ಮೂರ್ಖರ ವಡಂಬಡಿಸಲಾಗವದೆಂದೆಂದು ಪ
ಮಳಲ ತಂದಿಕ್ಕಿ ಗಾಣದೊಳಗ ಸಾಯಸದಿಂದ |
ಬಲಿದು ಎಣ್ಣೆಯ ತೆಗೆಯಲಿಬಹುದು 1
ಗಿರಿಗಳಂದದಿ ಬಹಥೆರೆಗಳ ಕಡಿಯುತ |
ಶರಧಿಯದಾಟಿ ಹೋಗಲು ಬಹುದು 2
ಇಳೆಯೊಳು ತಿರುಗುತ ದೇಶ ದೇಶಗಳನು |
ಮೊಲದಾ ಕೋಡವ ದೊರಕಿಸಬಹುದು 3
ತೋರುವ ಮೃಗಜಲ ಹಿಡಿದು ಪ್ರಾಶನ ಮಾಡಿ |
ನೀರಡಕಿ ಶಾಂತ ಮಾಡಿಲಿಬಹುದು 4
ಮೊಸಳಿದಾಡಿಯೊಳಿಹ ಅಮೌಲಿಕ ರತ್ನ ತನ್ನ |
ವಶವನೆ ಮಾಡಿಕೊಳ್ಳಲಿಬಹುದು 5
ಪರಿ |
ಶಿರಸದಿ ಬೇಗ ಧರಿಸಲಿಬಹುದು 6
ಗುರುಮಹಿಪತಿಸುತ ಪ್ರಭು ಗುರುತಿಲ್ಲವರಾ |
ನೆರಳಿಗೆ ದೂರ ಕೈ ಮುಗಿವನು 7