ಸುಜ್ಞಾನಿ ನಡೆ ಬೇರೆ ಅಜ್ಞಾನಿ ನಡೆ ಬೇರೆ
ಜ್ಞಾನದಿಂದ ಪ್ರಮಾಣಿಸಿ ನೋಡಲು ಪ
ಸುಜ್ಞಾನಿ ನುಡಿಯದರ ಕಡೆತನಕ
ಅಜ್ಞಾನಿ ನುಡಿ ಸದಕ
ಸುಜ್ಞಾನಿಯನುಡಿ ಒಂದೆ ನಿರ್ಧಾರ
ಅಜ್ಞಾನಿಯ ನುಡಿ ಪದರುದರ 1
ಸುಜ್ಞಾನಿ ಬಾಳು ಭವಲೂಟಿ ಕಡೆತನ
ಅಜ್ಞಾನಿ ಬಾಳು ಸುಳ್ಳು ಮುಷ್ಟಿ
ಸುಜ್ಞಾನಿಯ ವರ್ತನೇ ವಜ್ರದಗಟ್ಟಿ
ಅಜ್ಞಾನಿವರ್ತನೆ ಗಾಳಿಯ ಮೊಟ್ಟೆಮೊಟ್ಟೆ 2
ಸುಜ್ಞಾನಿಗೆ ಮುಕ್ತಿಪಟ್ಟ ಕಡೆತನ
ಅಜ್ಞಾನಿಗೆ ಮೃತ್ಯುಕಾಟ
ಅಜ್ಞಾನಿಕಾಣುವ ಯಮನಗೂಟ
ಸುಜ್ಞಾನಿ ಕಾಣುವ ಶ್ರೀರಾಮನಾಟ ಆಟ 3