(4) ಕೆಂಗಲ್ಲು ಆಂಜನೇಯ
ಕೆಂಗಲ್ಲ ಹನುಮಂತರಾಯ ನಮ್ಮ
ರಂಗನಾಥಗೆ ಬಹು ಪ್ರಿಯ ಪ
ಮಂಗಳಕರ ವಜ್ರಕಾಯ ಉ
ತ್ತುಂಗ ವಿಕ್ರಮ ಪೊರೆ ಜೀಯ ಅ.ಪ
ಶ್ರಾವಣ ಕಡೆ ಶನಿವಾರ ಬರೆ
ಭಾವಿಸಿ ಭಕ್ತರು ಸೇರೆ
ಆವಾವೆಡೆ ಜನ ಮೀರೆ ನಿನ್ನ
ತೀವಿದ ಮನದಿ ಪಾಡುವರೊ ದೊರೆ 1
ಬಹುಭಜಕರು ಕುಣಿದಾಡಿ ಗುಣ
ಸಾಹಸ್ರಗಳ ಕೊಂಡಾಡೀ
ಶ್ರೀಹರಿ ವೈಭವ ನೋಡೀ
ಮಹದಾನಂದದೊಳಗೋಲಾಡಿ2
ಪರಿ ವ್ಯಾದಗಳಿಂದ ಸಿರಿ
ವರನುತ್ಸವ ಬಹುಚಂದ
ತಿರುಪತಿ ಯಾತ್ರಿಕರಿಂದ
ನೆರೆದೆಸೆವ ಕಲ್ಯಾಣ ಬೃಂದ 3
ತಾಳ ತಂಬೂರಿ ಮದ್ದಳೆಯ
ಮೇಳ ತಮ್ಮಟೆಗಳ ಬಹು ಘೋಷ
ಭೂಲೋಕದಿಂ ಸ್ವರ್ಗಕೈದಿ ಶ್ರೀ
ಲೀಲೆಯ ತೋರ್ಪುದು ನಿಜದಿ 4
ವರಜಾಜಿ ಕೇಶವನ ನಾಮವನು
ನಿರುತ ನೆನೆವ ಶರಣ ಪ್ರೇಮ
ಕರುಣದಿ ಪೊರೆ ಪುಣ್ಯಧಾಮ
ಸಿರಿ ಜಯಚಾಮನೃಪಸ್ತುತ್ಯ ಭೀಮ 5