ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಉಗಾಭೋಗ ವಿಕ್ರಮ ಸಂವತ್ಸರದಲ್ಲಿ ನಿನ್ನ ನಿಜ ದಾಸಕೂಟ ಜನಕೆ ಪ- ರಾಕ್ರಮ ಹೆಚ್ಚಲಿ ಅಚ್ಚುತಾನಂತ ಕೃಷ್ಣ ಶಕ್ರಾನುಜನೆ ನಿನ್ನ ದೂತ ಹನುಮನ ಸೇವೆ ವಕ್ರವಿಲ್ಲದೆ ನಡೆದು ನಿನ್ನ ಕೃಪೆಯಾಗಲಿ ಅಕ್ರೂರವರದ ತಂದೆ ಮುದ್ದುಮೋಹನ್ನರ ವಿಕ್ರಮೌದಾರ್ಯ ದಶ ದಿಕ್ಕುಗಳ ಬೆಳಗಲಿ ಶಕ್ರಾನುಜನೆ ಉದರ ಬಗೆದು ತರಳನ ಕಾಯ್ದ ವಕ್ರನಖನೆ ನಮ್ಮ ನೀತ ಶ್ರೀ ಗುರುಗಳಿಗೆ ವಿಕ್ರಮ ಶಾಂತಿ ಆಯುರಾರೋಗ್ಯ ಭಾಗ್ಯವಿತ್ತು ಚಕ್ರಧರನೆ ನಿನ್ನ ಸೇವೆ ಕೈಕೊಂಡೆಮ್ಮ ಭವ- ಚಕ್ರ ತೊಡಕು ಬಿಡಿಸಿ ದಾಸ ಜನರ ಕಾಯೋ ಉ- ರು ಕ್ರಮದೇವ ಜಗಚ್ಚಕ್ರವರ್ತಿಯೆ ನಮೋ ಶಕ್ತಾದ್ಯಮರ ನುತ ಗೋಪಾಲಕೃಷ್ಣವಿಠಲಾ
--------------
ಅಂಬಾಬಾಯಿ
ಬಾಗಿ ಭಜಿಸಿರೋ | ಭಾಗಣ್ಣ ದಾಸರನಾ | ನಮಿಪರ ಬೀಷ್ಟದನಾ ಪ ಭೋಗಿ ಭೂಷಣ ಸುತನಾ | ಮನ್ಮಥ ಸದೃಶನನಾ ಅ.ಪ. ಮುರಹರ ನಾಮಕನರಸಿಯುದರದಲ್ಲಿ | ಜನುಮತಾಳಿ ಅಲ್ಲೀಸುರಪುರ ವೈದಲು ತನ್ನ ಪಿತನು ಮುಂದೇ | ಸಂಕಾರ ಪುರಸೇರ್ದೇ | ವರಚಿಂತಲ ವೇಲಿಲಿ ಧ್ಯಾನಕಾಗಿ ನಿಂದು | ಗಾಯಿತ್ರಿ ಜಪಿಸು ತಂದು ವರಮಾರುತಿ ಗುಡಿಯೊಳು ನೆಲಿಸುತ್ತಾ | ವರಪಡೆದೆಯೊ ಜಪಿಸುತ್ತಾ 1 ತ್ರಿಲಿಂಗಪುರಕೇ ಕವಿಯೈತರಲೂ | ಪಂಡಿತರನು ಗೆಲಲೂಬಲುಚಿಂತಿಸಿ ಜನಸಭೆಯ ಸೇರಿ ಆಗ | ತೀರ್ಮಾನಿಸಿ ವೇಗ |ಕಳುಹಿದರವನ ಭಾಗಣ್ಣನ ಬಳಿಗಾಗೀ | ಬಲವನು ತೋರೆನಲಾಗೀ ನಿಲಲಾರದೆ ತೆರಳಿದ ಭೀತಿಯಲೀ | ವರಕವಿ ಮೆರೆದನು ಕೀರ್ತಿಯಲೀ2 ಪರಿ ನಿತ್ಯ ಶ್ರೀ ವೆಂಕಟಕೃಷ್ಣನ ಪಾಡುತ್ತಾ | ನರ್ತನ ಗೈಯ್ಯುತ್ತಾ ಸುತ್ತಿ ಬರುವ ಜನರ ದೃಷ್ಠಾರ್ಥಾ | ಪೇಳುತ ಗಳಿಸಿದೆ ಅರ್ಥಾ 3 ತಿಮ್ಮಣ್ಣ ದಾಸಾರ್ಯರ ಬಳಿಯಲೀ | ಆದವಾನಿಯಲ್ಲೀನೆಮ್ಮದಿಲಿದ್ದಲ್ಲಿಂದಲಿ ತೆರಳಿ | ಕಾಶೀಶನ ಬಳೀಕ್ರಮ್ಮಿಸಿ ದಿನ ಗುರು ಸೇವೆಯಲ್ಲಿ ಬಹಳಾ | ಮೆಚ್ಚಿಸಿ ಗುರುಗಳ | ಹಮ್ಮಿನ ವಿಜಯರಿಂದುಪದೇಶಾ | ಗೋಪಾಲ ವಿಠ್ಠಲದಾಸ 4 ವೆಂಕಟರಾಮಗೆ ರಾತ್ರಿಕಾಲದಲ್ಲೀ | ಆಘ್ರ್ಯವ ಕೊಡುವಲ್ಲೀ ಪಂಕಜಮಿತ್ರನ ತೋರುತಲವರೀಗೆ | ಸಂಶಯ ಕಳೆದವಗೆ | ವೆಂಕಟೇಶನೊಳ್ ಭಕುತಿ ಪುಟ್ಟುವಂತೆ | ಸೇವೆ ವಿಧಿಸಿ ಅಂತೇ ಪಂಕಜನಾಭನ ಕೀರ್ತನಾದಿಗಳನೂ | ಮಾಡಿ ಕಳೆದ ದಿನಗಳನೂ 5 ವೆಂಕಟೇಶನ ಪರೋಕ್ಷಿ ದಾಸರೆಂದು | ಪೇಳೆ ಜನರು ಅಂದು ವೆಂಕಟ ನರಸಿಂಹಾಚಾರ್ಯಾ | ದಾಸರೊಳು ಮಾತ್ಸರ್ಯಾ | ಶಂಕೆಪಟ್ಟು ಭಜನೆಯೊಳಿರುವಂದೂ | ಮುಂದಿನ ಪೀಠದಲೊಂದೂ ಲಂಕೆಯ ಪುರವನು ದಹಿಸಿದನಾ | ಕಂಡರು ಕೋಡಗನಾ 6 ವಾಸುದೇವ ವಿಠಲನ್ನಾ | ಕಾಣುತಲಿ ಮುನ್ನಾ ಅಂಕಿತ ನಾಮದಿ ಪದಪದ್ಯಾ | ರಚಿಸಿ ಮೆರೆದ ನಿರವದ್ಯಾ7 ರೋಗದಿ ಶ್ರೀನಿವಾಸಾಚಾರ್ಯಾ | ಬರಲಾಗ ದಾಸಾರ್ಯ ಜಾಗ ಗುಡಿಯಲಿ ಶುದ್ಧಿ ಮಾಡುತಿರಲು | ಕೇಳಿ ಗೃಹಕೆ ಹೋಗಲು | ವೇಗದಿ ಮಂತ್ರಿತ ರೊಟ್ಟಿ ತಿಂದು ಇನ್ನ | ಕಳೆದ ರೋಗವನ್ನ ನಾಗಶಯನ ಶ್ರೀ ಜಗನ್ನಾಥ ವಿಠಲನ್ನಾ | ತೋರ್ಯರ್ಧಾಯು ಇತ್ತವನ್ನಾ 8 ಮುದದಲಿ ನಿಜಜನರನು ಪೊರೆಯೇ | ಶಾಸ್ತ್ರರ್ಥವ ನೊರೆಯೆ ಪದ ಸುಳಾದಿಯನೆ ಬಲುರಚಿಸೀ | ಭಕುತಿ ಮಾರ್ಗ ಬೆಸಸೀ | ಸುಧೆಸಮವೆನೆ ಹರಿಕಥೆಸಾರ | ರಚಿಸಿ ಜನೋದ್ಧಾರ ಮುದಮುನಿ ಮತಗ್ರಂಥಗಳೊರೆದೇ | ಸಚ್ಛಾಸ್ತ್ರಪೊರೆದೇ 9 ಹತ್ತೆಂಟು ಒಂದು ಮೊಗದ ರೂಪ | ಶ್ರೀ ವಿಶ್ವರೂಪನಿತ್ಯ ಚಿಂತಿಪ ತನ್ನ ಬಿಂಬರೂಪ | ಅಂಶದಿಹನು ಗಣಪಚಿತ್ರಿಸಿರುವ ಚಕ್ರಾಬ್ಜ ವಲಯವನ್ನ | ಧೇನಿಸಿ ವಿಜಯರನ್ನಕೃತ್ಯ ಪೇಳಲೊಶವೆ ಅಪರೋಕ್ಷಿಗಳ | ಮಂದನು ನಾ ಬಹಳ 10 ಚಿತ್ರಮಾರ್ಗದಿ ಭ್ರಾತೃವರ್ಗವನ್ನ | ದೂರಕಳಿಸಿ ಮುನ್ನಚಿತ್ರಭಾನು ಸಂವತ್ಸರದಲ್ಲಿ | ದಶಮಾಸಾಷ್ಟಮಿಲೀ |ಚಿಂತಿಸುತ ಯೋಗಮಾರ್ಗದಲ್ಲಿ | ದಹಿಸಿ ದೇಹವಲ್ಲೀ |ಚಿತ್ರ ಚರಿತ ಗುರುಗೋವಿಂದ ವಿಠ್ಠಲನಾ | ಪದಕಮಲವ ಸೇರಿದನ 11
--------------
ಗುರುಗೋವಿಂದವಿಠಲರು
ವಿಶೇಷ ಸಂದರ್ಭದ ಹಾಡು ಶ್ರೀ ವರದೇಂದ್ರಾಖ್ಯಾನ ಉತ್ಸವ ವರ್ಣನೆ 39 ಇರುಳುಹಗಲು ತವಸ್ಮರಿಸುತಲಿಹ ಭಕು - ತರಿಗಿಹ ಪರಸುಖಸುರಿಸುವ ಶ್ರೀ ಗುರು ಪ ಲಿಂಗಸುಗುರುನಿವಾಸ ಭಕ್ತ ಜಂಗುಳಿ ದುರಿತವಿನಾಶ ಮಂಗಳ ಚರಿತ ಮೌನೀಶ ವಿಹಂಗವಾಹನ ನಿಜದಾಸ 1 ಸಿರಿ ವಸುಧಿಜಾಪತಿ ಪದದೂತ ವಸುಧಿಯೊಳಗೆ ವಿಖ್ಯಾತ ಸುಮನಸರ ಸುವಂಶಜನೀತ 2 ಸುದರುಶನ ಮಾಲಾ ಕಲುಷ ನಿರ್ಮೂಲಾ 3 ವಾಯುಮತಾಬ್ಧಿವಿಹಾರಾ ಕಾಷಾಯ ಕಮಂಡಲಧಾರಾ ಮಾಯಿ ಜಲಜ ಚಂದಿರ ಗುರುರಾಯರ ಮಹಿಮೆಯಪಾರಾ 4 ಪಂಡಿತಮಂಡಲಭೇಶ ಪಾಖಂಡಿಮತೋರುಗವೀಶ ಕುಲಿಶ ತನ್ನ ತೊಂಡನೆಂದವರಘನಾಶ 5 ತಿಮಿರ ತರಣಿಯೊ ಕನಳನೀ ಮುನಿಯೋ 6 ಸುರನದಿಪತಿಯೊ ಧೈರ್ಯದಿ ಭೂಭತ್ಪತಿಯೊ ಚಾತುರ್ಯದಿ ವರಬ್ರಹ್ಮಸ್ಪøತಿಯೊ 7 ದಾನದಿರವಿಜನೆನಿಪನು ಸುವಿಧಾನದಿ ಕ್ಷಿತಿಯ ಪೋಲುವನು ಮೌನದಿ ಶುಕಮುನಿವರನು ಅಸಮಾನಯೋಗಿ ಎನಿಸುವನು 8 ಹರಿಸ್ಮರಣಿಯಲಿರುತಿರುವ ನರಹರಿನಿಂದಿಪ ಮತತರಿವ ಹರಿಪನೆಂಬರೆ ಪೊರೆವ ಶ್ರೀ ಹರಿಯಿವರಗಲದಲಿರುವ9 ಪ್ರಾಣೇಶ ದಾಸರೆನಿಪರು ಶ್ರೀ ಶ್ರೀನಿವಾಸನ ವಲಿಸಿಹರು ಜ್ಞಾನಿಗಳಿಗೆಅತಿ ಪ್ರೀಯರು ಅಸಮಾನದಾಸರೆನಿಸುವರು 10 ವರಕÀವಿ ಶ್ರೀ ಜಗನ್ನಾಥಾರ್ಯರ ಕರುಣ ಪಡೆದನವರತ ಧರಣಿಯೊಳಗೆ ವಿಖ್ಯಾತ ನರಹರಿ ಯಸ್ಮರಿಸುತಿಹ ನಿರುತ 11 ಹಿಂದಿನಸುಕೃತದಿ ಫಲದಿ ವರದೆಂದ್ರಾರ್ಯರು ವಂದಿನದಿ ಚಂದದಿ ದಾಸಗೃಹದಿ ನಡೆತಂದರು ಬಹುಸಂಭ್ರಮದಿ12 ಬಿನ್ನೈಸಿದ ಭಕುತಿಂದ ಮುನಿಮಾನ್ಯದರುಶನದಿಂದ ಧನ್ಯಧನ್ಯನಾನೆಂದ ಪಾವನ್ನವಾಯ್ತು ಕುಲವೆಂದ 13 ದಾಸಾರ್ಯರ ಭಕುತಿಯನು ನಿರ್ದೋಷವಾದ ಙÁ್ಞನವನು ತೋಷಬಡುತ ಮುನಿವರನು 14 ಶ್ರೇಷ್ಠನಾದಯತಿವರನು ಉತ್ಕøಷ್ಟವಾದಸ್ಥಳವನ್ನು ನಮಗೆನುತಿಹನು15 ದೇಶಕರಿಂಗಿತವರಿದು ವರದಾಸಾರ್ಯರು ಕೈಮುಗಿದು ಈ ಶರೀರತಮ್ಮದೆಂದು ಮಧ್ವೇಶಾರ್ಪಣವೆಂತೆಂದು 16 ತಪ್ಪದೆ ಸರ್ವದೇಶದಲಿ ತಾಕಪ್ಪವ ಕೊಳುತಲ್ಲಲ್ಲಿ 17 ಸಿರಿ ನಿಲಯನಂಘ್ರಿ ಸ್ಮರಿಸುತಲಿ ಕಳೇವರ ತ್ಯಜಿಸಿದರಲ್ಲಿ ಆಬಳಿಕ ಲಿಂಗಸುಗೂರಲ್ಲಿ 18 ತುಲಸಿ ವೃಕ್ಷರೂಪದಲ್ಲಿ ಇಲ್ಲಿನೆಲೆಸಿಹವೆಂದು ಸ್ವಪ್ನದಲಿ ಗಂಜಿಯ ಮರಡಿಯಲಿ ಇದ್ದಶಿಲೆ ತರಿಸೆಂದು ಪೇಳುತಲಿ 19 ಬಣವಿಯ ತ್ವರ ತೆಗೆಸುತಲಿ ತರುಮನುಜನಸರಿನೋಡುತಲಿ ಮುನಿ ವಚನವನಂಬುತಲಿ ಶಿಲೆಯನು ತಂದಿರಿಸಿದರಿಲ್ಲಿ 20 ಪುರುದಲಾಗಯಿರುತಿಹನು ತ್ವರದಿಂದಲಿ ಕಳುಹಿದನು ನರಹರಿ ಸಾಲಿಗ್ರಾಮವನು 21 ವರಪುಣ್ಯ ಕ್ಷೇತ್ರದಲಿಂದ ಮುನಿವರ ತಾನಿಲ್ಲಿಗೆ ಬಂz ಶರಣರ ಪಾಲಿಪೆನೆಂದ ಸುಖಗರೆಯುತ ಅಲ್ಲಿಯೆ ನಿಂದ 22 ಸುಂದರಪಾದುಕೆಗಳನು ಪುಣೆಯಿಂದಿಲ್ಲಿಗೆ ತರಿಸಿದನು ವಂದಿಸುವವರ ಘಗಳನ್ನು ತ್ವರದಿಂದ ತರಿದು ಪೊರೆಯುವನು 23 ದಾಸಕುಲಾಗ್ರಣಿಯನಿಪ ಪ್ರಾಣೇಶ ಕರಾರ್ಚಿತ ಮುನಿಪ ದೇಶಿಕ ವರರೆಂದೆನಿಪ ರಘುಜೇಶ ಪದಾಂಬುಜ ಮಧುಪ 24 ವೃಂದಾವನದಿ ನಿಂದಿರುವ ರಾಘವೇಂದ್ರರ ಧ್ಯಾನದಲಿರುವ ಅಂದಣೇರಿ ತಾಮೆರೆವ ಭಕ್ತವೃಂದವ ಕಾದುಕೊಂಡಿರುವ 25 ಪ್ರತಿಗುರುವಾಸರದಲ್ಲಿ ಜನತತಿ ಸಂಭ್ರಮದಿಂದಿಲ್ಲಿ ಮಿತಿಯಿಲ್ಲದೆ ಭಕುತಿಯಲಿ ನಲಿಯುತ ವಾಲ್ಗೈಸುವರಿಲ್ಲಿ 26 ಪ್ರತಿ ಪ್ರತಿ ವತ್ಸರದಲ್ಲಿ ಗ್ರೀಷ್ಮಋತು ಆಷಾಢಮಾಸದಲ್ಲಿ ತಿಥಿ ಷಷ್ಟಿಯ ದಿವಸದಲಿ ದ್ವಿಜತತಿ ಸುಭೋಜನ ವಿಲ್ಲಿ 27 ಮರುದಿವಸದ ಸಂಭ್ರಮವು ಶ್ರಿಂಗರಿಸಿದ ರಥದುತ್ಸವವು ಪರಿಪರಿ ಜಸಂದಣಿಯು ಇದು ವರಣಿಪುದಕೆ ದುಸ್ತರವು 28 ಯತಿವರ ಪರಮಾನಂದದಿಂದ ರಥವೇರಿ ಬರುವದು ಚಂದ ಅತಿಹರುಷದಿ ಜನವೃಂದಗುರು ಸ್ತುತಿಮಾಳ್ಪದು ಮುದದಿಂದ 29 ಝಾಂಗಟಿ ದಮ್ಮುಡಿಯು ಕಾಲುಗೆಜ್ಜೆಕಟ್ಟಿದಡಿಯುದಿವ್ಯ ಮೇಲು ಸರದ ಪದನುಡಿಯು 30 ಭೇರಿ ಭಜಂತ್ರಿ ತುತ್ತೂರಿಗಂಭೀರದಿ ಹೊಡೆವನಗಾರಿ ಅಂಬರ ಮೀರಿ 31 ಪರಿ ಪರಿಧೂಪಗಳು ಫಲÀಗಳನೈವೇದ್ಯಗಳು ಮಂಗಳ ಕರ್ಪೂರ ದೀಪಗಳು 32 ಥಳಿಪ ಪತಾಕಿ ಬೆತ್ತಗಳು ಮಿಗಿಲು 33 ಸಂತಜನರ ಜಯಘೋಷ ಅತ್ಯಂತ ಮನಕೆ ಸಂತೋಷ ಕುಣಿಯುತಿಹ ಶೀಶ 34 ಕಂತುಪಿತನದಯದಿಂದ ಇಲ್ಲಿ ನಿಂತಿಹ ಸುರರಾನಂದ ಎಂತೊರಣಿಪೆ ಮತಿಮಂದ ದುರಂತ ನಿಮ್ಮಯ ಗುಣವೃಂದ 35 ಸುವಿನಯದಿಂದ ನಮಿಸುವರು ಭಯವನು, ಈಡಾಡುವರು ತಮ್ಮಬಯಕೆ ಪೂರೈಸಿಕೊಳ್ಳುವರು 36 ಜ್ವರಛಳಿ ವ್ಯಾಧಿ ಪೀಡಿತರು ಮತ್ತುರಗವೃಶ್ಚಿಕದಂಶಿಕರು ಕುಂಟರು ಬಧಿರÀರು 37 ಪರಿಪರಿಗ್ರಹಪೀಡಿತರು ಬಹುಪರಿ ಶುಭಕಾಮಿಪ ಜನರು ಪೊರೈಸಿಕೊಂಬುವರು 38 ಸಾಷ್ಟಾಂಗದಿ ವಂದಿಪರು ಅಭಿಷ್ಟೇಯ ಪಡೆದುಕೊಳ್ಳುವರು ಕಷ್ಟಗಳನು ನೀಗುವರು ಸಂತುಷ್ಟರಾಗಿ ತೆರಳುವರು 39 ಇದುಪುಣ್ಯಕ್ಷೇತ್ರ ವೆನಿಸಿತು ಶ್ರೀಪದುಮೇಶಗಾವಾಸಾಯ್ತು ಮುದದಿಂದನಲಿಯುವರಾಂತು 40 ಈಸುಪದ ಪೇಳ್ವನೆಧನ್ಯ ಜಗದೀಶನ ತುತಿಸಿದ ಪುಣ್ಯ ದೇಶಿಕಪತಿ ಮುನಿಮಾನ್ಯ ವರದೇಶ ವಿಠಲಾಗ್ರಗಣ್ಯ 41
--------------
ವರದೇಶವಿಠಲ