ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಬಿಟ್ಹ್ಯಾಗೆ ಇರಲಿನ್ನೀ ಚರಣ | ರಂಗ ಪ. ವಿಠ್ಠಲನಾ ಪುಟ್ಟ ಚರಣ ಬಿಟ್ಟು ಗೋಕುಲ ಪುಂಡಲೀಕನಿಗೊಲಿಯುತ ಇಟ್ಟಿಗೆ ಮೇಲ್ಹೊಂದಿ ನಿಂತಂಥ ಚರಣ ಅ.ಪ. ಭಕ್ತರಿಗೊಲಿಯುವ ಚರಣಾ | ವೇದ ಉಕ್ತಿಗೆ ನಿಲುಕದ ಚರಣಾ ಹತ್ತಿ ಪಾರ್ಥನ ರಥ ಮತ್ತೆ ಭೀಷ್ಮನಿಗೊಲಿದು ಹಸ್ತದಿ ಚಕ್ರವ ಪಿಡಿದು ಬಂದಾ ಚರಣ 1 ಬಲಿಯನ್ನು ತುಳಿದಂಥ ಚರಣಾ | ಮೂರು ಇಳೆಯನಳೆದ ಪುಟ್ಟ ಚರಣ ಕುಲಕೋಟಿ ಉದ್ಧಾರಗೈವಂಥ ಗಂಗೆಯ ಚಲುವ ಉಂಗುಟದಲ್ಲಿ ಪಡೆದ ಕೋಮಲ ಚರಣ 2 ಹಸ್ತಿ ಕರೆಯೆ ಬಂದ ಚರಣಾ | ಲಕ್ಷ್ಮಿ ವತ್ತುವೋ ಮೃದುತಳ ಚರಣಾ ಚಿತ್ತದೆ ಚಿಂತಿಪ ಭಕ್ತರ ಮನದೈವ ತೆತ್ತಿಗನಾಗಿ ಐವರ ಪೊರೆದಾ ಚರಣ3 ಭೀಮ ತೀರಾ ವಾಸ ಚರಣಾ | ಭಕ್ತ ರಾಮಯ ಹರಿಸುವ ಚರಣಾ ಕಾಮಜನಕ ಪಾಂಡುರಂಗವಿಠ್ಠಲನೆಂದು ಪ್ರೇಮದಿಂ ಭಜನೆಗೊಂಬುವ ಸ್ವಾಮಿ ಚರಣಾ 4 ಬಿಟ್ಟಿರಲಾರೆ ನೀ ಚರಣ | ಮನದಿ ಕಟ್ಟಿ ಹಾಕೂವೆ ನಾ ನೀ ಚರಣ ದಿಟ್ಟ ಶ್ರೀ ಗೋಪಾಲಕೃಷ್ಣವಿಠ್ಠಲ ಚರಣ ಇಟ್ಟು ಹೃತ್ಕಮಲದಿ ಪೂಜಿಪೆ ನೀ ಚರಣ 5
--------------
ಅಂಬಾಬಾಯಿ
ಭಕುತಿಯ ಪಾಲಿಸು ಜೀಯಾ ಮುಂದೆ ಮುಕುತಿಗೊಡವೆ ಯಾಕೆ ನೀನೊಲಿದ ಮೇಲೆ ಪ ತನುವೆ ನಿನ್ನಾಧೀನವೆನಿಸು ಇದು ಅನುದಿನ ಕೊಡು ಏಕಪ್ರಕಾರ ಮನಸು ಧನ ವಡವೆಯ ಕಂಡ ಕನಸು ಎಂದು ನಿತ್ಯ ನಿನ್ನಂಘ್ರಿ ನೆನಸು 1 ತತ್ವದ ಮತದೊಳಗಿರುಸು ಪುಶಿ ಉತ್ತರ ಮತವೆಂಬ ಮಾರ್ಗವ ಮೆರೆಸು ಉತ್ತಮರೊಳಗೆನ್ನನಿರಿಸು ಭವ ವತ್ತುವ ನಿನ್ನ ನಾಮಮೃತ ಸುರಿಸು 2 ಶ್ರವಣ ಮನನ ಧ್ಯಾನವೀಯೋ ಎನ್ನ ಅವಗುಣವೆಣಿಸದೆ ಕರುಣಾಳು ಕಾಯೊ ಅವಸಾನದಲಿ ನೀನೆ ಗತಿಯೊ ತ್ರೈ ಭುವನೇಶ ವಿಜಯವಿಠ್ಠಲ ನೀ ದೊರೆಯೋ 3
--------------
ವಿಜಯದಾಸ