ಒಟ್ಟು 3 ಕಡೆಗಳಲ್ಲಿ , 2 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

(ಅ) ಏನೆಂದು ಪೇಳಲೋ ರಾಮ ನಿನ್ನಾ ದೀನವತ್ಸಲತೆಯ ಆಶ್ರಿತ ಪ್ರೇಮ ಪ ಕಲ್ಲಾಗಿ ಪಥದಲ್ಲಿ ಬಿದ್ದ | ಮುನಿ ವಲ್ಲಭೆಯನು ಸಲಹಿದ ಸುಪ್ರಸಿದ್ಧ ಕಲ್ಲೆದೆಯವ ನಾನು ಸಿದ್ಧ | ಎನ್ನ ಅನಿರುದ್ಧ 1 ಪಶುಜಾತಿ ಸುಗ್ರೀವ ಮುಖರ | ನೀ ಹಸನಾಗಿ ಪೊರೆದದ್ದು ಕೇಳಿದೆ ವಿವರ ವಶವಲ್ಲದಿಂದ್ರಿಯನಿಕರವುಳ್ಳ ಪಶುಪ್ರಾಯ ನಾನಯ್ಯ ರಕ್ಷಿಸೋ ಚತುರ 2 ಚೆಂಡಾಲನಾದ ಗುಹನ | ಕೈ ಗೊಂಡು ಕಾಪಾಡಿದೆ ಕುರುಣದಿಂದವನ ಖಂಡಿತ ಪೇಳುವೆ ಘನ್ನ | ಕರ್ಮ ಚೆಂಡಾಲ ನಾನು ಶ್ರೀ ಕಾಂತ ಪ್ರಸನ್ನ 3
--------------
ಲಕ್ಷ್ಮೀನಾರಯಣರಾಯರು
ನೆಲೆಯಾಗಿ ನಿಲಿಸೆನ್ನ ನಿಲಯದಿ ಶ್ರೀಕಾಂತ ಸಿರಿ ಲಲನೆಯರೊಡಗೂಡಿ ಪ. ಸೂಕ್ತ ಪುರಾಣ ಭಾರತಗಳು ಪೊಗಳುವ ಭಕ್ತ ವತ್ಸಲತೆಯ ಬಹುಮತಿಯ ನಿತ್ಯ ಕೊಂಡಾಡುವ ಭೃತ್ಯಜನರ ಬೇಗ ಹೆತ್ತ ತಾಯಿವೊಲೆತ್ತಿ ಪಾಲಿಪ ಹರಿ 1 ವಿಧಿ ವಿಹಿತಗಳಾದ ಸದಮಲ ಕೃತಗಳ ಮುದದಿ ಮಾಡುವ ಸರ್ವ ಬುಧ ಜನರ ಸದನಕ್ಕೆ ಕರತಂದು ವಿಧವಿಧ ಪೂಜೆಯ ಒದಗಿ ಮಾಡುವ ಪೂರ್ಣ ನಿಧಿಮತಿಗಳನಿತ್ತು 2 ಬಂದ ಅತಿಥಿಗಳ ನಿಂದಿಸದಲೆ ಅಭಿ ವಂದಿಸಿ ಸತ್ಕರಿಸುತ ಫಲವ ಕುಂದಿಲ್ಲದಾನಂದ ಸಂದೋಹದಾಯಿ ಮುಕುಂದಗರ್ಪಿಸಿ ಸುಖದಿಂದ ಚರಿಸುವಂತೆ 3 ಅಹಿತಲ್ಪ ಶಯನನೀ ವಹಿಸಿದ ದಾಸರ ಸುರರು ಸಂಗ್ರಹಿಸುವರು ಕುಹಕ ವೈರಿಗಳನ್ನು ಬಹು ದೂರೋಡಿಸಿ ಮಹಾಮಹಿಮ ನೀ ಕರುಣದಿ 4 ಚತುರ ಹಸ್ತಗಳಿಂದ ಚತುರ್ವಿಧ ಫಲರಸ ಸ್ತುತಿಸುವ ದಾಸರೀ ಗತಿ ಬೇಗದಿ ಸತತ ಸುರಿವ ನಾಗಪತಿ ಗಿರಿನಿಲಯ ಶ್ರೀ ಪತಿ ನೀನೆ ಎನಗೆ ಸದ್ಗತಿಯಾಗಿ ಪೊಳವುತ್ತ 5
--------------
ತುಪಾಕಿ ವೆಂಕಟರಮಣಾಚಾರ್ಯ
ಶ್ರೀನಿವಾಸ ಪೂರಿಸಭಿಲಾಷ ಪ್ರಾಣ ಪಾಲೇಶ ಏನಿದು ಸಾವಕಾಶ ಪ. ಹಿಂದಿನ ಪ್ರಹ್ಲಾದ ಮೈಥಿಳ ಮತ್ತಜಾಮಿಗಳ ಭಾರತ ಕುಂಡಗೋಳ- ಗಾಂದಿನೀಸುತ ಧ್ರುವ ಪಾರ್ಶದಿ ಅಂಬರೀಷಾದಿ ಭಕ್ತರುಗಳಂತೆ ಎಂದೀ ಶ್ರುತಿ ಪುರಾಣಗಳ ಆದರೆ ನನ್ನನು ಬರಿದೆ ಇದು ರೀತಿಯೆ ನಿನಗೆ1 ಬಂದಡಿಗಡಿ ಇಡುತ ಸಾಮಜವಾಹನ ಬೇಡಿದಭೀಷ್ಟ ನೀಡಿದ ಬಳಿಕಾತನು ನುಡಿದ ಒಂದನಾದರು ಮನಕೆ ಅಭಯವನಿತ್ತು ಪೊರೆದೆ ನಾ ಮಾಡಿದಪರಾಧವು ಅತಿ ಸ್ವಲ್ಪವು ಅದಕೆಣೆಯಾಗದಿರಲು ಪಾಲಿಪರ ಕಾಂಬೆನೆಲ್ಲಿ 2 ಪಾರ್ಥಗೆ ಸಾರಥಿಯೆನಿಸುತ ರಥ ನಡಸುತ ಕುರುಸೇನೆಯೊಳಿರುತ ಗಾಂಗೇಯ ನಗುತ ಶೋಣಿತವ ಹರಿಸಲು ನಿಯಮದ ತೊರಿದೆ ಭಕ್ತವತ್ಸಲತೆಯ ತೋರಿದೆ ಸುಖವಾರಿದ ವೆಂಕಟಾದ್ರಿಯೊಳ್ಮೆರೆದೆ 3
--------------
ತುಪಾಕಿ ವೆಂಕಟರಮಣಾಚಾರ್ಯ