ರಾಮಕೃಷ್ಣವಿಠಲ | ಪೊರೆಯ ಬೇಕಿವಳಾ ಪ
ಸನ್ನುತ ಹರಿಯೆ | ಪ್ರಾರ್ಥಿಸುವೆ ಧೊರೆಯೇ ಅ.ಪ.
ಮೋದ ತೀರ್ಥರ ಮತದಿ | ಉದುಭವಿಸಿ ಇರುತಿರ್ಪಸಾಧು ಕನ್ನಿಕೆ ಇವಳಾ | ವೇದಾಂತ ವೇದ್ಯಾ |ಮೋದದಾಯಕನಾಗಿ | ಶ್ರೀಧರನೆ ತರತಮವಭೇಧ ಪಂಚಕ ತಿಳಿಸಿ | ಕಾದುಕೋ ಬಿಡದೆ 1
ಅಹಿಕ ಪಾರತ್ರಿಕದಿ | ಬಹುಸಖ್ಯಗಳ ಕೊಟ್ಟುಮಹಿತ ನಿನ್ನಯ ನಾಮ | ರೂಪಕ್ರಿಯ ಗುತಾಮವಿಹಿತ ಮಾರ್ಗದಿ ತುತಿಸಿ | ತವಚರಣಕರ್ಪಿಸುವಮಹಭಾಗ್ಯ ಇವಳೀಗೆ | ಓದಗಿಸೋ ಹರಿಯೇ 2
ಅಡಿಗಡಿಗೆ ಬರುತಿರ್ಪ | ಕಡುವಿಘ್ನ ಪರಿಹರಿಸೊಕಡುದಯಾ ಪರಿಪೂರ್ಣ | ಕರಿವರದ ಕೃಷ್ಣಾ ಬಡವಿಪ್ರಗೊಲಿದಂತೆ | ಭಕುತ ಜನ ಪರಿಪಾಲಪಿಡಿಯುವುದು ಕೈ ಇವಳ | ಬಾಲ ಗೋಪಾಲ 3
ಕಲಿಯುಗದಿ ಸಾಧನವು | ಬಲುಕಷ್ಟವೆನಿಸಿಹುದುಕಲಿಮಲಾಪಹಗಂಗೆ | ಪಿತನ ಚರಣಾಬ್ಜಾಓಲುಮೆಯಿಂ ಭಜಿಪರ್ಗೆ | ಭವಭಂಧ ಪರಿಹಾರಅಳವಡಿಸೊ ಇವಳೀಗೆ | ತವನಾಮಕವಚಾ 4
ಕೋವಿದರ ಪರಿಪಾಲ | ಪಾವಮಾನಿಯ ಪ್ರೀಯನೋವು ಸುಖ ದ್ವಂದ್ವಗಳ | ಸಮತೆಯಲಿಯುಂಬಾಭಾವವನೆ ಕರುಣಿಸುತ | ಭವವ ನುತ್ತರಿಸೆಂದುದೇವ ಗುರು ಗೋವಿಂದ | ವಿಠಲ ಪ್ರಾರ್ಥಿಸುವೇ 5