ಪರಿ ಬಹಳ
ನಿಷ್ಠುರದ ವಚನಗಳನಾಡುವರು ಜನರು ಪ
ಎಷ್ಟು ತಪವನೆ ಮಾಡಿ ಪಡೆದೆನೊ ನಾನಿನ್ನ
ಕಷ್ಟವಾಯಿತು ನಿಂದೆ ನುಡಿಯ ಕೇಳುವುದು ಅ.ಪ
ಕೊಂಡು ಪೋಗಲಿ ಬೆಣ್ಣೆ ಪಾಲು ಧದಿ ಭಾಂಡಗಳ
ದುಂಡು ನಗುಮೊಗ ಚೆಲುವ ನಿನ್ನ ಮಗನು
ಕಂಡರೆಮ್ಮನು ಮೋರೆ ತಿರುಗಲೇಕೆ ಇಂಥಾ
ಪುಂಡು ಹುಡುಗನೆ ನಿನ್ನ ಮಗನೆಂದು ದೂರುವರು 1
ಮುರಳಿ ನಾದವ ಕೇಳಿ ಮರೆತು ಮೇವನು ಎಮ್ಮ
ತುರುಕರುಗಳೆಲ್ಲ ಬಲು ಕೃಶವಾದವಮ್ಮ
ಹರಿವ ಯಮುನಾಜಲದೊಳ್ ಆದ ಅವಿವೇಕವನು
ಅರುಹಲೆಮ್ಮಯ ಮನವು ಜರಿವುದೆಂದಾಡುವರು 2
ಸಂಸಾರ ಮೋಹವನು ತೊರೆದು ಎನ್ನಲಿ ಮನದ
ಸಂಶಯವ ಬಿಡಿ ಬಿಡಿ ಪ್ರಸನ್ನರಾಗಿರಿ ಎಂದ
ಧ್ವಂಸವಾಯಿತು ಎಮ್ಮ ಅಭಿಮಾನ ಇವ ಚಂದ್ರ
ವಂಶಕೆಂತಹ ಕೀರ್ತಿ ತಂದನೆಂದಾಡುವರು 3