ನೋಡಯ್ಯಾ ಹರಿಯೆ ಪ
ಪಂಡರಪುರ ನಿಲಯನೆ ಕುಂಡಲಿಶಯನನೆ ಅ.ಪ.
ಪುಂಡರೀಕಗೊಲಿದವನೆ | ಅಂದು
ಶುಂಡಾಲವ ಪೊರೆದವನೆ
ಅಂಡಜ ವರ ವಾಹನನೆ | ಎನ್ನ
ಮಂಡೆಯ ಮೇಲ್ಕರವಿಡುತಲಿ 1
ವಿಜಯಗೆ ಸಾರಥಿಯಾದಿ | ಅವನ
ಭುಜಗ ಶರದಿಂದ ಪೊರೆದಿ
ನಿಜ ಭಕುತಗೆ ನೀ ಒಲಿದ | ದೇವ
ಕುಜನಮರ್ದನ ಹರಿ ಮುದದಿ 2
ಪಟುತರ ದೇಹ ಪ್ರಕಾಶ | ದಿಂದ
ವಟುವಂತೆ ಮೆರೆವ ಶ್ರೀಶ
ಕುಟಿಲ ರಹಿತ ರಂಗೇಶ | ವಿಠಲ
ಹಟಮಾಡದೆ ಕಣ್ತೆರದು 3