ಶ್ರೀ ರಮಣಿಯರಸ ಕಂ ಜೋದ್ಬವಾರ್ಚಿತ ಪುಣ್ಯ |
ಚಾರುತರ ಯುಗ್ಮಪದ ರಂಜನಾಸುರ ಸಂ |
ಹಾರ ಸುರ ಜನ ಪಾಲ ಪರಮಾನಂದ ಸಾ |
ಕಾರನಲಿದುಪ್ಪವಡಿಸಾ ಹರಿಯೇ ಪ
ಹರಿವೇಗ ಮಂಮೀರ್ವ ಹರಿಗಳೇಳಂಗಳದಲಿ |
ಹರಿಯಾಗ್ರಜನನಿಂದ ಹರಿಪದದೊಳಗ ಜವದಿ
ಹರಿವುತಿಹ ಝಗ ಝಗಿಪ ಹರಿಮಯದ ರಥದೊಳಗ |
ಹರುಷಾದೊಳಡರ್ದು ಬಳಿಕಾ ||
ಹರಿದಿಕ್ಕಿ ಲಿಂದೊಗೆದು ಹರಿಜಗಳ ವಿಸ್ತರಿಸಿ |
ಹರಿಯುಮೊದಲಾದವರ ಹರಿಸಿ ತೇಜವ ಜಗಕ |
ಪರಿ ಹರಿಸಿ ಉದಿಸಿದಹರಿಯು ನರಹರಿಯೆ
ಉಪ್ಪವಡಿಸಾಹರಿಯೇ1
ಪವನಜ ಖಗರಾಜ |
ಭಜಿಪಧ್ರುವದ ಶಶಿರಾನುಜ ಭಿಷ್ಮಾ ತನ್ನ ಆ |
ತ್ಮ ಜರಿತ್ತ ರಿಕ್ಷಪತಿ ರಜನೀಶ ವಾನ್ನರ |
ಧ್ವಜ ವಿಧುರ ಅಂಬರೀಷಾ ||
ದ್ವಿಜ ಪುಂಡಲೀಕ ಪದ್ಮಜ ಮುಖ್ಯರಾದ ನಾ |
ಶುಕ ಉದ್ಧವ ಬಲಿ ಜಯ ವಿಜಯರ ಕೂಡಿ |
ಸುಜನರೈ ತಂದ | ರಂಬುಜ ಪದಕ ನಮಿಸೆ ವಾ |
ರಿಜನಾಭ ಉಪ್ಪವಡಿಸಾ ಹರಿಯೇ 2
ಪಾಕ ಶಾಸನ ಅಗ್ನಿ ಆಕಾಳ ನೈಋತಿರ |
ತ್ನಾಕರ ಪ್ರಭಂಜನಪಿ ನಾಕಿವರ ಕೌಬೇರ |
ನಾಕೆರಡು ದಿಕ್ಕಿನವರೇಕೋ ಭಾವದಲಿಂದ
ನಾಕ ಪುರಗಜ ಅಜಮಹಾ ಕೋಣ ಮನುಜ ಮಕ |
ಹಾಕುರಂಗಂದಣವು ಗೋಕುಲೆಂದ್ರನು ಇಂತು |
ವಾಹನ ವಿವೇಕದೇರಿ ಬಂದಿದೆ |
ಲೋಕೇಶ ಉಪ್ಪವಡಿಸಾ ಹರಿಯೇ3
ಶ್ರೇಷ್ಠ ಕಶ್ಯಪ ಋಷಿ ವಶಿಷ್ಠ ಗಾರ್ಗೇಯ ತಪೋ |
ನಿಷ್ಠ ವಿಶ್ವಾಮಿತ್ರ ಸೃಷ್ಠಿಯೊಳ ಜಲದ ಸಂ |
ದಷ್ಟ ವರುಣನ ಗರ್ವ ಭಷ್ಟ ಮಾಡಿದಗಸ್ತಿ |
ಅಷ್ಟಾದಶ ಧ್ವಯ ಬಾರಿ ಸೃಷ್ಟಿರ ಚನೆಯ ಕಂಡ |
ತುಷ್ಟ ಬಕದಾಲ್ಪ್ಯ ಉತ್ಕøಷ್ಟ ಸನಕಾದಿಗಳು |
ದೃಷಮಾನಿಸರಾಗಿ ಮುಟ್ಟಿಸ್ತುತಿ ಸುತಲಿದೇ |
ಕೃಷ್ಣ ನೊಲಿ ದುಪ್ಪವಡಿಸಾ ಹರಿಯೇ 4
ವರ ವಾಮ ದೇವಾತ್ರಿ ಪರಮಗಾಲ ವನುಸೌ |
ಭರಿಯ ಕೌಡಿಣ್ಯ ಸುಖ ಭರಿತ ಕೌಸಿರ ಮತಿ |
ಪರಿಪೂರ್ಣ ಜಯಾಮುನೀರ್ವರು ಭರತರುಸುಗುಣ
ಶರಧಿ ವೈಶಂ ಪಾಯನಾ||
ಸುರಪುರೋಹಿತ ಮಹಾ ಸುರರ ವಂಶಾವಳಿಯು |
ತರಣಿಜ ಬುಧಾದಿಗಳ |
ಕರದೊಳು ಸುಫಲವಿರಿಸಿ ಹರುಷಾದಲಿ ನಿಂದಿದೆ ||
ಪರಬೊಮ್ಮ ಉಪ್ಪ ವಡಿಸಾ ಹರಿಯೇ 5
ಡಮರುಧರ ಜಡೆಯೊಳಗ ಸಮುಲ್ಲಾಸದಲಿ ಮೆರೆವ
ಅಮರ ನದಿ ಪಾಪಹರ ಸಮಕೃಷ್ಣ ವೇಣಿ ಸು |
ವಿಮಲ ಗೋದಾವರಿ ಕುಮುದ್ವತಿ ಕಾವೇರಿ |
ಶ್ರಮಹಾರಿ ತುಂಗ ಭದ್ರಿ ||
ಯಮುನಿ ಫಲ್ಗುಣಿ ಮಹೋತ್ತಮ ಸರಸ್ವತಿ-ಕಪಿಲ |
ನರ್ಮದಿ ಮೊಲಾಗಿ ಅಮಲಗ್ರೋದ ಕವ |
ಕ್ರಮದಿಂ ಕೊಂಡು ನದಿ ಚಮು ಬಂದಿದೇ ಪೊರಗ |
ಕಮಲಾಕ್ಷ ಉಪ್ಪವಡಿಸಾ ಹರಿಯೇ6
ದಾರುಣೀ ಚರರಾದಾ ಚಾರುಗೋ ಬ್ರಾಹ್ಮಣರು |
ಸಂರಕ್ಷಣೆಯ ಮಾಳ್ವ ಧೀರಯ ಯಾತಿ |
ಮೇರು ಸಮ ಹರಿಶ್ಚಂದ್ರ ವೈರಾಟ ಪತಿಜನಕ |
ಆರಾಯ ನಳ ನಹುಷನು ||
ಶೂರ ಹಂಸಧ್ವಜನು ಸಾರಿ ವಿಷ್ಟಕ್ಸೇನ |
ವೀರ ಪಾಂಚಾಲನ - ಕ್ರೂರ ಚಂದ್ರಹಾಸ ಮ |
ಯೂರ ಧ್ವಜ ಪ್ರಮುಖರಾರತದಿ ಬಂದರಿದೆ |
ಕಾರುಣನೆ ಉಪ್ಪಾವಡಿಸಾ ಹರಿಯೇ 7
ವಾರಿಯೋಳ್ ನಡೆವಹತೇರಗಜ ಶೃಂಗರಿಸಿ |
ಏರಿಬಂದಿಳಿದು ಮಹಾ ವೀರ ಭಟರೋಗ್ಗೀನೊಳು |
ಬಾರಿ ಬಾರಿಗೆ ನಿಮ್ಮ ಚೀರುತ ಬಿರುದಂಗಳನು
ಭೂರಿಜನ ಸಚಿದಣಿಸುತಾ ||
ಪಾರವಿಲ್ಲದ ಪಟಹ ಭೇರಿ ನಿಸ್ಸಾಳತಹ |
ಳಾರವರಿದು ಊದುತಲಿ ಈ ರೀತಿ ನೃಪರದಳ |
ಚಾರುವಾಲಗವ ಮನವಾರಗುಡುತಿದೆ ಪರಮ
ಶೌರಿ ವಲಿದು ಪ್ಪವಡಿಸಾಹರಿಯೇ 8
ಕೇಣವನು ಗೊಳ್ಳದಿಹ ಜಾಣ ಕಲೆಯಿಂದ ಗೀ |
ರ್ವಾಣ ಸ್ತ್ರೀಯರು ನೃತ್ಯ ಮಾಣುತಲಿ ಬರೆಕರದಿ |
ವೀಣೆಯನು ತಾಂ ಪಿಡಿದು ವಾಣಿ ತುಂಬರ ಸುಪ್ರ
ವೀಣನಾರದ ಗಣಪನು ||
ಶ್ರೇಣಿಯಿಂ ತೊಡಗೂಡಿ ತ್ರಾಣದಿಂದಲಿ ನಾಮ |
ವಾಣಿಯಲಿ ವಚಿಸುತಿದೆ ಕಾಣಲ್ಕೆ ನಿಂದಿದೆ |
ಏಣಾಂಕನುಜೆ ಮುಗಿದು ಪಾಣಿಯನು ಗುರು ಮಹಿಪತಿ
ಪ್ರಾಣನೊಲಿದುಪ್ಪವಡಿ ಸಾ ಹರಿಯೇ 9