ಒಟ್ಟು 6 ಕಡೆಗಳಲ್ಲಿ , 4 ದಾಸರು , 6 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಜಾನಕಿಯು ನಮ್ಮಮ್ಮ ನಮಗೆ ಭಯವೇನು ಪ ಪವಮಾನ ತನಯನು ಪಾಲಿಪ ಗುರುವಯ್ಯಾ ಅ.ಪ ಕಾಲಕಾಲದಿ ತಪ್ಪದೆ | ಭತ್ಯವ ಹಾಕಿ ಬಾಲಲೀಲೆಗಳಾಡಿಸಿ ಮೇಲೆ ತುಡುಗಾಟವಾಡಿದರೆ ಕೆನ್ನೆಯ ಹಿಂಡಿ ಹಾಲ ಕುಡಿಸಿ ಮಕ್ಕಳರ್ಥಿಯ ನೋಡುವ 1 ಇತರ ಮಕ್ಕಳಿಗೆಲ್ಲಾ | ಅವರ ಮಾತಾ ಪಿತರು ವಡವೆಗಳಿಟ್ಟು ಮಿತಿಯಿಲ್ಲದೆ ಬೈದು ಬಲು ಚಿಂತೆಯ ಪಡುವರು 2 ಕಳ್ಳರಿಗೆ ಸಿಕ್ಕದೈಯ್ಯ | ನಮ್ಮೊಡವೆಗಳ್ ಕಳಚುವುದಕೆ ಬಾರದು ಒಳ್ಳೆ ವಸ್ತ್ರವ ಉಡಿಸಿ ಉಚಿತ ತಿಂಡಿಯ ಕೊಡಿಸಿ ಸುಳ್ಳಾಡದಂದದಿ ಸುತ್ತಿಸಿ ನಗುವರು 3 ಓದು ಬರಹವ ಕಲಿಸಿ | ನಮ್ಮನು ಕೆಲವು ಹೊತ್ತು ಆಟಗಳಾಡಿಸಿ ಆದರಿಸುತ ಜನ್ಮ ಜನ್ಮಗಳಲಿ ಬಿಡದೆ ಕಾದು ಕೊಂಡಿರುವರು ಕಡೆಗೂ ನಮ್ಮಗಲರು 4 ಇಂತಹ ನಮ್ಮವರ ಬಿಟ್ಟು | ಬರಿದೇ ಲೋಕ ಸಂತೆಯವರನು ನಂಬುವರೆ ಎಂತಾದರೂ ಗುರುರಾಮ ವಿಠಲನ ನಾಮ ಸ್ವಂತವಾದರೆ ಮುಕ್ತಿ ಸ್ವಾಧೀನವಾಗುವುದು5
--------------
ಗುರುರಾಮವಿಠಲ
ತಾನೆ ದೊರೆವುದೇನೋ ಸುಖ ನಾನಾಜನ್ಮದ ಪುಣ್ಯವಿಲ್ಲದೆ ಪ ಮೃಷ್ಟಾನ್ನವುಂಡು ಮೆರೆವುದೀಗ ಕೊಟ್ಟು ಅನ್ನ ಹುಟ್ಟಿದವಗಿಲ್ಲದೆ ಇಟ್ಟುತೊಟ್ಟು ಶೃಂಗಾರದಿಂದ ಸೃಷ್ಟಿಯಿಂದ್ವಸ್ತ್ರ ವಡವೆಗಳು ಕೊಟ್ಟು ಹುಟ್ಟಿದ ಪುಣ್ಯರಿಗಲ್ಲದೆ 1 ಕೋಮಲಯುವತಿ ದೊರೆವುದೀಗ ಭೂಮಿಯೋಳ್ಕನ್ಯಾದಾನಿಗಲ್ಲದೆ ಭೂಮಿಸೀಮೆಗಳಿಸಿ ಬಲು ಕ್ಷೇಮದಿಂದ ಬಾಳ್ವುದೀಗ ಭೂಮಿಸೀಮೆ ದಾನಗೈದ ಆ ಮಹಾಪುಣ್ಯವಂತರಿಗಲ್ಲದೆ 2 ನಿಖಿಲಸುಖದಿ ಮೆರೆವುದೀಗ ಭಕುತಜನರಪ್ಪ ತೃಪ್ತರಿಗಲ್ಲದೆ ಅಖಿಲಪದಕೆ ಅಧಿಕವೆನಿಪ ಮುಕುತಿಪದವಿ ಪಡೆವುದಮಿತ ಮುಕುತಿದಾಯಕ ಶ್ರೀರಾಮಪಾದ ಭಕುತಾನುಭಕುತರಿಗಲ್ಲದೆ 3
--------------
ರಾಮದಾಸರು
ತಿರುಪೆಗಾರರಯ್ಯಾ ನಾವು ತಿಳಿದುಕೊಳ್ಳಿರೀ ಜೀಯಾ ನೀವು ಪ ತಿರುಪೆಗಾರರನು ತಿರಸ್ಕರಿಸದಿರಿ ತಿರುಪಿಲ್ಲದಿದ್ದರೆ ತೀರಹುದು ಅ.ಪ ತಿರುಪಿಲ್ಲವೇ ಧಗಡಿ ತಿರುಪು ವಡವೆಗಳು | ತಿರುಪುಹೂಜಿಗಳು ತಿರುಪು ಭರಣಿಗಳು | ತಿರುಪು ರಕ್ಷಣಿಯು 1 ವಾಲೆ ಏನಾಯಿತು ಅರಿತು ನೋಡದೇ ಮೂರ್ಖರಾಗದಿರೀ 2 ಗೊಣಗಬೇಡಿರಿ ನೀವೂ ಹಣವು ನಿಮಗು ನಮಗುಂಟು ವಿಚಾರಿಸೆ ಹಣವಿಲ್ಲದ ನರ ಹೆಣಕಿಂತ ಕಡಿಮೆ 3 ರಾಶಿಯೊಳೊಂದು ಹಿಡಿ | ತೆಗೆಯಲು ಹ್ರಾಸವೇನೋ ನೋಡಿ ಮೋಸವೆ ಬರುವುದು ಓಸುಜನರೇ ಕೇಳಿ 4 ನಿಮ್ಮ ದೊರೆಗಾಳು ನಮ್ಮ ಗುರುವಲ್ಲವೇ ನಿಮಗೆ ನಾವಾಳಾದರೂ ದಯೆಯಿಲ್ಲವೇ 5 ಧೀರನು ಬಹುಬಲ್ಲ ಭೋಗದಿಂದಲೆ ರೋಗ ಬರುವುದು ತ್ಯಾಗದಿಂದಲೆ ಯೋಗ ಒದಗುವುದು6 ಸತಿಗೆ ಒಡವೆಯಿಟ್ಟು | ಕಳೆಯಲು ಹಿತವೇ ನಿಮಗಷ್ಟು ಅತಿಶಯ ಭೋಗಗಳಪೇಕ್ಷಿಸುವಿರೈ 7 ಮರವೆಯೆ ಅತಿ ಕಷ್ಟ ಮರವೆಯೆ ದುಃಖವು ಮರವೆಯೆ ನರಕವು ಹರಿ ಕೃಪೆಪಡೆದು ಅರಿವು ಸಂಪಾದಿಸಿ 8 ತಿರುಕನು ಈಶ್ವರನೂ | ಇಂದ್ರಗಾಗಿ ತಿರುಪುಹಾಕಿರುವ ತ್ರಿಲೋಕಗಳಿಗೂ9
--------------
ಗುರುರಾಮವಿಠಲ
ನಾನೇ ಸಜ್ಜನನಾದಡೆ ಇಂಥ ಹೀನ ವಿಷಯಗಳಿಗೆರಗುವೆನೇನಯ್ಯ ಪ. ನಿರುತದಿ ಪರರ ನಿಂದಿಸುತಿಹೆನೆಗುರುಹಿರಿಯರು ಸಜ್ಜನರೆನ್ನದೆಹರಿ ಪರದೈವವೆಂದರಿತು ಭಜಿಸದೆಪರರ ವಡವೆಗಳ ಬಯಸುವೆನೇನಯ್ಯ 1 ಚಿತ್ತವ ಪುರುಷೋತ್ತಮನ ಮನದಲ್ಲಿಡದೆಉತ್ತಮರಾದವರೊಡನಾಡದೆತತ್ವ ವಿಚಾರವ ಮಾಡದೆ ನಾನು ನ್ಮತ್ತರ ಸಂಗವ ಮಾಡುವೆನೇನಯ್ಯ 2 ಹೇಯ ಶರೀರವ ಪೋಷಿಸಿಕೊಂಡುಪಾಯವ ಚಿಂತಿಸಿ ಬಳಲುವೆನುರಾಯರ ಶರಣರ ಸಲಹುವರಂಗವಿಠಲನ ಬಿಡುವೆನೇನಯ್ಯ 3
--------------
ಶ್ರೀಪಾದರಾಜರು
ಪಂಪತಟಗನ ಹೃದಯ | ಸಂಪುಟದಲಿಹ ಸದಯಶಂಫಲಿಯ ಪುರವಾಸಿ | ಭಕುತ ಜನ ತೋಷೀ ಪ ಬೋಧ ತೀರ್ಥರ ಸದನಮಾಧವನೆ ಹಯವದನ | ಸುಗುಣ ಗಣಪೂರ್ಣಾ ||ಹೇ ದಯಾಂಬುಧೆ ಚೆನ್ನ | ಯಾದವೇಶನೆ ಎನ್ನಕಾದು ಕೊಳ್ಳೆಲೊ ಘನ್ನ | ಶೀಲ ಸಂಪನ್ನಾ 1 ಕೃಷ್ಣ ಪದ ಸರಸಿಜವ | ನಿಷ್ಠೆಯಲಿ ಭಜಿಸಿದವಜಿಷ್ಣು ಸಖನಿಗೆ ಪ್ರೀತ | ಮಧ್ವಮುನಿ ಭ್ರಾತಾ ||ವಿಷ್ಣು ತೀರ್ಥರ ಹಸ್ತ | ಇಷ್ಟ ಪೂಜೆ ಸಮಸ್ತಅಷ್ಟ ವಿಭವದಿ ಗೊಂಡ | ಶ್ರೀಲಕುಮಿ ಗಂಡಾ2 ಕಾಲ ||ವಸುಮತಿಯ ಶ್ರೀಲೋಲ | ಕಿಸಲಯಾವಳಿ ಮಾಲವಸುದೇವ ಮುದ ಬಾಲ | ಪರಿಪಾಹಿ ಕೋಲಾ 3 ನಿಜಭೃತ್ಯ ಭಾಷಿತವ | ನಿಜವ ಮಾಡಲು ದೇವನಿಜ ವ್ಯಾಪ್ತಿ ಸ್ತಂಭದಲಿ | ನಿಜದಿ ತೋರುತಲಿಸುಜನ ಜನರುದ್ದರಣ | ಕುಜನರಸು ವಿಹರಣಅಜ ಜನಕ ವಿಶ್ವೇಶ | ಕರುಣಿಸೆಲೊ ಶ್ರೀಶಾ 4 ನಿಟಿಲ ನೇತ್ರನ ಬಿಂಬ | ಪಟವು ವಡವೆಗಳೆಂಬಕಟು ಸವಿಯನುಂಬುವನು | ಸಕಲ ಕ್ರಿಯಗಳನೂಧಿಟ್ಟ ಗುರು ಗೋವಿಂದ | ವಿಠಲ ನಿನ್ನಾನಂದದಿಟವೆಂಬ ವರ ಮತಿಯ | ಪಾಲಿಸೆಲೊ ಜೀಯ 5
--------------
ಗುರುಗೋವಿಂದವಿಠಲರು
ಮೂಲ ಪ್ರಕೃತಿ ಪ ಪತಿಯೆ ಸದ್ಗತಿಯೆ ಇದನಿತರರಾ ಬೇಡೆ ನಾಂ ಹಿತಮಾಡುವನು ನೀನು ಸತತಾಯನ್ನಗಲದಿರು ಅ.ಪ ತತ್ವಾಮಂಗಳದ್ರವ್ಯ ಸಾತ್ವೀಕ ವೃತ್ತಿ ಸಂ ಪತ್ತಿನೋಳ್ ಹಿಗ್ಗುವ ಮುತ್ತೈದೆಯೆನಿಸೆನ್ನ 1 ಗುರುಭಕ್ತಿಯೆಂಬ ಭರ್ಜರಿಸೀರೆಯನುಡಿಸಿ ಕಂಚುಕ ತೊಡಿಸಿ ಹರುಷದಿ ಕೊಡು ಮುಕ್ತ 2 ಕಳ್ಳರಿಗೆ ಕಾಣದ ಒಳ್ಳೆ ವಡವೆಗಳಿಟ್ಟು ಚೆಲ್ವನಿ ನ್ನೊಳು ಬೆರೆಸುನಲ್ಲಾ ಗುರುರಾಮವಿಠಲ ಪತಿಯೆ 3
--------------
ಗುರುರಾಮವಿಠಲ