ಸರಸ್ವತಿ ತಾಯಿ ಬಿಡದೆನ್ನ ಕಾಯಿ ||
ಮೂರ್ತಿ ಹರಿಯ ಸುತನಸತಿ || ಪ
ಕಡಗ ಕಂಕಣ ಗೆಜ್ಜೆ ಕಾಲು ಪೆಂಡಿಗಿಯಿಂದ ||
ಸಡಗರದಲಿ ಹೊಳೆವ ನಡುವಿನೊಡ್ಯಾಣವು ||
ಪೊಡವಿಯೊಳಗೆ ನಿಮ್ಮ ವಡಸತಿಯರೊಳು ||
ಕಡುಸುಂದರಿ ಜಗದಂಬೆ ಕನಕದ ಗೊಂಬೆ 1
ಕೊರಳಿಗೆ ವೈರನ(?) ಪೊಲುವ ಮುಖದಲ್ಲಿ
ಹೊರಳೆಲಿಯಂದದಿ(?)ಫಣಿಯಲ್ಲಿ ತಿಲಕ |
ಎರಳೆ ಕಂಗಳೆ ನಿನ್ನ ಹೆರಳಿನ ಸೊಬಗು
ಉರಗನ ಪೋಲ್ವದು ಬಾಲೆ ಸುಲೀಲೆ 2
ಧರೆಯೊಳಧಿಕ ` ಹೆನ್ನೆಪುರ ಹೆನ್ನೆವಿಠಲನ’
ಚರಣ ಕಮಲದಲಿ ದೇವ ಭಜಿಸುವ
ಪರಮ ಭಕುತಿಯಿಂದ ಪಾಲಿಸೆ ಮಣೀಯುವೆ |
ಸ್ಥಿರ ನಿನ್ನ ನಂಬಿದ ಜನರನು ಕಾಯುವೀ 3