ಉಪಕಾರವೇನಾ ಹೇಳಲಿ | ಮಾಯಾದೇವಿಯಾ ||
ಅಪರ ಮಾತನ ರೂಪಕೆ ಮರೆಯಾಗಿ |
ಅನುದಿನ ಜನರಿಗೆ |
ಅಪರಾಧ ದಾರಿಗೆ ದೂರವಿಟ್ಟಳು ಪ
ಸೂರಿಯ ನಾರಾಯಣೆಂಬರು |
ಶರಣೆಂದು ಬಾಗರು ತಲೆಯನು ಒಬ್ಬರು ||
ಪರಿ |
ಧರೆಯೊಳುದಾಸೀನ ಮಾಡುವರೈಯಾ1
ಅಗ್ನಿದೇವರ ಮುಖವೆಂದು |
ಸುಜ್ಞಾನಿಗಳಿದು ಹೇಳುತಲಿಹಲು ||
ಅಜ್ಞಾನಿಗಳು ಅಲ್ಲೆ ಕಾಲವ ಕಾಸುತ |
ವಜ್ಞೆಯ ಮಾಡುವ ಉಗುಳುತಿಹರು2
ಎಂದೆಂದು ನಿಲುಕದ ಚಿದ್ರೂಪ ಘನವಾದ |
ತಂದೆ ಮಹೀಪತಿ ನಂದನ ಪ್ರಾಣನ ||
ಛಂದದಿ ಭಕ್ತಿಯ ಮಾರ್ಗದಿ ನಡೆಸುತ |
ಇಂದೆನ್ನ ಹರಿಮೆಚ್ಚು ಮಾಡಿದಳೈಯ್ಯಾ 3