆ ಪೆಂಡೆಯವಿಟ್ಟವನಾ ವರವೈಕುಂಠ ವೇಲಾಪುರದರಸನ ಶರಣ ವತ್ಸಲನಾದ ಕರುಣಾಂಬುಧಿಯಾ 3
--------------
ಬೇಲೂರು ವೈಕುಂಠದಾಸರು
ಲಲಾಟದಲ್ಲಿ ಇಡುವನೋ ಕಾವನು ಅವನನು ನಮ್ಮ ಪವಮಾನನೊಡೆಯನು ವಾಮ ಉದರದಲ್ಲಿ ಯಾವಾನಲೂ ಇಟ್ಟು ಮೆರೆಯುವನೋ ಅವನ ಗೊವತ್ಸ ನ್ಯಾಯದಿ ಕರವನು ಪಿಡಿವನು ಗಧಾಧರನು ಹಾವನ್ನೆ ಹಾಸಿಗೆ ಮಾಡಿಕೊಂಡ ಶ್ರೀಧರನ ಸ್ಥಾನದ ಕೆಳೆಗೆ ಪವಮಾನಿಗುವ ಮತಾ ಎರಡು ಗಧಾಯುಧ ಧರಿಸಲು ಪಾವನನಂತಾದವನು ಅವರ ದುರಿತಕಾನನಕೆ ಸಾವು ಹುಟ್ಟಿಲ್ಲದ ಪರಮಪುರುಷನ ಈ ಆಯುಧವ ಅವನು ವಾಮಸ್ತನದಿ ತಾನೊಮ್ಮೆ ಇಕ್ಕುವನೋ ಸಾನು ಹುಟ್ಟುಗಳಿಂದ ದೂರಗೈಸುವ ಗುರು ಕಾಳೀಮರ್ಧನಕೃಷ್ಣ 4 ಪದ್ಮ ಮುದ್ರೆಯನ್ನು ಭಕುತಿ ಪೂರ್ವಕವಾಗಿ ಹೃತ್ ಪದ್ಮದಿ ಬಂದು ಧರಿಸಲುಬೇಕು ದಕ್ಷ ಭುಜದ ಕೆಳೆಗೆ ಪದ್ಮಂಗಳೆರಡನ್ನು ದಕ್ಷ ಉದರಕೆಳೆಗೆ ಪದ್ಮವೆ ಒಂದನ್ನು ವಕ್ಷಸ್ಥಾನದಿ ಒಂದು ಪದ್ಮವ ಧರಿಸಲು ಭಕ್ತವತ್ಸಲನಾದ ಪದ್ಮ ರಮಣಗುರು ಕಾಳಿಮರ್ಧನಕೃಷ್ಣ ಪೊಳೆವಾ 5
--------------
ಕಳಸದ ಸುಂದರಮ್ಮ