ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ತೇಜಿಯೇರಿ ಮೆರೆದು ಬಂದ ರಾಜಬೀದಿಯೊಳಗಿಂದ ಕಸ್ತೂರಿ ರಂಗ ಪ. ಸುತ್ತಮುತ್ತ ಸಾವಿರಾರು ಸಾಲುದೀವಟಿಗೆ ಹತ್ತುದಿಕ್ಕಿಲಿ ಬೆಳಗುತಿಹ ಹಗಲುಬತ್ತಿಗಳು ಇತ್ತೆರಪು ಭೂಸುರರು ಸಾಲುಗಟ್ಟಿ ನಿಂತಿರಲು ಮತ್ತೆ ಸಭಾದಿಂದ ತೇಜಿ ಮೆಲ್ಲನೆ ನಡೆಸುತ್ತ ಜಾಣ1 ತಾಳ ಶಂಖ ಭೇರಿ ತಮ್ಮಟೆ ತಂಬೂರಿ ಮೊದಲಾದ ಮೇಲು ಪಂಚಕಂಗಳೆಲ್ಲ[ಮಿಗೆ] ಪೊಗಳಲು ಗಾಳಿ ಗೋಪುರದ ಮುಂದೆ ರಾಯಬಿಡದಂತೆ ಸುತ್ತ ಧೂಳುಗಳೆಬ್ಬಿಸಿ [ವೈಹಾಳಿ] ನಿಕ್ಕುತ ಜಾಣ 2 ಮುತ್ತಿನ ತುರಾಯಿ ಅಂಗಿ ಮುಂಡಾಸು ತತ್ಥಳಿಪ ವಜ್ರಕೆಂಪಿನ ತಾಳಿ ಚೌಕಳಿ ಮುತ್ತಿನ ಕುಂಡಲವಿಟ್ಟು ಮೋಹಿಸುತ ಬೀದಿಯೊಳು ಕತ್ತಿಯ ಉಡಿಯಲ್ಲಿ ಕಟ್ಟಿ ಕೈಯಲಿ [ತೇಜಿಯ] ಪಿಡಿದು 3 ರಂಭೆ ಮೊದಲಾದ ದೇವರಮಣಿಯರು ಕುಂಭದ ಆರತಿಯೆತ್ತಿ ಕೂಡಿ ಪಾಡಲು ಶಂಭು ಮುಖ್ಯ ನಿರ್ಜರರೆಲ್ಲ ಸ್ವಾಮಿ ಪರಾಕೆಂದೆನುತ ಅಂಬುಜಭವಾದಿಗಳ ಆಳಿದ ಶ್ರೀರಂಗಧಾಮ 4 ವೇದಘೋಷದಿಂದ ವಿಪ್ರರು ಸ್ತುತಿಸಲು ಮೋದದಿಂದ ಗಾಯಕರು ಹಾಡಿ ಪಾಡಲು ಹಾದಿ ಬೀದಿಯಲಿ ನಿಂತು ಸಜ್ಜನರಿಗೆಲ್ಲ ದೇವ ಆದರದಿಂದಿಷ್ಟಾರ್ಥವಿತ್ತು ಮೋದದಿಂದ ಮನ್ನಿಸುವ 5 ಹಚ್ಚನೆ ಹೆಸರುಬೇಳೆ ಹಾಲುಕೆನೆಗಳು ಮುಚ್ಚಿತಂದ ಕೆನೆಮೊಸರು ಮೀಸಲು ಬೆಣ್ಣೆಯು ಅಚ್ಚ ತುಪ್ಪದಿ ಪಕ್ವವಾದ ಅತಿರಸ ಹುಗ್ಗಿಗಳು ಮೆಚ್ಚಿವುಂಡು ಪಾನಕ ನೀರುಮಜ್ಜಿಗೆಗಳನೆ ಕುಡಿದು 6 ಸಣ್ಣಮುತ್ತು [ತೆತ್ತಿಸಿದ] ಸಕಲಾತಿ ಗೊಂಡ್ಯ ಹೊನ್ನ [ತೆತ್ತಿಸಿದ ಹೊಸ] ಹೊಳೆವ ಸೊಬಗಿನ ಉನ್ನಂತ ಗುಣರಾಯ ಉತ್ತಮರಾಜಾಶ್ವವೇರಿ ಎನ್ನ ಹಯವದನ ರಂಗ ಎಲ್ಲರಿಗಿಷ್ಟಾರ್ಥಕೊಡುವ 7
--------------
ವಾದಿರಾಜ
ಲೋಕನೀತಿಯ ಪದಗಳು ಕೇಶವನ ದಾಸರಿಗೆ ಘಾಸಿಯುಂಟೆ ವಾಸವನ ವಜ್ರಕೆ ಗಿರಿನಿಕರದಂಜಿPಯೆ ಪ ಇದ್ದಲಿಯನು ಗೊರಲಿ ಮೆದ್ದು ಜೀವಿಪದುಂಟೆ ಮದ್ದಾನೆಗಳಿ ಗಲ್ಪ ನರಿಯ ಭಯವೇ ಅಬ್ದಗಳು ಮರುತನೊಳು ಯುದ್ಧ ಬಯಸುವದುಂಟೆ ಸಿದ್ಧರಿಗೆ ಭವಪಾಶ ಪದ್ಧತಿಯು ಉಂಟೆ 1 ಗುರುಕೃಪೆಯ ಪಡೆದವಗೆ ಪರಸೌಖ್ಯ ತಪ್ಪದೇ ಹರಿಯ ಸ್ಮರಿಸುವ ನರಗೆ ನರಕ ಭಯವೇ ಉರಗ ನಭಚರನೆದುರಲ್ಲಿಪ್ಪದೆ ನರಚಂಡಕರಕರ ಕಂಡು ಅರುಳುವುದೆ ಕುರುಕುಮುದಾ 2 ಮೇರುವಿಗೆ ಛಳಿ ಭಯವೇ ವಾರಿಧಿಗೆ ಮಳಿ ಭಯವೇ ಮಾರನ್ನ ಗೆದ್ದವಗೆ ನಾರಿ ಭಯವೇ ತಾರಕಾ ಪ್ರೀಯ ಶಿರಿಗೋವಿಂದವಿಠಲಗೆ ಸೇರಿರುವ ಶೂರರಿಗೆ ಆವ ಭಯವೈಯ್ಯಾ 3
--------------
ಅಸ್ಕಿಹಾಳ ಗೋವಿಂದ
ಶ್ರೀಧವನ ದೂತರಿಗೆ ಭೇದವುಂಟೆ ಕ್ರೋಧ ಜಯಿಸಿದ ನರಗೆ ಕಲಹಗಳುಂಟೆ ಪ ಗರುಡನಾಲಯದಿ ಉರಗಗಳ ಭಯವುಂಟೆ ಕರಿಯ ಬೆದರಿಕೆಗೆ ಮೃಗವರಗೆ ಉಂಟೆ ಹರಿದಿನದಲುಂಬುವಗೆ ದುರೀತ ತಪ್ಪುವದುಂಟೆ ಗುರು ಕರುಣ ಪಡೆಯದವಗೆ ಪರಗತಿ ಉಂಟೆ 1 ಅದ್ರಿಗಳ ಭಯವುಂಟೆ ಸುರಪನ ವಜ್ರಕೆ ಯುದ್ಧದ ಭಯವುಂಟೆ ವೀರನಿಗೆ ಶುದ್ಧ ಮನದಲಿ ನಮ್ಮ ಮಧ್ವಮತ ಸೇರಿದವ ಗುದ್ಧಾರವಲ್ಲದೆ ನರಕುಪದ್ರಗಳುಂಟೆ 2 ಕಂದರ್ಪ ನಂಜಿಕೆಯು ಶಿಂಧುರಾನನ ಕುಂಟೆ ನಿಂದಿಸುವ ಜನಕೆ ಸುಜ್ಞಾನವುಂಟೆ ಮಂದರೋದ್ಧಾರ ಶಾಮಸುಂದರನ ಪದಯುಗವ ಪೊಂದಿರ್ಪ ಸುಗುಣರಿಗೆ ಆವ ಕುಂದುಗಳಯ್ಯ 3
--------------
ಶಾಮಸುಂದರ ವಿಠಲ