ಪ್ರಾಣಾಂತರ್ಗತಪ್ರಾಣ ಅಣು
ರೇಣುಚರಾಚರಪೂರ್ಣ ಪ.
ಕಾಣೆನು ನಿನ್ನ ಸಮಾನ ಮಾನದ ಪು-
ರಾಣಪುರುಷ ಸುತ್ರಾಣ ವರೇಣ್ಯಅ.ಪ.
ಪಂಕಜನಾಭ ಶ್ರೀವೆಂಕಟರಮಣನೆ
ಕಿಂಕರಜನಮನಃಪ್ರೇಮದನೆ
ಶಂಕರಾದಿ ಸುರಸಂಕುಲ ಸೇವಿತ
ಶಂಖ ಸುದರ್ಶನ ಗದಾಬ್ಜಹಸ್ತನೆ 1
ಪಾಪಿಯು ನಾ ನೀ ಪಾಪಹ ಪಾವನ
ರೂಪ ಪರಾತ್ಪರ ಗೋಪಾಲ
ಕಾಪಾಡೆಮ್ಮ ಸಮೀಪಗನಾಗಿ ಜ-
ಯಾಪತಿ ಗೋಪತಿ ಶ್ರೀಪತಿ ನೀ ಗತಿ 2
ಚಟುಳ ನೇತ್ರಾವತಿತಟ ನಿಕಟ ಪ್ರಕಟ
ವಟಪುರವರ ವೆಂಕಟಧಾಮ
ವಟುವಾಮನ ಲಕ್ಷ್ಮೀನಾರಾಯಣ
ಪಟುವೀರ್ಯ ತಮಃಪಟಲನಿವಾರಣ 3