ಪಾಲಿಸೆ ಸರಸ್ವತಿ ಪಾಲಿಸೆ ಪಾಲಿಸೆ ನಿನ್ನಯ ಪಾರಿಗೆ ಬಂದೆನುಕಾಲಕಾಲಕೆ ನಿನ್ನಯ ಕಾಲಿಗೆರಗುವೆ ಪಾಲಿಸೆ ಪ.
ಆದಿ ಬ್ರಹ್ಮನರಾಣಿಯೆ ವೇದಕ್ಕ ಭಿಮಾನಿಯೆಮೋದ ಗಾಯನ ಕುಶಲಳೆಮೋದ ಗಾಯನ ಕುಶಲಳೆ ಸರಸ್ವತಿ ನೀ ದಯಮಾಡಿ ಮತಿಯ ಕೊಡು 1
ಹೊನ್ನವರೆ ಹೊಸ ಕಪ್ಪು ಬೆನ್ನಿನ ಮ್ಯಾಲಿನ ಹೆರಳುಕಿನ್ನರಿ ನಿನ್ನ ಬಲಗೈಯಕಿನ್ನರಿ ನಿನ್ನ ಬಲಗೈಯ್ಯಲಿ ಹಿಡಕೊಂಡುಖನಿ ಬಾ ನಮ್ಮ ವಚನಕ್ಕೆ 2
ಮಿತ್ರಿ ಸರಸ್ವತಿಗೆ ಮುತ್ತಿನ ಉಡಿಯಕ್ಕಿಮತ್ತೆ ಮಲ್ಲಿಗೆಯ ನೆನೆದಂಡೆಮತ್ತೆ ಮಲ್ಲಿಗೆಯ ನೆನೆದಂಡೆ ತಂದಿದ್ದೆಪ್ರತ್ಯಕ್ಷವಾಗ ಸಭೆಯೊಳು3
ಅರಳು ಮಲ್ಲಿಗೆ ನೆನೆದಂಡೆ ತಂದಿಹೆತಡೆಯದೆ ನಮಗೆ ವರವ ಕೊಡು 4
ಗುಜ್ಜಿ ಸರಸ್ವತಿಗೆ ಗೆಜ್ಜೆ ಸರಪಳಿಯಿಟ್ಟು ವಜ್ರಮಾಣಿಕ್ಯ ದಾಭರಣವಜ್ರಮಾಣಿಕ್ಯ ದಾಭರಣ ಭೂಷಿತಳಾಗಿನಿರ್ಜರೊಳುತ್ತಮಳೆ ನಡೆ ಮುಂದೆ 5
ಹರದಿ ಸರಸ್ವತಿ ಸರಿಗೆಸರಪಳಿಯಿಟ್ಟುಜರದ ಸೀರೆಯನೆ ನಿರಿದುಟ್ಟು ಜರದ ಸೀರೆಯನೆ ನಿರಿದುಟ್ಟು ಬಾರಮ್ಮದೊರೆ ರಾಮೇಶನ ಅರಮನೆಗೆ6