ನಾಸಿಕ | ಸಂಭವ ಕಾಯೊ
ನಮಿಸುವೆ ನಿನಗೆ ನಾನು ಪ
ಅಂದು ಧರಣಿ ಜಲ ವಂದಾಗಿ ಕರಗಿರೇ |
ನಂದನ ಚಿಂತಿಸಿ ಬಂದ ವರಹಮೂರ್ತಿ 1
ಮಧು ಪಾನಾವವ ಸಾ | ದದು ಅವನ ಚರ್ಮ |
ಹೊದಿಸಿ ಹೆಪ್ಪುಗೊಟ್ಟು ಮೇದಿನೆಂದಿಸಿದೆ 2
ಕನಕಲೋಚನ ಭೂಮಿಯನು ಕದ್ದು ಮೈಯಲು |
ಅನಿಮಿಷರೊಲಿಸೆ ಅವನ ಕೊಂದುದ್ಧರಿಸಿದೆ3
ಕರುಣಾಕಟಾಕ್ಷದಿ ಹೊರವಲ್ಲಿ ನಾನೆಲ್ಲಿ |
ಸರಿಗಾಣೆ ನಿನಗೆ ಅಂತರ ಬಹಿರದೊಳು 4
ರಜೋಭಿಮಾನಿಯ ವಡಿಯಾ ಸುಜನಪಾಲಾ |
ಭುಜಗ ಗಿರಿಯ ವಾಸಾ ವಿಜಯವಿಠ್ಠಲಾಧೀಶಾ 5