ರಕ್ಷಿಸು ಮಹಮಾಯೆ ಕರುಣ ಕ-
ಟಾಕ್ಷದಿಂದಲಿ ತಾಯೆ ಪ.
ದಾಕ್ಷಾಯಿಣಿ ದೈತ್ಯಾಂತಕಿ ವರ ನಿಟಿ-
ಲಾಕ್ಷನ ರಾಮಿ ನಿರೀಕ್ಷಿಸು ಜನನೀಅ.ಪ.
ವಾಸವಮುಖವಿನುತೆ ರವಿಸಂ-
ಕಾಶೆ ಸುಗುಣಯೂಥೇ
ಭಾಸುರಮಣಿಗಣಭೂಷೆ ತ್ರಿಲೋಕಾ-
ಧೀಶೆ ಭಕ್ತಜನಪೋಷೆ ಪರೇಶೆ1
ಗುಹಗಣಪರಮಾತೆ ದುರಿತಾ-
ಪಹೆ ದುರ್ಜನ ಘಾತೆ
ಬಹುಕಾಮಿತಪ್ರದೆ ಭಜಕಜನೋರ್ಜಿತೆ
ಮಹಿತೆ ಯೋಗಿಹೃದ್ಗುಹನಿವಾಸಿನಿಯೆ2
ಶುಂಭಾಸುರಮಥಿನಿ ಸುರನಿಕು-
ರುಂಬಾರ್ಚಿತೆ ಸುಮನಿ
ರಂಭಾದಿಸುರನಿತಂಬಿನೀ ಜನಕ-
ದಂಬಸೇವಿತಪದಾಂಬುಜೆ ಗಿರಿಜೆ3
ಅಷ್ಟಾಯುಧಪಾಣಿ ಸದಾಸಂ-
ತುಷ್ಟೆ ಸರಸವಾಣಿ
ಸೃಷ್ಟಿಲಯೋದಯಕಾರಿಣಿ ರುದ್ರನ
ಪರಾಕು ಕಲ್ಯಾಣಿ4
ನೇತ್ರಾವತಿ ತಟದ ವಟಪುರ-
ಕ್ಷೇತ್ರಮಂದಿರೆ ಶುಭದಾ
ಸುತ್ರಾಣಿ ಲಕ್ಷ್ಮೀನಾರಾಯಣಿ ಸ-
ರ್ವತ್ರ ಭರಿತೆ ಲೋಕತ್ರಯನಾಯಕಿ5