ಜಯ ಜಯ ಶ್ರೀಹರಿಪ್ರಿಯೆ ಮಹಾ-
ಭಯಹರೆ ಜಗದಾಶ್ರಯೆ
ಲಯವರ್ಜಿತ ನಿತ್ಯಾತ್ಮೆ ಚಿನ್ಮಯೆ
ಜಯಶೀಲೆ ನಿರಾಮಯೆ 1
ನಿತ್ಯಮುಕ್ತಿ ನಿರ್ವಿಕಾರೆ ನಿಜ-
ಭೃತ್ಯನಿಚಯ ಮಂದಾರೆ
ಪ್ರತ್ಯಗಾತ್ಮ ಹರಿಭಕ್ತಿರಸಪೂರೆ
ಸತ್ವಾದಿಗುಣವಿದೂರೆ 2
ಲಕ್ಷ್ಮೀನಾರಾಯಣಿ ಹರಿ-
ವಕ್ಷಸ್ಥಲವಾಸಿನಿ
ಅಕ್ಷರರೂಪಿಣಿ ಬ್ರಹ್ಮಾಂಡಜನನಿ
ಸುಕ್ಷೇಮಪ್ರದಾಯಿನಿ 3