ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಇದು ಏನೆ ಯಶೋದೆ ಇದು ಏನೆ ಯಶೋದೆ ದಧಿಯ ದಾಮೋದರ ಹೆದರಿಕಿಲ್ಲದೆ ಕುಡಿದೋಡಿ ತಾ ಪೋದ ಪ ಕೊಳಲನೂದುತಲೆ ಆಕಳನೆ ಕಾಯುತಲ್ಹೋಗಿ ಕಳಲ ಗಡಿಗೆಸುತ್ತ ಕುಣಿದಾಡುವುದು 1 ವತ್ಸಕಾಯುತ ವನದೊಳಗೆ ಆಡೆಂದರೆ ಕಿಚ್ಚುನುಂಗಿ ಸರ್ಪವ ತುಳಿಯುವುದು 2 ಚೆಂಡನಾಡುತ ತುರುವ್ಹಿಂಡು ಕಾಯೆಂದರೆ ಗಂಡನುಳ್ಳವರ್ಹಿಂದ್ಹಿಂದೆ ತಿರುಗುವುದು 3 ವಛ(ತ್ಸ?) ನಂದದಲಿ ಬಾಯ್ ಹಚ್ಚ ಗೋವಿನ ಕ್ಷೀರ ಅಷ್ಟು ಕುಡಿದನಾಶ್ಚರ್ಯ ನೋಡಮ್ಮ 4 ಇಂದೆನ್ನ ಮನೆಯಲ್ಲೊಂದಿಷ್ಟು ಕ್ಷೀರಗಳಿಲ್ಲ ಗಂಡ(ಅ?) ತಿ ದುಷ್ಟೆನ್ನ ಕೊಲ್ಲುವನಮ್ಮ 5 ಮೌನಗೌರಿಯ ನೋತು ನೀರೊಳಗಿದ್ದೆವೆ ಮಾನಹೀನರ ಮಾಡಿ ಮರವನೇರುವುದು 6 ಬಟ್ಟೆ ನೀಡೆಂದಾಲ್ಪರಿಯಲು ಜೋಡಿಸಿ ನಿಮ್ಹಸ್ತ ಮುಗಿ(ಯಿ) ರೆಂದಾಡುವುದು7 ಬುದ್ಧಿಹೇಳೆಂದರೆ ಮುದ್ದು ಮಾಡುವರೇನೊ ಕದ್ದು ಬಂದರೆ ಕಾಲು ಕಟ್ಟಿ ಹಾಕಮ್ಮ 8 ದಧಿ ಬೆಣ್ಣೆ ಚಂದ್ರನಂತ್ಹೊಕ್ಕು ತಾ ತಿಂದ ನೋಡಮ್ಮ 9 ಕೇರಿ ಮಕ್ಕಳ ನೋಡೊ ಮಹರಾಯ ಬಲರಾಮ ದೊಡ್ಡಮಗನು ಎಲ್ಲೆ ದೊರಕಿದನಮ್ಮ 10 ಮೀಸಲ್ಹಾಕಿದ ಬೆಣ್ಣೆ ನೀ ಸವಿದೀಯೆಂದು ಲೇಸಾಗಿ ಹೇಳೆ ಭೀಮೇಶಕೃಷ್ಣನಿಗೆ11
--------------
ಹರಪನಹಳ್ಳಿಭೀಮವ್ವ