ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಬಿಡು ಬಿಡು ಮನವೇ ನಿನ್ನಾ ದುರ್ಗುಣದಾ ಸಂಗಾ | ಪಿಡಿಯೋ ಸಾಧುಜನರಾ ನೆರಿಯಾ ಕಾವಾ ಶ್ರೀರಂಗಾ ಪ ನೆನೆಯಲಿಕ್ಕೆ ವಿಷಯ ಸಂಗದಿಂದ ಕಾಮ ಕ್ರೋಧ | ಜನಿಸಿ ಮೋಹ ಸ್ಮತಿಯಗೆಟ್ಟು ಕೆಡುವಿ ಮತಿಮಂದ 1 ಗರಳ ವೇರಿದವಗ ಬೇವು ಸಿಹಿ ದೋರುವಂತೆ | ನಿರುತ ಇಂದ್ರಿಯ ವಿಷಯ ಸುಖವು ಅದರಂತೆ 2 ಪಿತ್ತವಡರಿದಾಗ ಎಂತು ಲೋಕ ತಿರುಗಿಹುದು | ಮತ್ತ ಗುರು ಹಿರಿಯರ ಬಗೆವೀ ಮನುಜರಿವರೆಂದು 3 ಎಂತು ಹೇಳಲಿ ನಿನಗ ಹರಿನಾಮ ನಂಬುಗೆಯಿಲ್ಲಾ | ಪಂಥದರವ ಜ್ಞಾನದ ದೃಷ್ಟಿ ತೆರೆಯದಾಯಿತಲ್ಲಾ 4 ತಂದೆ ಮಹಿಪತಿ ಸ್ವಾಮಿ ನಮಿಸಿ ಕೇಳು ಹಿತವಾ | ಮಂದಭವದಿ ತೊಳಲ ಬ್ಯಾಡಾ ಹೊಂದು ನಿಜಪಥವಾ 5
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ವನಜನಯನನ ಮನವ ಮಧುಪ ನಂಬುವರೆಮನದೆಗೆದ ಮದನಪಿತ ವಿಠಲರೇಯಾ ಪ ಅರಿಯದ ಬಾಲೇರಿಗೆ ತನ್ನ ಪರಿಯನರುಹಿಸಿ ಮುನ್ನನೆರೆದು ರತಿಪತಿಯ ಸುಖ ನೆರೆದೋರಿದತೊರೆದು ಬದುಕುವೆವೆಂತೋ ರತಿಪತಿಯ ಪಿತನಗಲಿವಿರಹದುರಿ ತಾನಳವಡರಿ ಸುಡುತಿಹುದು 1 ನಡೆ ನಗೆಯ ತುದಿನೋಟ ಬಲೆಯನೆಮ್ಮೊಳು ಬೀಸಿಬಿಡದೆ ಯೆಮ್ಮನು ತನ್ನ ವಶಮಾಡಿದಪಡಿಯಿಲ್ಲದನುಭವದ ಸುಖದ ಸವಿಯನೆ ತೋರಿಮಡದಿ ತಡೆದಳೊ ಮಧುರೆಯಲಿ ನಲ್ಲನ2 ಎಂದೆಂದು ನಿಮ್ಮ ವಶದಲ್ಲಿಹೆನೆಂದಭಯವಿತ್ತುಇಂದುಮುಖಿ ನಾರಿಯರ ನೆರೆ ನಂಬಿಸಿನಂದನಂದನ ನಮ್ಮ ಕಾನನದೊಳೀಡ್ಯಾಡಿಇಂದು ಮಧುರೆಯ ನಾರಿಯರ ನೆಚ್ಚಿದ 3 ಕಪಟ ತಿಳಿಯಲರಿಯದೆ ನಾವುನವ ಹರಿಣಿಯಂತೆ ಮರುಳಾಗಿ ಕೇಳಿವಿವರವರಿಯದೆ ನಾವು ಕಡು ನೊಂದೆವೆಲೊ ಮಧುಪಇವನ ಗುಣವರಿಯದೆ ಕಡುಕರುಣಿ ಎಂಬುವರು 4 ಭವ ಬಂಧನಗಳೆಲ್ಲ ಈಡ್ಯಾಡಿಗತಿ ನಮಗೆ ಅವನೆಂದು ಮನಸೋತೆವೋಕೃತಕವರಿಯದೆ ನಮ್ಮ ವನದೊಳು ನಿಲ್ಲಿಸಿ ಪೋದಪತಿಯೊಡನೆ ಸಂಧಾನವೆಂತೊ ಎಲೊ ಮಧುಪ 5 ಮರುಳುಗಳು ನಾವು ಶ್ರೀಪತಿಯ ಕೂಟವ ಬಯಸಿಇರುಳು ಹಗಲು ಜರಿಜರಿದಳಲುವೆವುಸಿರಿಯವನ ಉಂಗುಟದ ಉಗುರು ಗುಣ ಕಾಣಳೆಲೋಹರಿ ನಮ್ಮ ನೆನೆವುದಚ್ಚರಿಯಲ್ಲವೆ6 ಭೃಂಗ ಮಧುರೆಗೆ ಪೋಗಿರಂಗವಿಠಲನ ತಂದೆಮ್ಮನುಳುಹುವುದೋ 7
--------------
ಶ್ರೀಪಾದರಾಜರು
ಹ್ಯಾಗೆ ದೊರಕೀತು ನಿನ್ನ ಚರಣವು ನಾಗಶಯನನೆನ್ನಂಥ ಪಾಪಿಗೆ ಪ ನೀಗಿ ಹೋಯಿತು ಅರ್ಧವಯವು ಆಗಯೀಗಯಾ ವಾಗಲೋ ಹೋಗುವುದು ದೇಹ ಭೋಗದಾಸೆಯು ನೀಗವಲ್ಲದು ಎನಗೆ ಇನ್ನು ಅ.ಪ ಮನದಕ್ಲೇಶವು ಕಡಿಯವಲ್ಲದು ನೀಚತನದ ನೆನವು ಎನ್ನೊಳಳಿಯವಲ್ಲದು ಸಾಚನಾಗಿ ನಿನ್ನ ಧ್ಯಾನದಿ ಮನವುಯೆಂಬುದು ಕ್ಷಣವು ನಿಲ್ಲದು ಕ್ಷಣವು ಬಿಡದೆ ಅನ್ಯರೊಡವೆಯ ಮನದೊಳನುದಿನ ನೆನೆದು ನೆನೆದು ಘನ ಪಾಪಾತ್ಮನಾಗಿ ಚರಿಸುವೆ ಜ್ಞಾನ ಬಾರದು ಎನಗೆ ಇನ್ನು 1 ಒಡವೆವಸ್ತ್ರದ ಆಸೆ ಬಿಡವಲ್ಲದು ಪಾಪಿಮನವು ಮಡದಿ ಮಕ್ಕಳ ಮಮತೆ ತೊರೀವಲ್ಲದು ಒಡನೆ ತಿಳಿದು ಕೆಡುವ ಕಾಯದ ಮೋಹ ಮರೀವಲ್ಲದು ಜಡಮತಿಯು ಬಿಡದು ಎಡರು ಪ್ರಪಂಚ ತೊಡರಿನೊಳು ಮನ ವಡರಿ ಬಿಡದಲೆ ಮಿಡುಕಿ ಮಿಡುಕಿ ಕಡೆಯುಗಾಣದೆ ಕಷ್ಟಬಡುತಿಹೆ ಬಿಡದು ವಿಷಯದಾಸೆ ಎನಗೆ 2 ದಾಸಜನ ವ್ಯಾಸಂಗ ಮೊದಲಿಲ್ಲ ಪಾಪಿಜನುಮ ದೋಷಗುಣಗಳು ಒಂದುಬಿಟ್ಟಿಲ್ಲ ಒಡನೆನುಡಿದ ಭಾಷೆಗಳನು ತಿಳಿದು ನಡೆಸಿಲ್ಲ ಆಸೆ ಹರಿದಿಲ್ಲ ನಾಶಮಾಡಿತು ಹೇಸದಲೆ ಇನ್ನು ಮೋಸಗಾರನ ಪೋಷಿಸುವುದು ಶ್ರೀಶ ಶ್ರೀರಾಮ ನಿನಗೆ ಕೂಡಿತು 3
--------------
ರಾಮದಾಸರು