ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ವರದೇ ಕಾರುಣ್ಯ ಶರಧೇ ಕರೆದೆನ್ನ ತವ ಸನ್ನಿಧಿಯಲಿಟ್ಟು ಪೊರೆಯೇ ಪ ವರದೆ ವರದೇ ಎಂದು ಕರೆದ ಮಾತ್ರದಲಿ ವಗ್ದುರಿತಗಳ ಪರಿಹರಿಸಿ ಪೊರೆವ ನೀನು ಕರಣ ಶುದ್ಧಿಯಲಿ ಸಂದರುಶನಭಿವಾದನವ ವಿರಚಿಸುವ ಮಾನವಗೆ ಪರಮ ಸೌಖ್ಯವನೀವೆ 1 ಸ್ನಾನ ಸಂಧ್ಯಾನ ಜಪ ಧ್ಯಾನಾರ್ಚನೆಯ ಮಾಳ್ಪ ಮಾನವರಿಗನುದಿನದಲೇನು ಫಲವೋ ಸಾನುರಾಗದಿ ಒಲಿದು ನೀನಿತ್ತು ಪಾಲಿಸಿದೆ ಆನರಿಯೆ ವಾರಿನಿಧಿ ರಾಣಿ ಕಲ್ಯಾಣಿ 2 ಕರುಣಿಸೆನಗಿದನೆ ವರ ವರವ ಬೇಡುವೆ ನಿನಗೆ ಹರಿಗುರುಗಳಲಿ ಭಕುತಿ ಪರಮ ಜ್ಞಾನ ಮರುತಾಂತರಾತ್ಮಕ ಜಗನ್ನಾಥ ವಿಠಲ ಒಂ ದರೆಘಳಿಗೆ ಬಿಡದೆ ಪೊಂದಿರಲಿ ಮನ್ಮನದಿ 3
--------------
ಜಗನ್ನಾಥದಾಸರು