ಒಟ್ಟು 4 ಕಡೆಗಳಲ್ಲಿ , 3 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕಂಡೆ ನಾ ಕಣ್ಣಾರೆನಾ | ಕಂಡೆನಾ ಪ ಕಂಡೆನು ಕರುಣಾಸಾಗರನ | ಕರ ದಂಡ ನಾಮಕೊಲಿದವನ | ಆಹಾ ದಂಡ ಧಂಡದ ಲೀಲೆ ತೋಂಡರೊಡನಾಡು ಮೂರ್ತಿ 1 vಟಿಟತಮತ್ಕೋಟಿ ಸನ್ನಿಭನ | ದೇವ | ತಟಿನಿಯ ಪದದಿ ಪೆತ್ತವನ | ಚಾರು ಕರವ ನಿಟ್ಟವನ | ನಿಜ ಭಟ ಜನರಿಗೆ ಮುಕ್ತಿ ಪ್ರದನ ||ಆಹಾ || ಜಠರದಿ ಜಗವಿಟ್ಟು ವಟದೆಲೆಯೊಳು ಮಲಗಿ ವಟುರೂಪದಲಿ ಪಾದಾಂಗುಟವನು ಮೆಲುವನ 2 ಭುವನದೊಳು ಸಂಚರಿಸುವನ | ಕೂರ್ಮ ಮಾನವ ಪಂಚಮುಖನ | ಋಷಿ ಕುಮಾರ ಕುವರರ ಕಡಿದವನ ಮಹಿ ಕರವ ಕುವಲಯ ಸಖ ಕುಲೋಧ್ಭವ ಭವಮಾರ್ಗಣ ಬವರದಿ ಹಯವೇರಿ ಯವನರ ಬಡಿದನ 3 ಲ್ಮೊಗನ ನಾಭಿಲಿ ಪಡೆದವನ | ರವಿ ಮಗನಿಗೆ ಮಗನಾದವನ ತನ್ನ ಪೊಗಳುವಂಥರಫÀ ಕಳೆಯವವನ ಆಹಾ ಜಗನ್ನಾಥದಾಸರಿಗೆ | ಸೊಗಸಾದ ಮೃಷ್ಟಾನ್ನ ಬಗೆ ಬಗೆ ಉಣಿಸಿದ ಖಗಪತಿ ಗಮನನ4 ಸಾಸಿರನಯನನುಜನ | ಮಹಿ ದಾಸ ಕಪಿಲದತ್ತಾತ್ರೇಯನ ವೇದ ವ್ಯಾಸ ವೃಷಭ ಹಯಮುಖನ ಭಾರ ಶ್ರೀಶ ಮಾನಸಮಂದಿರ ||ಆಹಾ || ಶ್ರೀಶ ತಂದೆ ವೆಂಕಟೇಶ ವಿಠಲಂಘ್ರಿ ದಾಸರ ಸತ್ಯಹವಾಸದಿಂದಲಿಯಿಂದು 4 ತಂದೆ ತಾಯ್ಗಳ ಸುಕೃತವೊ | ನಮ್ಮ ಒಂದೂರಾರ್ಯರ ಅನುಗ್ರಹವೋ | ಸ್ತಂಭ ಮಂದಿರ ರಾಯರ ದಯವೊ | ದಾಸ ವೃಂದ ಕೃತಾಶೇಷ ಫಲವೊ | ಆಹಾ ಇಂದು ಭಾಗದಿ ಭಕ್ತಾವೃಂದಕೆ ದರುಶನಾ ನಂದಗರೆವ ಶಾಮಸುಂದರ ವಿಠಲನ 5
--------------
ಶಾಮಸುಂದರ ವಿಠಲ
ಕಾಯೆ ದುರ್ಗಾಂಭ್ರಣಿಯೆ | ಕಾಯೆ ಶ್ರೀ ರುಕ್ಮಿಣಿಯೆ ಶುಭ ಕಾಯೆ ದಯದಿ ಹರಿ ವಿಧಿ ಕಾಯಜ ತಾಯೆ ಪ ಮಾಕುಮತಿ ಶ್ರೀಕರಳೆ | ಪೋತನ ನುಡಿ ಕೇಳೆ ಭೀಕರಳೆನಿಸುತ | ವ್ಯಾಕುಲಗೊಳಿಸದೆ ನೀಕರುಣಿಸು ರತ್ನಾಕರನ ಮಗಳೆ 1 ಸೀತೆ ಸಾರಸನಯನೆ | ಶೀತಾಂಶುವಿನ ಭಗಿನಿ ಮಾತೆ ನಮಿಪೆ ತವ | ಘಾತಕ ವ್ರಾತದ ಭೀತೆಯ ತೋರದೆ | ಪ್ರೀತಿಯಿಂದೊಲಿದು 2 ಲಕ್ಷ್ಮಿಕೃತಿ ಶಾಂತಿ ಅಕ್ಷರಳೆ ಜಯವಂತಿ ಈಕ್ಷಣ ಕರುಣಕವಾಕ್ಷದಿಂದೀಕ್ಷಿಸು ಪೇಕ್ಷವ ಮಾಡದೆ ಮೋಕ್ಷದಾಯಕಳೆ3 ವಟದೆಲೆಯೊಳು ಮಲಗಿರುವ | ವಟುರೂಪಿ ಪತಿಪದವ ಪಠಿಸುತಬ್ಜಸೀಕರ | ಪುಟದಿ ನಮಿಸುವಂಥ ಕುಟಿಲರಹಿತೆ ಶತ | ತಟಿತ ಸನ್ನಿಭಳೆ4 ಭಾಮೆ ಶ್ರೀ ಭೂಸುತೆಯೆ | ಶಾಮಸುಂದರ ಸತಿಯೆ ನಾ ಮೊರೆ ಹೊಕ್ಕೆನು | ಪ್ರೇಮದಿಂದಲಿ |ಸು ಕ್ಷೇಮಗರೆದು ಮಮಧಾಮದಿ ನೆಲಸೆ 5
--------------
ಶಾಮಸುಂದರ ವಿಠಲ
ಮಗುವು ಕಾಣಯ್ಯ ಮಾಯದ ಮಗುವು ಕಾಣಯ್ಯ ಸುಗುಣಾ ವಾದಿರಾಜರೆ ಮೂಜಗವಾನುದರದೊಳಿಟ್ಟ ಪ ಏಕಾರ್ಣವಾಗಿ ಸಕಲ ಲೋಕವಾಕಾರವಳಿಯಲೂ ಏಕಮೇವಾದ್ವಿತೀಯವೆಂಬಾಗಮಕೆ ಸಮವಾಗೀ ಶ್ರೀಕರಾಂಬುಜದಿಂ ಪಾದಾಂಗುಲಿಯ ಪಿಡಿದು ಬಾಯೊಳಿಟ್ಟು ಶ್ರೀಕಾಂತ ವಟದೆಲೆಯ ಮೇಲ್ಮಲಗಿ ಬ್ರಹ್ಮನ ಪಡೆದಾ 1 ಮಾಯಾಪೂತನೀಯ ಕೊಂದು ಕಾಯವ ಕೆಡಹಿ ಶಕಟನನು ಸಾಯಬಡಿದು ವತ್ಸನ ಧೇನುಕನ ವೃಷಭನ ನೊಯ್ಯನೊದ್ದು ಯಮಳಾರ್ಜುನರಿಗೆ ಸಾಯುಜ್ಯವನಿತ್ತು ತನ್ನ ತಾಯಿಗೆ ತಾ ಮಣ್ಣುಮೆದ್ದು ಬಾಯಿ ಬಿಚ್ಚಿ ತೋರಿಸಿದಾ 2 ಕಡಹದಾ ಮರವನೇರಿ ಸಂಗಡಿಗರೊಂದಿಗೆ ಕಾಳಂದಿಯ ಮಡುವಲಿ ಧುಮುಕಿ ಕಲಕಿ ಜಲವಾ ಆ ಕಾಳಿಂಗನಾ ಪೆಡೆಯ ತುಳಿದು ಜಡಿಯಲವನಾ ಮಡದಿಯರು ಬೇಡಿಕೊಳ್ಳೆ ಕಡಲಿಗಟ್ಟಿ ಬಂದು ಎನ್ನ ತೊಡೆಯ ಮೇಲೆ ಮಂಡಿಸಿದ 3 ಬಳ್ಳಿಗಟ್ಟದುಡಿಯಲ್ಲಿ ಗುಲ್ಲಿಯ ಚೀಲಾವ ಸಿಕ್ಕಿಸಿ ಕಲ್ಲಿಗಟ್ಟ್ಯೊಗರ ಕಂಬಳಿಯ ಕೋಲು ತುದಿಯೊಳು ನಿಲ್ಲಿಸಿ ಹೆಗಲೊಳು ಕೊಂಬು ಕೊಳಲನು ಪಿಡಿದೂದುತ್ತ ಗೊಲ್ಲರೊಡಗೂಡಿ ಆಡುತೆಲ್ಲ ಗೋವುಗಳ ಕಾಯ್ದಾ 4 ಶ್ರುತಿತತಿಗಗೋಚರನು ಚುತಿದೂರನಾದಿಮೂರ್ತಿ ಚತುರ್ಮುಖಾದಿಶೇಷ ದೇವಾರಾಧ್ಯ ದೇವನು ಪತಿ ವೈಕುಂಠಕೇಶವನು ಯತಿಯೆ ನೀ ನೋಡಲು ಶರಣಾಗತನ ತೊಡೆಯೊಳು 5
--------------
ಬೇಲೂರು ವೈಕುಂಠದಾಸರು
ಜಗದುದ್ಧಾರಕ ತನ್ನ ಮಗನೆಂದು ಬಗೆದು |ನಿಗಮಗೋಚರನ ಆಡಿಸಿದಳು ಯಶೋದೆ ಪವಟದೆಲೆಯ ಮೇಲು ಸಂಪುಟದ ಮೇಲೊರಗಿ ಉಂ-ಗುಟವ ಪೀರುವನ-ಆಡಿಸಿದಳು 1ವಿಶ್ವತಶ್ಚಕ್ಷುವ ವಿಶ್ವತೋಮುಖನ |ವಿಶ್ವವ್ಯಾಪಕನ-ಆಡಿಸಿದಳು 2ಅಣೋರಣಿಯನ ಮಹತೋಮಹೀಯನ |ಗಣನೆಯಿಲ್ಲದವನ-ಆಡಿಸಿದಳು 3ನಿಗಮಕೆ ಸಿಲುಕದಅಗಣಿತಮಹಿಮನ |ಮಗುಗಳ ಮಾಣಿಕ್ಯನ-ಆಡಿಸಿದಳು 4ಎಲ್ಲರೊಳು ಭರಿತನಾಗಿ ಇಪ್ಪ ಲಕುಮಿಯ |ವಲ್ಲಭಪುರಂದರವಿಠಲನ-ಆಡಿಸಿದಳು5
--------------
ಪುರಂದರದಾಸರು