ಒಟ್ಟು 2 ಕಡೆಗಳಲ್ಲಿ , 1 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಲೋಕನೀತಿ (ಆ) ಇರುವುದೆಲ್ಲ ಮನೆಯೊಳಗಿದ್ದರೆ ಆಡಿಗೆಗೆ ಯಾತಕ್ಕೆ ತಡವಾಗೋದು | ಪ ತರಬೇಕೇಂದು ನೂರು ತಡವೆ ನಾ ನುಡಿದರು ಅರಿಯದವರ ಪರಿತಿರುಗುತ್ತಲಿರುವದು ಅ.ಪ ಮನೆ ಮನೆಯಲಿವಂದು ಮಾನಾರ್ಧಮಾನಗಳು ಮೆಣಸಿನಪುಡಿ ಉಪ್ಪು ಅಕ್ಕಿ ಸಾಲ ದಿನ ದಿನ ಮಧ್ಯಾಹ್ನ ತಿರುಗಿದ ಮೇಲೆ ಮನೆಗೆ ಬಂದು ಹಸಿವೆನುತ ಪೇಳುವದು 1 ಎಣ್ಣೆವಗ್ಗರಣೆಯಲ್ಲದೆ ಕಾಣೆನಭಿಗಾರ ಮುನ್ನೆ ಪಿತ್ಥ ಹೆಚ್ಚಿ ತಲೆ ನೋಯ್ವುದು ನಿನ್ನೆಮೊನ್ನೆ ಹೇಳಿದುದಕೆ ಹೊಡೆಸಿಕೊಂಡೆ ದೊಣ್ಣೆಪೆಟ್ಟಿನಿಂದ ಬೆನ್ನು ಬಾತಿರುವದು 2 ವರುಷಕ್ಕಾಗುವ ಮಟ್ಟಿಗೆಲ್ಲಾ ಪದಾರ್ಥ ಶೇ- ಖರವ ಮಾಡುವುದು ಈ ಮನೆಯೊಳಿಲ್ಲಾ ಹಿರಿಯರಿಂದ ಬಂದ ಸಂಪ್ರದಾಯವಿದೇನೊ ಇಂಥಾಮನೆಯ ಸೇರಿ ಈ ಸುಖ ಪಡುವೆ 3 ಮದುವೆಯಲ್ಲಿದ್ದದ್ದು ಪ್ರಸ್ತದೊಳಗೆಯಿಲ್ಲ ಬದಲು ಸೀರೆಯು ನಾನುಟ್ಟರಿಯೆ ವಿಧಿಲಿಖಿತವು ತಪ್ಪುವುದೆಯೆಂದಿಗಾದರು ವದರಿ ಕೊಂಡರೆಯೇನು ಇದರೊಳು ಫಲವುಂಟು 4 ಜ್ಞಾನ ಶೂನ್ಯರು ಮನೆಯೊಳಿಹರೆಲ್ಲರು ಈ ನರಜನ್ಮವು ಇಷ್ಟಕ್ಕೆಸಾಕೆಂದು ಧೇನಿಸಿ ಗುರುರಾಮವಿಠಲನ ಬೇಡುವೆ 5
--------------
ಗುರುರಾಮವಿಠಲ
ಶಿಸ್ತಿಗೆ ಅಲಂಕಾರವು ಪ ಗೃಹಸ್ಥರಲ್ಲಿ ವ್ಯಾಜ್ಯವು ನಾಸ್ತಿ ಭಕ್ಷ್ಯ ಭೋಜ್ಯವು ಅ.ಪ ನೀರು ತುಪ್ಪ ಬಡಿಸುತ 1 ಹಪ್ಪಳ ಮುರಿದು ಹಾಕಿಸಿ ಅತಿಥಿಗಳನು ನೂಕಿಸಿ ತುಪ್ಪದ ಸೌಟು ತೋರಿಸಿ ಉಪ್ಪು ಚಟ್ನಿ ಹೆಚ್ಚಿಸಿ 2 ಮೂರು ಗಂಟೆಯೂಟವು ಮೂಢತನದೋಡಾಟವು ವೋರೆ ವೋರೆ ನೋಟವು ಸಾರು ಅನ್ನಾ ಕಾಟವು 3 ಎಣ್ಣೆ ವಗ್ಗರಣೆ ಎಲ್ಲಕು ಅನ್ನ ಹೊತ್ತಿ ಇರುವುದು ಸನ್ನೆ ಸೈಯಿಗೆಯೇ ಬಲ 4 ಸಾಲದಡಿಗೆ ಕಾಯಿಪಲ್ಯ ಬೇಯಲಿಲ್ಲ ವೊಂದಾದರು ರಾಯ ಗುರುರಾಮವಿಠಲ ಬಲ್ಲ ಉ- ಪಾಯಗಾರರು ಬೀಗರು 5
--------------
ಗುರುರಾಮವಿಠಲ